ನ್ಯಾಯವಾಧಿಗಳು ರೈತರ ಪರವಾಗಿರಲಿ

ಗಳೂರು.ಸೆ.೨೬; ಗ್ರಾಮೀಣಭಾಗದ ಬಡ ರೈತರು ಸಾಲಸೂಲಮಾಡಿ ತಮ್ಮ ಮಕ್ಕಳಿಗೆ  ಇಂಜಿನಿಯರ್,ವೈದ್ಯಕೀಯ ಶಿಕ್ಷಣಕೊಡಿಸುವ  ವ್ಯಾಮೋಹ ತೊರೆಯಬೇಕು.ಪರ್ಯಾಯವಾಗಿ ಲಭ್ಯವಿರುವ ಕೋರ್ಸ್ ಗಳನ್ನು ಸರಿಯಾದ ಸಮಯದಲ್ಲಿ ಆಯ್ಕೆಮಾಡಿ ಉಜ್ವಲ ಭವಿಷ್ಯ ರೂಪಿಸಬೇಕು.ಮಕ್ಕಳು ಹೂವಿನ ಮಡಿಯಿದ್ದಂತೆ ಹೂವುಗಳನ್ನು ಮುಡಿಗೆ ಸೇರಿಸುವ ಹೊಣೆಗಾರಿಕೆ ತಮ್ಮದಾಗಬೇಕು ಎಂದು ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಧೀಶ ಜಿ.ತಿಮ್ಮಯ್ಯ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಕಾನೂನು ಸೇವಾಸಮಿತಿ,ವಕೀಲರ ಸಂಘ,ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ,ತಾಲೂಕು ಆಡಳಿತ,ಸರ್ಕಾರಿ ಪ್ರಥಮ ದರ್ಜೆ ಕಾಲೇಜು,ನಾಲಂದ ಪದವಿಪೂರ್ವ ಕಾಲೇಜು ಇವರುಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು   ಪರೀಕ್ಷೆಯಲ್ಲಿ 176 ನೇ ರ್ಯಾಂಕ್ ಪಡೆದ  ಕು.. ರೇವತಿ ನಾಯಕ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಂವಿಧಾನ ಜಾರಿಗಿಂತ ಪೂರ್ವದಲ್ಲಿ ಕೆಲಪುರುಷರಿಗೆ ಶಿಕ್ಷಣ ಸ್ವತ್ತಾಗಿತ್ತು.1949‌ರ ನಂತರದಲ್ಲಿ ಎಲ್ಲಾ ವರ್ಗಕ್ಕೂ ಶಿಕ್ಷಣ ದೊರೆತು ಶೋಷಿತ ಬಡ ಸಮುದಾಯದವರೂ ಉನ್ನತ ಹುದ್ದೆ ಅಲಂಕರಿಸಿರುವುದು ಸಂವಿಧಾನದ ಕೊಡುಗೆಯಾಗಿದೆ.ಸಂವಿಧಾನಕ್ಕೆ ಮಾತೃಸ್ಥಾನವಿದೆ ಎಂದರು.
ರೈತರ ದುಖಃ ದುಮ್ಮಾನಗಳನ್ನು ಅರಿತ ಸಾವಿರಾರು ನ್ಯಾಯಾವಾದಿಗಳು ದೇಶಕ್ಕೆ ಅಗತ್ಯವಿದೆ.ರೈತ ಕುಟುಂಬದ ರೇವತಿನಾಯಕ ನಂತವರು ಭವಿಷ್ಯದಲ್ಲಿ ಹೈಕೋರ್ಟ್ ,ಸುಪ್ರೀಂ ಕೋರ್ಟ್ ಗಳಲ್ಲಿ ನ್ಯಾಯವಾದಿಗಳಾಗಿ ಹೊರಹೊಮ್ಮಲಿ ಎಂದು ಆಶಿಸಿದರು.ತಾಲೂಕಿನಲ್ಲಿ ಬಡರೈತರೇ ಹೆಚ್ಚಾಗಿ ವಾಸವಿದ್ದು  ಜಮೀನಿನ ಸಮಸ್ಯೆಗಳ ಕುರಿತು ಸಿವಿಲ್ ಕೇಸ್ ಗಳ ಜೊತೆಗೆ ದುಡುಕಿ ನಾಲ್ಕು  ಕ್ರಿಮಿನಲ್ ಕೇಸ್ ಆಗುತ್ತವೆ.ಇದು ಮಕ್ಕಳ ಜೀವನದಮೇಲೆ ಪರಿಣಾಮ ಬೀರುತ್ತವೆ.ಮಳೆಯಾಶ್ರಿತ ಪ್ರದೇಶದಲ್ಲಿ ಶ್ರಮದ ಹಣದಲ್ಲಿ ದೊರೆಯುವ ಲಾಭ ವೇನಿದೆ ಲೋಕಾದಾಲತ್ ಸದುಪಯೋಗ ಪಡೆದು ರಾಜಿಯಾದರೆ ಶ್ರಮ ಹಣ ಉಳಿತಾಯ ಎಂದರು.ಕೊಟ್ಟೂರು ತಾ.ಪಂ ಇಓ ಹುಲ್ಲುಮನಿ ತಿಮ್ಮಣ್ಣ ಮಾತನಾಡಿ,ನ್ಯಾಯಾಧೀಶರ ಹಂಬಲದಂತೆ ಕೊಂಡಕುರಿ ನಾಡನ್ನು ಪ್ರವಾಸಿ ತಾಣವನ್ನಾಗಿಸಲು ಸಹಕಾರದಿಂದ ಹೊರಸಂಚಾರ ಕೈಗೊಂಡು ಅಲ್ಲಿನ ಪ್ರಕೃತಿ ಸೊಬಗನ್ನು ಪ್ರಾಣಿ ಸಂಕುಲಗಳನ್ನು ವೀಕ್ಷಿಸಿದೆವು.ಅಲ್ಲದೆ ಕೋವಿಡ್ ಸಂದರ್ಭದಲ್ಲಿ ನ್ಯಾಯಾಧೀಶರು ಸದಾ ಮಾರ್ಗದರ್ಶಕರಾಗಿ ತಾಯಿ ಹೃದಯದ ಮನಸ್ಸಿನಿಂದ ನ್ಯಾಯಾಂಗ ಇಲಾಖೆಯ ಸಲಹೆ ಸಹಕಾರ ನನ್ನ ಅವಧಿಯಲ್ಲಿ ಕಂಡಿದ್ದೇನೆ.ಸಂತೆಪೇಟೆ ಸರ್ಕಾರಿ ಶಾಲೆಗೆ ನನ್ನ ಮಗನ ಜೊತೆ ನ್ಯಾಯಾಧೀಶರ ಮಗನನ್ನು ದಾಖಲಿಸಿದ್ದು ಹೆಮ್ಮೆಯ ಸಂಗತಿಯಾಗಿದೆ.ನ್ಯಾಯಾಧೀಶರು ಕನ್ನಡದಲ್ಲಿ ತೀರ್ಪು ಆದೇಶ ಮಾತ್ರವಲ್ಲದೆ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ  ಅಭ್ಯಾಸಮಾಡಿಸಬೇಕಿದೆ.ಇದಕ್ಕೆ ನ್ಯಾಯಾಧೀಶ ತಿಮ್ಮಯ್ಯ ಅವರು ಸಾಕ್ಷಿಯಾಗಿದ್ದಾರೆ ಎಂದರು.ಪಿಎಸ್ ಐ ಸಂತೋಷ್ ಕುಮಾರ್ ಬಾಗೋಜಿ ಮಾತನಾಡಿ,ಇತ್ತೀಚೆಗೆ‌ ಡ್ರಗ್ಸ್ ವಿಪತ್ತು ಕನ್ನಡ ಚಿತ್ರರಂಗದಲ್ಲಿ ಎದುರಾಗಿತ್ತು.ಮಾಧ್ಯಮಗಳಲ್ಲಿ ವೀಕ್ಷಿಸಿದಂತೆ ಸಮಾಜದಲ್ಲಿ ಕೆಲವರು ಸ್ವಾರ್ಥಕೆಲಸಗಳ‌ ಈಡೇರಿಕೆಗಾಗಿ ಸೆಲೆಬ್ರಟಿ,ಯುವಕರನ್ನು ಡ್ರಗ್ಸ್ ,ಹಾಗೂ ಗಾಂಜಾ,ಅಫೀಮು,ಮಾದಕ ವ್ಯಸನಕ್ಕೆ ಗುರಿಪಡಿಸಿ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿಸುತ್ತಾರೆ.ದೇಶದಲ್ಲಿ ಸಮೀಕ್ಷೆಯ ಪ್ರಕಾರ 5‌ಕೋಟಿಗೂ ಅಧಿಕ ಜನ ಮಾದಕ ವ್ಯಸನಿಗಳು ದೃಢವಾಗಿದ್ದು ಅವರಲ್ಲಿ ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಕೊಲೆ,ಅತ್ಯಾಚಾರದಂತಹ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದು ಜಾಗೃತರಾಗಬೇಕಿದೆ ಎಂದು ತಿಳಿಸಿದರು.ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಮಾತನಾಡಿ,ಸಮಾಜಕಲ್ಯಾ ಇಲಾಖೆಯಿಂದ ಪರಿಶಿಷ್ಟ ಜಾತಿ,ಪಂಗಡದ ಅಭ್ಯರ್ಥಿಗಳಿಗಎ ದೆಹಲಿ,ಹೈದರಾಬಾದ್ ನಲ್ಲಿ  ಯುಪಿಎಸ್ ಸಿ ,ಕೆಪಿಎಸ್ ಸಿ,ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ಸ್ಟೈಫಂಡ್ ನೊಂದಿಗೆ ವಸತಿಸಹಿತ ತರಬೇತಿ,ಮೆರಿಟ್ ಸ್ಕಾಲರ್ ಶಿಪ್ ಸೌಲಭ್ಯಗಳಿದ್ದು ಸದುಪಯೋಗಪಡೆದುಕೊಳ್ಳಿರಿ ಎಂದರು.ಸನ್ಮಾನಿತೆ ಕುಮಾರಿ ರೇವತಿ ನಾಯಕ ಮಾತನಾಡಿ,ನನ್ನ ಸಾಧನೆಗೆ ಕೈಜೋಡಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.ಉಪನ್ಯಾಸಕ ಬಿ.ಎನ್ ಸ್ವಾಮಿ ಮಾತನಾಡಿ,ಆಧುನಿಕತೆಯಿಂದ ಮೊಬೈಲ್ ನಂತಹ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆಯಿಂದ ಮಕ್ಕಳ ಭವಿಷ್ಯಕ್ಕೆ ಬಾಂಬ್ ಗಳಾಗಿ ಪರಿಣಮಿಸಿ ಸಂಚಕಾರ  ತಂದೊಡ್ಡಿವೆ.ಡಾ.ಬಿ.ಆರ್ .ಅಂಬೇಡ್ಕರ್ ಅವರ ಸಂವಿಧಾನದ ಕೊಡುಗೆಯಿಂದ ಶಿಕ್ಷಣ ಪಡೆಯಲು ದಾರಿಯಾಗಿದೆ ಎಂದರು.ಸಂದರ್ಭದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಹುಚವ್ವನಹಳ್ಳಿ ಮಂಜುನಾಥ್,ಪತ್ನಿ ಸುನಂದಾ,ತಹಶೀಲ್ದಾರ್ ಡಾ.ನಾಗವೇಣಿ,ವಕೀಲರ ಸಂಘದ ಅಧ್ಯಕ್ಷ ಬಸವರಾಜಪ್ಪ,ರೈತ ಸಂಘದ ಕಾರ್ಯದರ್ಶಿ ಚಿರಂಜೀವಿ,ಪ್ರಾಧ್ಯಾಪಕ ಲಾಲ್ ಸಿಂಗ್ ನಾಯ್ಕ,ಭದ್ರಾಮೇಲ್ದಂಡೆ ಹೊರಾಟಗಾರ ವಕೀಲ ಆರ್.ಓಬಳೇಶ್,
ಹಿರಿಯ ನಾಗರೀಕ ಸಂಘದ ಅಧ್ಯಕ್ಷ ಸಿ.ತಿಪ್ಪೇಸ್ವಾಮಿ,ಸಿಪಿಐ ಮಂಜುನಾಥ್ ಪಂಡಿತ್,
ವಕೀಲರಾದ ತಿಪ್ಪೇಸ್ವಾಮಿ,ಕರಿಬಸಪ್ಪ, ರುದ್ರೇಶ್ ,
ರೈತ ಸಂಘಟನೆಯ ಕಾನನಕಟ್ಟೆ ತಿಪ್ಪೇಸ್ವಾಮಿ, ಲೊಕೇಶ್,ರಾಜು,ಗೌಡಗೊಂಡನಹಳ್ಳಿ ಸತೀಶ್ ,ಸೇರಿದಂತೆ ಉಪಸ್ಥಿತರಿದ್ದರು‌.