ನ್ಯಾಯಾಲಯ ಸಿಬ್ಬಂದಿಗಳಿಗೆ ಲಸಿಕೆ ಅಭಿಯಾನ

ಧಾರವಾಡ,ಮೇ29:ಧಾರವಾಡ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ನ್ಯಾಯಾಧೀಶರು ಮತ್ತು ನ್ಯಾಯಾಲಯದ ಸಿಬ್ಬಂದಿಗಳಿಗೆ ಲಸಿಕಾ ನೀಡಲಾಯಿತು. ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಉಮೇಶ ಅಡಿಗ ಅವರು ಲಸಿಕಾರಣದ ಅಭಿಯಾನಕ್ಕೆ ಚಾಲನೆ ನೀಡಿದರು.
ಪ್ರಧಾನ ಹಿರಿಯ ನ್ಯಾಯಾಧೀಶ ಹಾಗೂ ಸಿಜೆಎಂ ಸಂಜಯ ಗುಡಗುಡಿ, ವ್ಯೆದ್ಯಾಧಿಕಾರಿಗಳಾದ ಡಾ. ಕೆ.ಎನ್. ತನುಜಾ, ಡಾ. ಕವಿತಾ ಮತ್ತು ಅವರ ಸಿಬ್ಬಂಧಿ ಹಾಜರಿದ್ದು ಅಭಿಯಾನವನ್ನು ಯಶಸ್ವಿಗೂಳಿಸಿದರು. 120 ಕ್ಕೂ ಹೆಚ್ಚು ಸಿಬ್ಬಂದಿಗಳು ಹಾಗೂ ನ್ಯಾಯಾಧೀಶರು ಮೊದಲ ಡೋಸ್ ಲಸಿಕೆ ಪಡೆದರು.