ನ್ಯಾಯವಾದಿ ಬಂಧನಕ್ಕೆ ಈಶ್ವರಸಿಂಗ್ ಠಾಕೂರ್ ಖಂಡನೆ

ಬೀದರ್: ನ.3:ಭಾಲ್ಕಿ ತಾಲೂಕಿನ ನ್ಯಾಯವಾದಿ ಧನಲಕ್ಷ್ಮಿ ಹಾಗೂ ಅವರ ಪತಿಯನ್ನು ಮಧ್ಯರಾತ್ರಿ ಬಂಧಿಸಿ ಕೋರ್ಟ್ ತಡೆಯಾಜ್ಞೆ ಇರುವ ಜಾಗವನ್ನು ತೆರವು ಗೊಳಿಸುವ ಘಟನೆ ನಿಜಕ್ಕೂ ಖಂಡನೀಯ,
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ವಕೀಲರು ಮತ್ತು ಸಾಮಾಜಿಕ ಹೋರಾಟಗಾರ ನಿರಂತರ ಬಂಧನ ಮತ್ತು ಸುಳ್ಳು ಕೇಸ್‍ಗಳನ್ನು ದಾಖಲು ಮಾಡಿರುವ ರಾಜ್ಯ ಸರ್ಕಾರದ ನಡೆಯನ್ನು ಈಶ್ವರ್ ಸಿಂಗ್ ಠಾಕೂರ್ ಖಂಡಿಸಿದ್ದಾರೆ.
ನ್ಯಾಯವಾದಿ ಒಬ್ಬ ಮಹಿಳೆ ಎನ್ನುವುದು ನೋಡದೆ ಮಧ್ಯರಾತ್ರಿ ಬಂಧಿಸಿರುವುದು ಅಕ್ಷಮ್ಯ ಅಪರಾಧ,
ರಾಜ್ಯದಲ್ಲಿ ಕಾನೂನು ಕಾಪಾಡುವ ವಕೀಲರಿಗೆ ರಕ್ಷಣೆ ಇಲ್ಲದಂತಾಗಿದೆ ಮಾತೆತ್ತಿದರೆ ಸಂವಿಧಾನವನ್ನ ರಕ್ಷಣೆ ಮಾಡುತ್ತೇವೆ ಎಂದು ಹೇಳುವ ಸಿದ್ರಾಮಯ್ಯ ನವರ ಇಂದು ಅವರದೇ ಸರ್ಕಾರದಲ್ಲಿ ಸಂವಿಧಾನವನ್ನು ಗಾಳಿಗೆ ತೂರಿ ಅಮಾಯಕರ ಬಂಧನ ಮತ್ತು ನಿರಂತರ ದೌಜ್ರ್ಯಾನ ನಡೆಯುತ್ತಿದೆ ಎಂದು ಠಾಕೂರ್ ಪ್ರಕಟಣೆ ಮೂಲಕ ಖಂಡಿಸಿದ್ದಾರೆ