ನ್ಯಾಯಾಲಯಗಳಲ್ಲಿರುವ ನಿವೃತ್ತ ಅಧಿಕಾರಿಗಳ-ಸಿಬ್ಬಂದಿಗಳ ಪ್ರಕರಣ ತ್ವರಿತ ವಿಲೇವಾರಿಗೆ ಆಗ್ರಹ

ವಿಜಯಪುರ, ಡಿ.21:ನ್ಯಾಯಾಲಯಗಳಲ್ಲಿರುವ ನಿವೃತ್ತ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಪ್ರಕರಣ ವಿಲೇವಾರಿಗೆ ವಿಳಂಬ ಮಾಡದೇ ನ್ಯಾಯ ದೊರಕಿಸಿಕೊಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ನಾಗಣ್ಣ ಗಣಜಲಖೇಡ ಆಗ್ರಹಿಸಿದರು.

ಇಲ್ಲಿಯ ಹೊರವಲಯದ ಖಾಸಗಿ ಹೊಟೆಲ್‍ನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿವೃತ್ತ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸೇವಾ ನಿವೃತ್ತಿ ಹೊಂದಿದ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಬಾಕಿ ಇರುವ ಪ್ರಕರಣಗಳಲ್ಲಿ ದೊರಕಬೇಕಾದ ಆರ್ಥಿಕ ಸೌಲಭ್ಯವನ್ನು ಕೇಂದ್ರ ಕಚೇರಿ ನೀಡುವಂತೆ ಅವರು ಮನವಿ ಮಾಡಿದರು.

ವಿಶ್ರಾಂತ ಜೀವನದಲ್ಲಿರುವ ನಿವೃತ್ತ ಅಧಿಕಾರಿಗಳು ಹಾಗೂ ಸಿಬ್ಬಂಧಿ ವರ್ಗದವರು ಉತ್ತಮ ಆರೋಗ್ಯ ಕಾಪಾಡಿಕೊಳ್ಳು ವಂತೆ ಅವರು ಸಲಹೆ ಮಾಡಿದರು.

ಸಮ್ಮೇಳನದಲ್ಲಿ ಉಪನ್ಯಾಸ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಕವಿತಾ ದೊಡಮನಿ ಮಾತನಾಡಿ, ತಮ್ಮ ಇಲಾಖೆಯಿಂದ ಹಿರಿಯ ನಾಗರಿಕರಿಗೆ ದೊರಕುವ ಸೌಲಭ್ಯಗಳ ಕುರಿತು ವಿವರಿಸಿದರಲ್ಲದೇ ಅವುಗಳ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿ, ವಿಶ್ರಾಂತ ಜೀವನವನ್ನು ನೆಮ್ಮದಿಯಿಂದ ಸಾಗಿಸುವಂತೆ ಕಿವಿಮಾತು ಹೇಳಿ ದರು.

ಸಮ್ಮೇಳನದಲ್ಲಿ ನಿವೃತ್ತ ಅಧಿಕಾರಿಗಳಾದ ಮಲ್ಲಿಕಾರ್ಜುನ ರೆಡ್ಡಿ ಹಾಗೂ ಬಿ ಎಸ್ ಬೆಟಗೇರಿ ಅವರನ್ನು ಸನ್ಮಾನಿಸಲಾಯಿತು.

ಈ ಸಮ್ಮೇಳನದಲ್ಲಿ ಕಲಬುರ್ಗಿ, ಬೆಂಗಳೂರು, ಬೆಳಗಾವಿ, ಧಾರವಾಡ, ಯಾದಗಿರಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ಕೇಂದ್ರ ಕಚೇರಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಿವೃತ್ತರಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

ಸಮ್ಮೇಳನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ ಕೆ ಚವ್ಹಾಣ, ಬೆಂಗಳೂರು ಕೇಂದ್ರ ಕಚೇರಿ ನಿವೃತ್ತ ಅಧಿಕಾರಿ ವಾಸುದೇವ, ಪರಮೇಶ್ವರಪ್ಪ, ಶಿವಸ್ವಾಮಿ, ರಮೇಶ ಹಾಲಭಾವಿ, ನಂಜೇಗೌಡ, ಬಿ. ಎಸ್ ಮೇಟಿ, ಕೆ. ಎಚ್. ಸಂದಿಮನಿ ಸೇರಿದಂತೆ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ ಸ್ವಾಗತಿಸಿದರು. ಜಿಲ್ಲಾ ವಿಕಲಚೇತನ ನಿವೃತ್ತ ಅಧಿಕಾರಿ ವಿಠ್ಠಲ ಉಪಾಧ್ಯೆ ಪ್ರಾರ್ಥಿಸಿದರು. ನಿವೃತ್ತ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬಿ. ಎಸ್. ಬೆಟಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಲಾಖೆಯ ನಿವೃತ್ತ ಅಧೀಕ್ಷಕ ಬಿ ಸಿ ಗೋವರ್ಧನ ವಂದಿಸಿದರು. ಕೆ.ವೈ. ಉಕ್ಕಲಿ ನಿರೂಪಿಸಿದರು.