ನ್ಯಾಯ ದೊರಕಿಸಲು ಮನವಿ


ಶಿರಹಟ್ಟಿ,ಜ.20: ತಾಲುಕಿನ ಛಬ್ಬಿ ತಾಂಡಾದ ರೈತರು ಬೆಳೆದ ಮೆಕ್ಕಜೋಳವನ್ನು ಖಾಸಗಿ ಖರೀದಿಗಾರರು ಖರೀದಿ ಮಾಡಿಕೊಂಡು ರೈತರಿಗೆ ಬರಬೇಕಾದ ಹಣವನ್ನು ಕಳೆದ ಎರಡು ತಿಂಗಳಿಂದ ಹಣ ಕೊಡದೇ ಸತಾಯಿಸುತ್ತಿದ್ದಾರೆ.ಅತೀವೃಷ್ಠಿಯಿಂದ ಕಂಗಾಲಾಗಿರುವ ರೈತರು ಅಲ್ಪಸ್ವಲ್ಪ ಬಂದ ಬೆಳೆಯನ್ನು ಮಾರಾಟ ಮಾಡಿದ್ದಾರೆ. ಇದರಿಂದ ರೈತರು ಬಾರೀ ಸಂಕಷ್ಠವನ್ನು ಎದುರಿಸುವಂತಾಗಿದೆ.ಆದ್ದರಿಂದ ಖರೀದಿಗಾರನನ್ನು ವಿಚಾರಿಸಿ ನಮಗೆ ನ್ಯಾಯ ಒದಗಿಸಬೇಕೆಂದು ಮುಖಂಡರಾದ ಮಹೇಶ ಲಮಾಣಿ, ಜಾನು ಲಮಾಣಿ ಅಗ್ರಹಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗಂಗವ್ವ ಅಂಗಡಿ, ಚನ್ನಪ್ಪ ಪವಾರ, ಕೇಶಪ್ಪ ಲಮಾಣಿ, ಕೊಟ್ರೇಶ ಲಮಾಣಿ, ಸಕ್ರಪ್ಪ ಲಮಾಣಿ, ರವಿ ಲಮಾಣಿ, ಶಂಕ್ರಪ್ಪ ಲಮಾಣಿ, ಮಂಜುನಾಥ ಭಜೆಂತ್ರಿ, ಮಾನಪ್ಪ ನಾಯಕ, ರಾಮಪ್ಪ ಲಮಾಣಿ, ಮಲ್ಲೇಶ ಲಮಾಣಿ, ಪಾಂಡಪ್ಪ ಲಮಾಣಿ, ದರ್ಮಪ್ಪ ಪವಾರ, ತಿಪ್ಪಣ್ಣ ಲಮಾಣಿ, ಮುಂತಾದವರು ಉಪಸ್ಥಿತರಿದ್ದರು.