ನ್ಯಾಯಾಧೀಶರ ಭೇಟಿ: ಪರಿಶೀಲನೆ

(ಸಂಜೆವಾಣಿ ವಾರ್ತೆ)
ಬ್ಯಾಡಗಿ,ನ29: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಬಸ್ ನಿಲ್ದಾಣಗಳಿಗೆ ಮಂಗಳವಾರ ಸ್ಥಳೀಯ ದಿವಾಣಿ ನ್ಯಾಯಾಧೀಶರಾದ ಸುರೇಶ ವಗ್ಗನವರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಾರ್ವಜನಿಕರಿಗೆ ಆಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಎಲ್ಲಾ ವಾರ್ಡಗಳಿಗೆ ತೆರಳಿ ಒಳ ಮತ್ತು ಹೊರರೋಗಿಗಳ ಮಾಹಿತಿ ಪಡೆದರಲ್ಲದೇ, ಸರಿಯಾದ ರೀತಿಯಲ್ಲಿ ಚಿಕಿತ್ಸೆ ದೊರೆಯುತ್ತಿರುವ ಬಗ್ಗೆ ರೋಗಿಗಳು ವೈದ್ಯರು ಹಾಗೂ ಸಿಬ್ಬಂದಿಗಳಿಂದ ವಿವರವಾದ ಮಾಹಿತಿ ಪಡೆದರು.

ಆಸ್ಪತ್ರೆಯಲ್ಲಿರುವ ಫಾರ್ಮಸಿಗೆ ಭೇಟಿ ನೀಡಿದ ಅವರು, ಪ್ಯಾಕೆಟ್‍ಗಳ ಮೇಲೆ ನಮೂದಿಸಿರುವ ಔಷಧಿಯ ಅಂತಿಮ ದಿನಾಂಕ (ಎಕ್ಸಪೈರ್ ಡೇಟ್) ಪರಿಶೀಲಿಸಿದರು. ಔಷಧಿ ಬಳಕೆ ಮಾಡುವ ದಿನಾಂಕ ಮುಗಿದಂತಹುಗಳನ್ನು ಪ್ರತ್ಯೇಕ ಸ್ಥಳದಲ್ಲಿ ಸಂಗ್ರಹಿಸಿಡಬೇಕು, ಇಲ್ಲವಾದರೆ ಯಾವ ಔಷಧಿ ಕೊಡಬೇಕೆಂಬುದು ತಮಗೂ ಸಹ ತಿಳಿಯುವುದಿಲ್ಲ ಮುಂದೆ ಭೇಟಿ ನೀಡುವ ಸಂದರ್ಭದಲ್ಲಿ ಅಂತಿಮ ದಿನಾಂಕ ಮುಗಿದ ಔಷಧಿಗಳ ಕೊಠಡಿಯನ್ನು ಬೇರೆ ಮಾಡುವಂತೆ ಸೂಚಿಸಿದರು.

ನಂತರ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಪುಟ್ಟರಾಜ ಕಾರ್ಯಾಲಯಕ್ಕೆ ತೆರಳಿ, ವೈದ್ಯಕೀಯ ವ್ಯವಸ್ಥೆ ಕುರಿತು ಕೆಲಕಾಲ ಚರ್ಚಿಸಿ ಮತ್ತಷ್ಟು ಮಾಹಿತಿ ಪಡೆದರು, ಈ ವೇಳೆ ಆಸ್ಪತ್ರೆಯ ಸ್ವಚ್ಛತೆ, ವೈದ್ಯಕೀಯ ಸೇವೆ, ಸಿಬ್ಬಂದಿಗಳ ಕಾರ್ಯ ವೈಖರಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರಲ್ಲದೇ, ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.
ಪಟ್ಟಣದ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಅವರು, ಶೌಚಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲಿ ಹೊರಬರುತ್ತಿರುವ ದುರ್ವಾಸನೆ ಮನಗಂಡು ಘಟಕ ವ್ಯವಸ್ಥಾಪಕರಿಗೆ ನೊಟೀಸ್ ನೀಡುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ನ್ಯಾಯಾಲಯದ ಸಿಬ್ಬಂದಿಗಳಾದ ಪ್ರವೀಣ ಗಟ್ಟಿಮನಿ, ಕುಸಮಾ ಕಾಂಬ್ಳೆ, ಮನೋಜ ದೇಸಾಯಿ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಹಾಗೂ ಪೆÇಲೀಸ್ ಸಿಬ್ಬಂದಿಯವರು ಉಪಸ್ಥಿತರಿದ್ದರು.