ನ್ಯಾಯಾಧೀಶರಿಂದ 2021ರ ಡೈರಿ ಬಿಡುಗಡೆ

ಮೈಸೂರು:ಡಿ:26: ಸಂವಿಧಾನದಲ್ಲಿ ಉದಾತ್ತ ವೃತ್ತಿಯೆಂದರೆ ಎಂದರೆ ಅದು ವಕೀವ ವೃತ್ತಿ ಎಂದು ಕರ್ನಾಟಕ ಉಚ್ಛನ್ಯಾಯಾಲಯ ಬೆಂಗಳೂರು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷೀತ್ ತಿಳಿಸಿದರು.
ನಗರದ ವಕೀಲರ ಸಂಘದ ಆವರಣದಲ್ಲಿ ಮೈಸೂರು ವಕೀಲರ ಸಂಘ ಹಾಗೂ ಲಾಗೈಡ್ ಕನ್ನಡ ಕಾನೂನು ಮಾಸ ಪತ್ರಿಕೆಯ ವತಿಯಿಂದ ಹಮ್ಮಿಕೊಂಡಿದ್ದ 2021ನೇ ಸಾಲಿನ ಡೈರಿ ಬಿಡುಗಡೆ ಸಮಾರಂಭದಲ್ಲಿ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಮೈಸೂರು ವಕೀಲರ ಸಂಘ ಸುಮಾರು 100 ವರ್ಷಗಳ ಸಂಸ್ಥೆ. ಇಲ್ಲಿಂದ ವಕೀಲರಾಗಿ ಹೊರಹೊಮ್ಮಿದವರು ಬಹಳ ಉತ್ತಮವಾಗಿ ಸೇವೆಯನ್ನು ಸಲ್ಲಿಸಿಕೊಂಡು ಬರುತ್ತಿದ್ದಾರೆ. ವಕೀಲರ ದಿನನಿತ್ಯದ ಜೀವನದಲ್ಲಿ ಬಹಳ ಮುಖ್ಯ. ವಕೀಲರಾದವರು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದ ಬೇಕು ವಿಚಾರಗಳನ್ನು ತಿಳಿದುಕೊಳ್ಳಬೇಕು. ವಕೀಲರಾದ ಮಾತ್ರಕ್ಕೆ ಕಲಿಯುವುದು ಮುಗಿಯಿತು ಎಂದಲ್ಲ, ಪ್ರನಿತ್ಯ ಹೊಸ ಹೊಸ ಪ್ರಖರಣಗಳು ನಿಮಗೆ ಹೊಸ ಹೊಸ ಪಾಠವನ್ನು ಕಲಿಸುತ್ತದೆ. ಕೇಸ್‍ಗಳನ್ನು ವಾದ ಮಾಡಿಗೆಲ್ಲುವುದೇ ವಕೀಲ ವೃತ್ತಿಯಲ್ಲ, ವಕೀಲನ ಬಳಿ ಬರುವ ಕ್ಲೈಂಟ್‍ಗಳ ಮನಸ್ಥಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು, ಕ್ಲೈಂಟ್‍ನಲ್ಲಿ ಸ್ಥಾನದಲ್ಲಿ ನಿಂತು ಅವರ ನೋವುಗಳನ್ನು ಅರ್ಥೈಸಿಕೊಂಡು ಸಂವಿಧಾನಾತ್ಮಕವಾಗಿ ನ್ಯಾಯ ಕೊಡಿಸುವುದೇ ನಿಜವಾದ ವಕೀವ ವೃತ್ತಿ. ಆರ್ಟಿಲಕ್ 19ಜಿ ಅಡಿಯಲ್ಲಿ ವತ್ತಿ ಅಭ್ಯಾಸದ ವಿಷಯಕ್ಕೆ ಬಂದರೆ ವಕೀವ ವೃತ್ತಿ ಉದಾತ್ತ ವೃತ್ತಿಯಾಗಿದೆ. ಆದ್ದರಿಂದ ಇಲ್ಲಿರುವ ಲಾ ವಿದ್ಯಾರ್ಥಿಗಳು ಹೆಚ್ಚು ವಿಷಯಗಳನ್ನು ತಿಳಿಯಬೇಕು, ಪುಸ್ತಕಗಳನ್ನು ಓದಬೇಕು ಮತ್ತು ಮನಸ್ಥಿತಿಗಳನ್ನು ಅರಿಯುವಲ್ಲಿ ನಿಪುಣರಾಗಬೇಕೆಂದು ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಉಚ್ಛನ್ಯಾಯಾಲಯ ಬೆಂಗಳೂರು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷೀತ್‍ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಲಾಗೈಡ್ ಕನ್ನಡ ಕಾನೂನು ಮಾಸ ಪತ್ರಿಕೆ ಮತ್ತು ಲಾಗೈಡ್ ಕನ್ನಡ ಕಾನೂನು ಬಳಗ ಮೈಸೂರು ಪ್ರಧಾನ ಸಂಪಾದಕ ಹೆಚ್.ಎನ್. ವೆಂಕಟೇಶ್, ಮೈಸೂರು ವಕೀಲ ಸಂಘದ ಅಧ್ಯಕ್ಷ ಆನಂದ್ ಕುಮಾರ್. ಎಸ್, ಕಾರ್ಯದರ್ಶಿ ಶಿವಣ್ಣ, ವಕೀಲ ಹರೀಶ್ ಕುಮಾರ್ ಹೆಗ್ಡೆ ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ವಕೀಲರುಗಳು ಭಾಗವಹಿಸಿದ್ದರು.