ನ್ಯಾಯಾಂಗ ಭಾಷೆ ಸರಳವಾಗಿರಲಿ: ಮೋದಿ

ನವದೆಹಲಿ,ಸೆ.೨೩- ದೇಶದ ನ್ಯಾಯಾಂಗ ಭಾಷೆ, ಸರಳವಾಗಿ ಜನ ಸಾಮಾನ್ಯರಿಗೆ ಅರ್ಥವಾಗುವಂತಿರಬೇಕು ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾಷೆ ಮತ್ತು ಕಾನೂನಿನ ಸರಳತೆಯಿಂದ ನ್ಯಾಯ ವಿತರಣಾ ವ್ಯವಸ್ಥೆ ಮತ್ತಷ್ಟು ಸುಲಭವಾಗಲಿದೆ ಎಂದು ಇಂದಿಲ್ಲಿ ಪ್ರತಿಪಾದಿಸಿದ್ದಾರೆ.
ಈ ಮೊದಲು ಯಾವುದೇ ಕಾನೂನಿನ ಕರಡು ರಚನೆ ತುಂಬಾ ಸಂಕೀರ್ಣವಾಗಿತ್ತು. ಇದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ದತ್ತಾಂಶ ಸಂರಕ್ಷಣಾ ಕಾನೂನನ್ನು ಸರಳೀಕ ಕರಣಕ್ಕೆ ಮೊದಲ ಹೆಜ್ಜೆ ಇಟ್ಟಿದ್ದೇವೆ ಎಂದು ತಿಳಿಸಿದ್ದಾರೆ.
’ಅಂತರರಾಷ್ಟ್ರೀಯ ವಕೀಲರ’ ಸಮ್ಮೇಳನ ೨೦೨೩ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಹೊಸ ಹೊಸ ಕಾನೂನು ತಂದಿದ್ದೇವೆ.ಹೀಗಾಗಿ ಜನ ಸಾಮಾನ್ಯರ ಭಾಷೆಯಲ್ಲಿ ನ್ಯಾಯಾಂಗದ ಭಾಷೆ ಇರಬೇಕು ಎಂದಿದ್ಧಾರೆ.
ತೀರ್ಪಿನ ಆಪರೇಟಿವ್ ಭಾಗಗಳನ್ನು ದಾವೆದಾರರ ಭಾಷೆಯಲ್ಲಿ ಒದಗಿಸಿದ್ದಕ್ಕಾಗಿ ಭಾರತದ ಸರ್ವೋಚ್ಚ ನ್ಯಾಯಾಲಯವನ್ನು ತಾವು ಅಭಿನಂದಿಸುವುದಾಗಿ ಅವರು ತಿಳಿಸಿದ್ಧಾರೆ
ಭಯೋತ್ಪಾದನೆ ನಿಗ್ರಹಕ್ಕೆ ಕಾನೂನು:
ವಿಶ್ವದಲ್ಲಿ ಭಯೋತ್ಪಾದನೆ ಎದುರಿಸಲು ’ಜಾಗತಿಕ ಕಾನೂನು ಚೌಕಟ್ಟು’ ರೂಪಿಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಯೋತ್ಪಾದನೆ ಜೊತೆಗೆ ಸೈಬರ್ ಭಯೋತ್ಪಾದನೆ, ಮನಿ ಲಾಂಡರಿಂಗ್, ಕೃತಕ ಬುದ್ಧಿಮತ್ತೆ ಅಥವಾ ಅದರ ದುರುಪಯೋಗ ಇವುಗಳಿಗೆ ಜಾಗತಿಕ ಚೌಕಟ್ಟು ರೂಪಿಸಬೇಕಾಗಿದೆ. ಇದನ್ನು ಒಂದೇ ಸರ್ಕಾರ ಮಾಡಲು ಸಾಧ್ಯವಿಲ್ಲ. ವಿವಿಧ ದೇಶಗಳ ಕಾನೂನು ಚೌಕಟ್ಟುಗಳು ಒಟ್ಟಿಗೆ ಸೇರುವ ಅಗತ್ಯವಿದೆ ಎಂದಿದ್ದಾರೆ.
ಯಾವುದೇ ದೇಶದ ನಿರ್ಮಾಣದಲ್ಲಿ ಕಾನೂನು, ಭ್ರಾತೃತ್ವ, ಸಹೋದರತೆ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ವರ್ಷಗಳ ಕಾಲ, ನ್ಯಾಯಾಂಗ ಮತ್ತು ವಕೀಲರು ಭಾರತದ ಕಾನೂನು ಮತ್ತು ಸುವ್ಯವಸ್ಥೆಯ ಪೊ?ಷಕರಾಗಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ದೇಶ ಹಲವು ಐತಿಹಾಸಿಕ ಹೆಜ್ಜೆಗಳನ್ನು ಇಡುತ್ತಿರುವ ಅವಧಿಯಲ್ಲಿ ವಕೀಲರ ಸಮ್ಮೇಳನ ನಡೆಯುತ್ತಿದೆ. ಇತ್ತೀಚೆಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿದೆ. ನಾರಿ ಶಕ್ತಿ ವಂದನ್ ಅಧಿನಿಯಮ್ ’ಭಾರತದಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿ’ಗೆ ಹೊಸ ದಿಕ್ಕು ಮತ್ತು ಶಕ್ತಿ ನೀಡಲಿದೆ ಎಂದಿದ್ಧಾರೆ.
ಬಲಿಷ್ಠ ನ್ಯಾಯಾಂಗ ವ್ಯವಸ್ಥೆ ಅಗತ್ಯ:
ಒಂದು ತಿಂಗಳ ಹಿಂದೆ, ಭಾರತ, ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶ ಎನ್ನುವ ಇತಿಹಾಸ ನಿರ್ಮಾಣ ಮಡಿದೆ. ೨೦೪೭ ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಇದಕ್ಕಾಗಿ ಪಕ್ಷಪಾತವಿಲ್ಲದ, ಬಲಿಷ್ಠ ಮತ್ತು ಸ್ವತಂತ್ರ ನ್ಯಾಯಾಂಗದ ಅಗತ್ಯವಿದೆ ಎಂದಿದ್ದಾರೆ
೨೦೪೭ ರವರೆಗೆ ತನ್ನ ಗುರಿಗಳನ್ನು ಸಾಧಿಸಲು ಭಾರತಕ್ಕೆ ಸ್ವತಂತ್ರ ನ್ಯಾಯ ವ್ಯವಸ್ಥೆಯ ಅಗತ್ಯವಿದೆ ಎಂದು ಹೇಳಿದ ಅವರು
ನ್ಯಾಯಾಂಗ, ವಕೀಲರು ಭಾರತದ ನ್ಯಾಯ ವ್ಯವಸ್ಥೆಯ ರಕ್ಷಕರು ಎಂದು ಬಣ್ಣಿಸಿದ್ದಾರೆ
ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಸಚಿವ ಅರ್ಜುನ್ ರಾಮ್ ಮೇಘವಾಲ್ ಮಾತನಾಡಿ, ’ವ್ಯಾಪಾರ ಮಾಡುವುದನ್ನು ಸುಲಭ’ ಖಾತ್ರಿಪಡಿಸುವ ಭಾರತೀಯ ಶಾಸನಬದ್ಧ ನಿಬಂಧನೆಗಳ ಅಗತ್ಯ ಎಂದು ಹೇಳಿದರು
ಉತ್ತಮವಾಗಿ ಕಾರ್ಯನಿರ್ವಹಣೆ
ಅಮೇರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ,ಸಿಂಗಪೂರ ಸೇರಿದಂತೆ ವಿವಿಧ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ನ್ಯಾಯಾಂಗ ನಿರ್ವಹಣೆ ಉತ್ತಮವಾಗಿ ನಡೆಯುತ್ತಿದೆ ಎಂದು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಹೇಳಿದ್ದಾರೆ
’ಅಂತರರಾಷ್ಟ್ರೀಯ ವಕೀಲರ’ ಸಮ್ಮೇಳನದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಭಾರತದಲ್ಲಿ ಈಗಾಗಲೇ ತುಲನಾತ್ಮಕವಾಗಿ ಶಿಶು ಕಾನೂನು ಹೊಂದಿದೆ ವಿವಿಧ ದೇಶಗಳ ನ್ಯಾಯವ್ಯಾಪ್ತಿಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಭಾರತ, ಮಾರಿಷಸ್ ಮತ್ತು ಭೂತಾನ್‌ನಲ್ಲಿ ಸುಪ್ರೀಂ ಕೋರ್ಟ್ ಕಟ್ಟಡಗಳನ್ನು ನಿರ್ಮಿಸುವ ಮೂಲಕ ಪ್ರಮುಖ ಪಾತ್ರವನ್ನು ವಹಿಸಿದೆ.ಇತ್ತೀಚೆಗೆ, ನಾನು ಇದರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದಿದ್ಧಾರೆ.