ಕಲಬುರಗಿ,ಜು.7:”ನ್ಯಾಯಾಂಗ ಪರೀಕ್ಷೆ ಅಥವಾ ಇನ್ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸು ಆಕಾಂಕ್ಷಿಗಳಲ್ಲಿ ಮೂರು ಗುಣಗಳಿರಬೇಕು: ಸ್ಥಿರತೆ, ಕಠಿಣ ಪರಿಶ್ರಮ ಮತ್ತು ವಿಷಯದ ನಿರಂತರ ಅಧ್ಯಯನ.” ಎಂದು ತೆಲಂಗಾಣ ರಾಜ್ಯದ ನಿಯೋಜಿತ ಸಿವಿಲ್ ನ್ಯಾಯಾಧೀಶರಾದ ಹಾಗು ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರ ಮಗಳಾದ ಕುಮಾರಿ ದೀಕ್ಷಾ ಬಿ ಹೇಳಿದರು.
ಅವರು ಕೆಮಿಕಲ್ ಎಂಜಿನಿಯರಿಂಗ್‍ನಲ್ಲಿ ಬ್ಯಾಚುಲರ್ ಆಫ್ ಟೆಕ್ನಾಲಜಿ ಮತ್ತು ಎಲ್‍ಎಲ್‍ಬಿ ಯನ್ನು ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಓದಿದ್ದಾರೆ. ಎರಡೂ ಕೋರ್ಸ್‍ಗಳಲ್ಲಿ ಚಿನ್ನದ ಪದಕ ಗಳಿಸಿದ್ದಾಳೆ. ಇಂದು ಅವರು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕಾನೂನು ವಿಭಾಗದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ “ನೀವು ನ್ಯಾಯಾಂಗ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರೆ ಗೈಡ್ ಮತ್ತು ಇತರ ಶಾರ್ಟ್ ಕಟ್ ವಿಧಾನಗಳನ್ನು ಬಳಸಬೇಡಿ. ಪ್ರಮಾಣಿತ ಪುಸ್ತಕಗಳನ್ನು ಓದಿ ಮತ್ತು ಪರಿಕ್ಷೇ ತಯ್ಯಾರಿಯಲ್ಲಿ ದೂರದೃಷ್ಟಿ ಮತ್ತು ಸಮಗ್ರತೆ ಇರಬೇಕು. ಉತ್ತಮ ಪುಸ್ತಕಗಳ ಜೊತೆಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳ ಮೇಲೆ ಹೆಚ್ಚಿನ ಗಮನಹರಿಸಬೇಕು” ಎಂದು ಅವರು ಹೇಳಿದರು.
ಗೌರವಾನ್ವಿತ ಸಿಯುಕೆ ಕುಲಪತಿ, ಪ್ರೊ.ಬಟ್ಟು ಸತ್ಯನಾರಾಯಣ ಅವರು ಮಾತನಾಡಿ, “ನನ್ನ ಮಗಳ ಯಶಸ್ಸಿನ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ ಮತ್ತು ಎಲ್ಲಾ ವಿದ್ಯಾರ್ಥಿಗಳು ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಪ್ರೋತ್ಸಾಹಿಸುತ್ತೇನೆ. ವಿಶ್ವವಿದ್ಯಾಲಯವು ಕಾನೂನು ವಿದ್ಯಾರ್ಥಿಗಳಿಗೆ ಮತ್ತು ಕಾನೂನು ವಿಭಾಗದ ಅಭಿವೃದ್ಧಿಗೆ ಎಲ್ಲಾ ರೀತಿಯ ಬೆಂಬಲವನ್ನು ನೀಡಲು ಸಿದ್ಧವಾಗಿದೆ. ನಾವು ಕಾನೂನಿನಲ್ಲಿ 5 ವರ್ಷಗಳ ಬ್ಯಾಚುಲರ್ ಪದವಿಯನ್ನು ಪ್ರಾರಂಭಿಸಲಾಗುವುದು” ಎಂದು ಅವರು ಹೇಳಿದರು.
ತೆಲಂಗಾಣ ನ್ಯಾಯಾಂಗ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆಯಾಗಿ ಸಿವಿಲ್ ನ್ಯಾಯಾಧೀಶೆಯಾಗಿ ನೇಮಕಗೊಂಡ ಕುಮಾರಿ ದೀಕ್ಷಾ ಬಿ ಅವರುನ್ನು ಕಾನೂನು ವಿಭಾಗದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾನೂನು ವಿಭಾಗದ ಮುಖ್ಯಸ್ಥರಾದ ಡಾ.ಬಸವರಾಜ ಎಂ.ಕುಬಕಡ್ಡಿ, ಡಾ.ರೇಣುಕಾ ಗುಬ್ಬೇವಾಡ, ಕಾನೂನು ವಿಭಾಗದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.