ನ್ಯಾಯಾಲಯ ವಿಚಾರಣೆಯ ಪೂರ್ಣಮಾಹಿತಿ ನೀಡುವುದು ಪತ್ರಿಕಾಧರ್ಮ:ತೇಲ್ಕೂರ

ಕಲಬುರಗಿ ಮೇ 16:ಕಳೆದ ಎರಡು ದಿನಗಳಿಂದ ಮಾಧ್ಯಮಗಳಲ್ಲಿ ಯುವ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಬಿ.ವಿ. ವಿಚಾರಣೆಯ ಕುರಿತು ಬಿಜೆಪಿ ಮುಖಂಡರ ಮೇಲೆ ಗೂಬೆ ಕೂರಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆಸಲ್ಪಡುತ್ತಿರುವುದು ಅತ್ಯಂತ ಖಂಡನೀಯ ಎಂದು ರಾಜ್ಯ ಬಿಜೆಪಿ ವಕ್ತಾರರಾದ ರಾಜಕುಮಾರ ಪಾಟೀಲ ತೇಲ್ಕೂರ ಶಾಸಕರು ಸೇಡಂ ಅವರು ತಿಳಿಸಿದ್ದಾರೆ.
ದೆಹಲಿಯ ಉಚ್ಚ ನ್ಯಾಯಾಲಯದ ಆದೇಶದಂತೆ ಕೋವಿಡ್ ನಿರ್ವಹಣೆಯ ಸಂದರ್ಭದಲ್ಲಿ ಕೋವಿಡ್ ಔಷಧಿ ಮತ್ತು ಇತರ ಸೌಲಭ್ಯಗಳ ಅಕ್ರಮ ವಿತರಣೆಗೆ ಸಂಬಂಧಿಸಿ ವಿಚಾರಣೆ ನಡೆಸುವಂತೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶಿಸಿದ ಹಿನ್ನೆಲೆಂiÀiಲ್ಲಿ ತನಿಖೆ ನಡೆಸಲಾಗುತ್ತಿದ್ದು, ಭಾಜಪಾದ ದೆಹಲಿಯ ಸಂಸದ ಗೌತಂ ಗಂಭೀರ್ ಸೇರಿದಂತೆ ಇನ್ನೂ ಅನೇಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ, ಮಾಧ್ಯಮಗಳು ನಿಜಾಂಶವನ್ನು ಬಚ್ಚಿಟ್ಟು ಕೇವಲ ಯುವ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಅವರ ಮೇಲೆ ರಾಜಕೀಯ ದುರುದ್ದೇಶದಿಂದ ವಿಚಾರಣೆ ನಡೆಸಲಾಗುತ್ತಿದೆ ಎನ್ನುವ ಸುದ್ದಿಯನ್ನು ಮಾತ್ರ ಪ್ರಕಟಿಸುತ್ತಿರುವುದು ವಿಷಾದನೀಯ ಮತ್ತು ಖಂಡನೀಯ ಎಂದಿದ್ದಾರೆ.
ಕೋವಿಡ್ ಔಷಧಿ ಮತ್ತಿತರ ಸೌಲಭ್ಯಗಳ ಅಕ್ರಮ ವಿತರಣೆಗೆ ಸಂಬಂಧಿಸಿ ಈ ವಿಚಾರಣೆ ನಡೆಸುತ್ತಿರುವುದಾಗಿ ದೆಹಲಿ ಪೆÇಲೀಸ್ ಅಪರಾಧ ಪತ್ತೆ ವಿಭಾಗವು ಈಗಾಗಲೇ ಸ್ಪಷ್ಟಪಡಿಸಿದೆ. ಡಾ. ದೀಪಕ್ ಸಿಂಗ್ ಅವರು ಸಲ್ಲಿಸಿದ ರಿಟ್ ಪಿಟಿಷನ್ ಆಧಾರದಲ್ಲಿ ದೆಹಲಿ ಹೈಕೋರ್ಟ್ ನಿರ್ದೇಶನದಂತೆ ಹಲವರ ವಿಚಾರಣೆ ನಡೆಸಲಾಗುತ್ತಿದೆ ಎಂದೂ ಅದು ತಿಳಿಸಿರುವುದಾಗಿ ರಾಜಕುಮಾರ ಪಾಟೀಲ ತೇಲ್ಕೂರ ಅವರು ವಿವರಿಸಿದ್ದಾರೆ.
ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈ ಕುರಿತಾಗಿ ಸಮಗ್ರ ತನಿಖೆ ನಡೆಸುವಂತೆ ಅಪರಾಧ ಪತ್ತೆ ದಳಕ್ಕೆ ದೆಹಲಿ ಪೆÇಲೀಸ್ ಕಮೀಷನರ್ ಎಸ್.ಎನ್.ಶ್ರೀವಾತ್ಸವ ಅವರು ಸೂಚಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಈ ಸಂಬಂಧ ಶ್ರೀನಿವಾಸ್ ಬಿ.ವಿ. ಅವರಲ್ಲದೆ ಆಪ್ ಮುಖಂಡ ದಿಲೀಪ್ ಪಾಂಡೆ, ಬಿಜೆಪಿ ಮುಖಂಡರಾದ ಗೌತಂ ಗಂಭೀರ್ ಹಾಗೂ ಇತರರನ್ನು ಪ್ರಶ್ನಿಸಲಾಗಿದೆ ಎಂದು ಪೆÇಲೀಸ್ ಕಮೀಷನರ್ ತಿಳಿಸಿರುತ್ತಾರೆ.
ಕೊರೋನಾ ಮಹಾಮಾರಿಯ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ರೀತಿ ಅರ್ಧ ಸತ್ಯವನ್ನು ಮಾತ್ರ ತಿಳಿಸಿ ಜನತೆಗೆ ತಪ್ಪು ಸಂದೇಶ ತಲುಪಿಸುವುದರ ಹಿಂದೆ ಇರುವ ಷಡ್ಯಂತ್ರವನ್ನು ಖಂಡಿಸುತ್ತಾ ಮಾಧ್ಯಮಗಳು ಪತ್ರಿಕಾ ಧರ್ಮವನ್ನು ಪಾಲಿಸಿ ಸತ್ಯ ಸಂಗತಿಗಳನ್ನು ಮಾತ್ರ ಪ್ರಕಟಿಸಬೇಕು ಎಂದು ಅವರು ಆಗ್ರಹಿಸಿರುತ್ತಾರೆ.