ನ್ಯಾಯಾಂಗ ನಿಯಂತ್ರಿಸಲು ಕೇಂದ್ರದ ಯತ್ನ

ನವದೆಹಲಿ,ಜ.೧೮- ಕೇಂದ್ರ ಸರ್ಕಾರದ ಇತ್ತೀಚಿನ ನಡೆಗಳು ಮತ್ತು ಆಕ್ಷೇಪಣೆಗಳು ನ್ಯಾಯಾಂಗದ ಮೇಲೆ ಸರ್ಕಾರದ ನಿಯಂತ್ರಣ ಹೇರುವ ಪ್ರಯತ್ನ ಎಂದು ಹೇಳಲಾಗಿದೆ.
ಇದಕ್ಕೆ ಪೂರಕ ಎನ್ನುವಂತೆ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಮತ್ತು ಕೇಂದ್ರ ಕಾನೂನು ಸಚಿವ ಕಿರಿಣ್ ರಿಜಿಜು ಹೇಳಿಕೆಗಳು ಪುಷ್ಠಿ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.
ಜೊತೆಗೆ ಈ ನಡೆಗಳು ಬಲವಾದ ಆಕ್ಷೇಪಣೆಗಳಿಗೂ ಕಾರಣವಾಗಿವೆ. ಈ ರೀತಿಯ ಒತ್ತಡಗಳು ಹೆಚ್ಚಾದರೆ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆ ಆಗಲಿವೆ ಎನ್ನುವ ಮಾತುಗಳು ಕೇಳಿ ಬಂದಿದೆ.
ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ೨೦೧೫ ರಲ್ಲಿ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗದ ಕಾಯ್ದೆ ಸಂಸತ್ತಿನ ಸಾರ್ವಭೌಮತ್ವ ಹೊಂದಿದೆ. ಇದರಲ್ಲಿ ರಾಜಿಯಾಗುವ ಮಾತೇ ಇಲ್ಲ. “ವಿಶ್ವದ ಪ್ರಜಾಸತ್ತಾತ್ಮಕ ಇತಿಹಾಸದಲ್ಲಿ ಸಾಟಿಯಿಲ್ಲದ ರಾಜಿ ಎಂದು ನ್ಯಾಯಾಂಗ ಆಯೋಗದ ರದ್ದತಿ ಬಗ್ಗೆ ಹೇಳಿಕೆ ನೀಡಿದ್ದರು.
ಸಂಸತ್ತಿನ ಸದಸ್ಯರು ನೇರವಾಗಿ ಜನರಿಂದ ಆಯ್ಕೆಯಾಗುತ್ತಾರೆ ಮತ್ತು ರಾಷ್ಟ್ರದ ಇಚ್ಛೆಯನ್ನು ಪ್ರತಿನಿಧಿಸುತ್ತಾರೆ, ಇದು ಪ್ರಜಾಪ್ರಭುತ್ವದಲ್ಲಿ ಸರ್ವೋಚ್ಚ ವಾಗಿರಬೇಕು ಎಂಬ ವ್ಯಾಖ್ಯಾನಕ್ಕೆ ಉಪರಾಷ್ಟ್ರಪತಿ ಹೇಳಿಕೆ ನೀಡಿದ್ದರು.
ಇತರ ಸಂಸ್ಥೆಗಳಲ್ಲಿ ಯಾರು ಇರಬೇಕೆಂದು ಸಂಸತ್ತು ನಿರ್ಧರಿಸಬೇಕು. ಡಿಸೆಂಬರ್ ೭ ರಂದು, ಉಪರಾಷ್ಟ್ರಪತಿಗಳು ಎನ್‌ಜೆಎಸಿಯನ್ನು ರದ್ದುಪಡಿಸಿದ ಸುಪ್ರೀಂ ಕೋರ್ಟ್ “ಸಂಸದೀಯ ಸಾರ್ವಭೌಮತ್ವದ ತೀವ್ರ ರಾಜಿ” ಯ ನಿದರ್ಶನವಾಗಿದೆ ಎಂದು ಹೇಳಿದ್ದರು.
ಸಂವಿಧಾನದ ಮೂಲ ರಚನೆಯ ಕುರಿತು “ಕೇಶವಾನಂದ ಭಾರತಿ ಅವರ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ ಮೂಲಭೂತ ರಚನೆಯ ಕಲ್ಪನೆ ನೀಡಿದೆ. ಸಂಸತ್ತು ಸಂವಿಧಾನವನ್ನು ತಿದ್ದುಪಡಿ ಮಾಡಬಹುದು ಆದರೆ ಅದರ ಮೂಲ ರಚನೆಯನ್ನು ಅಲ್ಲ. ನ್ಯಾಯಾಂಗಕ್ಕೆ ಸರಿಯಾದ ಗೌರವದಿಂದ ವರ್ತಿಸಬೇಕು ಎಂದಿದ್ದರು.
ಇದರ ಬೆನ್ನಲ್ಲೇ ಕೇಂದ್ರ ಕಾನೂನು ಸಚಿವ ಕಿರಣ್
ನ್ಯಾಯಾಧೀಶರನ್ನು ನೇಮಿಸುವುದು ಸರ್ಕಾರದ ಹಕ್ಕು ಎಂದು ಸಂವಿಧಾನದ ಆತ್ಮ ಹೇಳುತ್ತದೆ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರು ಬಂದಿರುವ ಈ ಹೇಳಿಕೆಗಳು ಆಶ್ಚರ್ಯಕರವಾಗಿವೆ. ಪ್ರಜಾಪ್ರಭುತ್ವ ಚುನಾವಣೆ ಮತ್ತು ಬಹುಮತದ ಇಚ್ಛೆಗೆ ಕಾರಣವಾಗುತ್ತದೆ. ವಾಸ್ತವವಾಗಿ, ಪ್ರಜಾಪ್ರಭುತ್ವ ಕೇವಲ ಚುನಾವಣೆಗಳು ಮತ್ತು ಶಾಸಕಾಂಗ ಅಥವಾ ಸಂಸತ್ತಿಗಿಂತ ಹೆಚ್ಚು ಎಂದಿದ್ದಾರೆ.