ನ್ಯಾಯಸಮ್ಮತ ಚುನಾವಣೆ ನಡೆಸಲು ಸಾರ್ವಜನಿಕರ ಸಹಭಾಗಿತ್ವ ಅಗತ್ಯ

ಗದಗ,ಏ 7 : ಯಾವುದೇ ಒಂದು ಚುನಾವಣೆಯು ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳುವಲ್ಲಿ ಹಲವಾರು ಕಠಿಣ ಕ್ರಮ ಹಾಗೂ ಆಧುನಿಕ ತಂತ್ರಾಂಶಗಳ ಬಳಕೆ ಅಗತ್ಯವಾಗಿದೆ. ಈ ಬಾರಿಯ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಯನ್ನು ಜಿಲ್ಲಾದ್ಯಂತ ನಿಷ್ಪಕ್ಷಪಾತ, ಶಾಂತಿಯುತ ಹಾಗೂ ನ್ಯಾಯಸಮ್ಮತವಾಗಿ ಜರುಗಿಸಲು ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಸಹಕಾರ ನೀಡುವ ಮೂಲಕ ಯಶಸ್ವಿಗೊಳಿಸಬೇಕು.ಈ ನಿಟ್ಟಿನಲ್ಲಿ ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಲು ಹಾಗೂ ನೀತಿ ಸಂಹಿತೆ ಕಟ್ಟುನಿಟ್ಟಿನ ಪಾಲನೆಗಾಗಿ ಹಲವಾರು ಕಠಿಣ ಕ್ರಮಗಳನ್ನು ಕೈಗೊಂಡಿದ್ದು ಸಾರ್ವಜನಿಕರು ಕೂಡ ಚುನಾವಣೆ ಕುರಿತಂತೆ ಮಾಹಿತಿ , ದೂರು ನೀಡಲು ಜಿಲ್ಲಾಡಳಿತದಲ್ಲಿ ತೆರೆಯಲಾದ ಸಹಾಯವಾಣಿ ಬಳಸಬಹುದಾಗಿದೆ. ಅಲ್ಲದೇ ಸಿವಿಜಿಲ್ ಆಪ್ ಮೂಲಕವು ಸಾರ್ವಜನಿಕರು ದೂರು ನೀಡುವ ಮೂಲಕ ಚುನಾವಣಾ ಅಕ್ರಮಕ್ಕೆ ಕಡಿವಾಣ ಹಾಕಲು ಸಾಧ್ಯ.

ಜಿಲ್ಲಾಡಳಿತದಲ್ಲಿ ಚುನಾವಣೆಗೆ ಸಂಬಂದಿಸಿದಂತೆ ಕಂಟ್ರೋಲ್ ರೂಂ ಆರಂಭಿಸಲಾಗಿದ್ದು ದಿನದ 24 ಗಂಟೆಯೂ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಚುನಾವಣಾ ಮಾಹಿತಿ ಹಾಗೂ ದೂರುಗಳಿಗಾಗಿ ಸಹಾಯವಾಣಿ ಹಾಗೂ ಸಿವಿಜಿಲ್ ಆಪ್‍ಗಳನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ನೀಡಲಾಗಿದ್ದು ಅವುಗಳನ್ನು ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಬಳಸಿ ಚುನಾವಣಾ ಅಕ್ರಮಕ್ಕೆ ಕಡಿವಾಣ ಹಾಕಲು ಮುಂದಾಗಬೇಕೆಂದು ಕಂಟ್ರೋಲ್ ರೂಂ ಕಾರ್ಯನಿರ್ವಹಣೆ ಕುರಿತು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ವಿವರ ನೀಡಿದರು.

ಈ ಕುರಿತು ಸಾರ್ವಜನಿಕರು ಚುನಾವಣಾ ದೂರು ಹಾಗೂ ಮಾಹಿತಿಗಾಗಿ ಈ ಕೆಳಕಂಡ ಸಹಾಯವಾಣಿ ಹಾಗೂ ಮೊಬೈಲ್ ಅಪ್ಲಿಕೇಷನ್ ಬಳಸುವಂತೆ ತಿಳಿಸಿದ್ದು ಚುನಾವಣೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಪಡೆಯಲು ಟೋಲ್ ಫ್ರೀ ಸಂಖ್ಯೆ 1950 ಹಾಗೂ ಸಹಾಯವಾಣಿ ಸಂಖ್ಯೆ 08372-239177 ಬಳಸಿ ಮತ್ತು ಚುನಾವಣೆ ಕುರಿತಂತೆ ದೂರು ಸಲ್ಲಿಕೆಗಾಗಿ ಸಿವಿಜಿಲ್ ಮೋಬೈಲ್ ಆಪ್ ಬಳಸಬೇಕು.

ಈಗಾಗಲೇ ಏಪ್ರಿಲ್ 1 ರವರೆಗೆ ಟೋಲ್ ಫ್ರೀ ಸಂಖ್ಯೆ 1950ಗೆ ವಿವಿಧ ಬಗೆಯ ಚುನಾವಣೆಗೆ ಸಂಬಂಧಿಸಿದ ಮಾಹಿತಿ ಪಡೆಯಲು 300 ಕ್ಕಿಂತ ಹೆಚ್ಚು ಕರೆ ಮಾಡಲಾಗಿರುತ್ತದೆ. ಅದರಲ್ಲಿ ಮತದಾರರ ನೊಂದಣಿ, ಮತದಾರರ ಸ್ಥಳ ವರ್ಗಾವಣೆ ಮತ್ತು ಚುನಾವಣೆಯ ಮತದಾರರ ಗುರುತಿನ ಚೀಟಿಯನ್ನು ಪಡೆಯುವ ಕುರಿತು ಕರೆಗಳಾಗಿರುತ್ತವೆ. ಇದರ ಜೊತೆಗೆ ಸಹಾಯವಾಣಿ ಸಂಖ್ಯೆ 08372-239177 ಗೂ ಕರೆ ಮಾಡಿ ಚುನಾವಣೆಗೆ ಸಂಬಂಧಿಸಿದ ಮಾಹಿತಿ ಪಡೆಯಬಹುದಾಗಿದೆ.

ಅಗಿIಉIಐ ಅiಣigeಟಿ ಂಠಿಠಿ ಬಳಸಿ: ಭಾರತ ಚುನಾವಣಾ ಆಯೋಗವು ಕರಾರು ಹೊಕ್ಕಾಗಿ ಚುನಾವಣೆ ನೀತಿ ಸಂಹಿತೆ ಜಾರಿಗೆ ತರುವುದು ಮತ್ತು ಚುನಾವಣೆ ಆಕ್ರಮ ತಡೆಗಟ್ಟಲು ಹಾಗೂ ಆಸೆ, ಆಮಿಷಗಳನ್ನು ಸ್ಥಳದಲ್ಲೇ ಚಿತ್ರೀಕರಿಸಲು ಸಿವಿಜಿಲ್ ಸಿಟಿಜನ್ ಆಪ್ ಚಾಲ್ತಿಯಲ್ಲಿರುತ್ತದೆ. ಸಾರ್ವಜನಿಕರು ತಮ್ಮ ಮೊಬೈಲ್ ಪ್ಲೇ ಸ್ಟೋರ್ನಲ್ಲಿ ಅಗಿIಉIಐ ಅiಣigeಟಿ ಂಠಿಠಿ ಎಂದು ಟೈಪ್ ಮಾಡಿ ಡೌನ್‍ಲೋಡ್ ಮಾಡಿಕೊಂಡು ತಮ್ಮ ಹೆಸರು, ಮೊಬೈಲ್ ಸಂಖ್ಯೆ, ವಿಳಾಸ, ರಾಜ್ಯ, ಜಿಲ್ಲೆ, ವಿಧಾನಸಭಾ ಕ್ಷೇತ್ರದ ವಿವರ, ಅಂಚೆ ಪಿನ್‍ಕೋಡ್ ನಮೂದಿಸಿ ನೊಂದಾಯಿಸಿಕೊಳ್ಳಬೇಕು.

ಅವಕಾಶಗಳು: ಯಾವುದೇ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಪೆÇ?ಟೋ, ವಿಡೀಯೋ ಮೂಲಕ ನೇರ ಸೆರೆ ಹಿಡಿದು ವಾಯ್ಸ್ ಮೂಲಕ ಕಳುಹಿಸಬಹುದು. ಇದು ನೇರವಾಗಿ ಚುನಾವಣಾಧಿಕಾರಿಗಳ ತಂಡಕ್ಕೆ ತಲುಪಲಿದೆ. ಇದರಿಂದ ಕೆಲವೇ ನಿಮಿಷಗಳಲ್ಲಿ ತಂಡಗಳು ಕಾರ್ಯ ಪ್ರವೃತ್ತವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ.

ಅಗಿIಉIಐ ಅiಣigeಟಿ ಂಠಿಠಿ ಕಟ್ಟುನಿಟ್ಟಿನ ಚುನಾವಣಾ ಆಕ್ರಮಗಳನ್ನು ತಡೆಗಟ್ಟಲು ಸದಾ ಕಾವಲಾಗಿರುತ್ತದೆ. ಪ್ರತಿಯೊಬ್ಬ ನಾಗರೀಕರು ಈ ಆಪ್‍ನ್ನು ಸ್ವಯಂ ಪ್ರೇರಿತವಾಗಿ ಬಳಸಿ ಚುನಾವಣೆಗೆ ಸಂಬಂಧಿಸಿದ ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಬೇಕು. ಇದರಿಂದ ಪಾರದರ್ಶಕ ಚುನಾವಣೆ ನಡೆಸಬಹುದಾಗಿದ್ದು, ಯಾವುದೇ ಆಕ್ರಮಗಳಿಗೆ ಅವಕಾಶ ಇಲ್ಲದಂತಾಗುತ್ತದೆ. ಇದು ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿ ಕೂಡ ಆಗಿರುತ್ತದೆ. ಸಿವಿಜಿಲ್ ಆಪ್ ಬಳಸಿ ಕಠಿಣ ನೀತಿ ಸಂಹಿತೆ ಜಾರಿಗೆ ಸಹಕರಿಸುವಂತೆ ಕೋರಿದ್ದಾರೆ.

ಜಿಲ್ಲಾಡಳಿತದಲ್ಲ್ಲಿ ತೆರೆಯಲಾದ ಕಂಟ್ರೋಲ್ ರೂಂ ದಲ್ಲಿ ಸಿವಿಜಿಲ್ ಆಪ್ ನಿರ್ವಹಣೆ, ಚುನಾವಣಾ ದೂರುಗಳ ಬಗ್ಗೆ ಸೂಕ್ತ ಕ್ರಮ ಹಾಗೂ ಜಿಲ್ಲೆಯ ವಿವಿಧೆಡೆಯಲ್ಲಿ ತೆರೆಯಲಾದ 18 ಚೆಕ್ ಪೆÇೀಸ್ಟ್‍ಗಳಲ್ಲಿ ವಾಹನಗಳ ತಪಾಸಣೆ ನಡೆಯುತ್ತಿರುವ ಬಗ್ಗೆ ಕಂಟ್ರೋಲ್ ರೂಮ್ ದಲ್ಲಿ ಆರಂಭಿಸಲಾದ ಸಿಸಿ ಟಿವಿ ಗಳ ವೀಕ್ಷಣೆ ಹಾಗೂ ನಿರ್ವಹಣೆ ಜೊತಗೆ ಮಾಧ್ಯಮ ನಿಗಾ ಕೇಂದ್ರದಲ್ಲಿ ಜಿಲ್ಲೆಯ ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗುವ ಸುದ್ದಿ, ಜಾಹೀರಾತು ಹಾಗೂ ನೀತಿ ಸಂಹಿತೆ ವರದಿಗಳ ಬಗ್ಗೆ ನಿರಂತರವಾಗಿ ನಿಗಾ ವಹಿಸಲಾಗುತ್ತಿದೆ. ಸಾರ್ವಜನಿಕರು ಚುನಾವಣಾ ದೂರುಗಳಿಗಾಗಿ ಮೇಲ್ಕಂಡ ಸಹಾಯವಾಣಿ ಹಾಗೂ ಸಿವಿಜಿಲ್ ಆಪ್ ಬಳಸಿ ದೂರು ಹಾಗೂ ಮಾಹಿತಿ ಒದಗಿಸಬಹುದಾಗಿದೆ ಎಂದರು.

ಈ ವೇಳೆ ಸಿವಿಜಿಲ್ ಆಪ್ ನೋಡಲ್ ಅಧಿಕಾರಿ ಅಮಿತ , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ಚುನಾವಣಾ ಶಾಖೆಯ ಶಿರಸ್ತೇದಾರ ವಿನಾಯಕ ಸಾಲಿಮಠ ಸೇರಿದಂತೆ ಚುನಾವಣಾ ಕಾರ್ಯನಿರತ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.