ನ್ಯಾಯವಾದಿಗಳ ಸಂಘದಿಂದ ಪ್ರತಿಭಟನೆ 

ಜಗಳೂರು.ಜು.೩೦; ರಾಜ್ಯ ಸರ್ಕಾರ ಜನನ-ಮರಣ ನೊಂದಣಿ ಕಾಯ್ದೆ ಬಗ್ಗೆ ಹೊರಡಿಸಿದ ಅಧಿಸೂಚನೆಯನ್ನು ಹಿಂಪಡೆದು ಮೊದಲಿನ ಹಾಗೆ ಜೆಎಂಎಫ್’ಸಿ ನ್ಯಾಯಾಲಯಕ್ಕೆ ಅಧಿಕಾರ ನೀಡಬೇಕೆಂದು ತಾಲೂಕು ನ್ಯಾಯವಾದಿಗಳ ಸಂಘದಿಂದ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ತಹಶೀಲ್ದಾರ್ ಅವರ ಮೂಲಕ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.ವಕೀಲರ ಸಂಘದ ಅಧ್ಯಕ್ಷ ಓಂಕಾರಪ್ಪ ಮಾತನಾಡಿ ಜನನ ಮತ್ತು ಮರಣ ದಾಖಲೆಗಳ ಬಗ್ಗೆ ವಿವಾದ ಗಳು ಇದ್ದಲ್ಲಿ ಅಥವಾ ಎಂಟ್ರಿಗಳು ಇಲ್ಲದಂ ತಹ ಸಂದರ್ಭದಲ್ಲಿ ಇಲ್ಲಿಯವರೆಗೂ ಜೆಎಂಎಫ್’ಸಿ ನ್ಯಾಯಾಲಯಕ್ಕೆ ಅರ್ಜಿ ಯನ್ನು ಸಲ್ಲಿಸಿ, ನ್ಯಾಯಾಲಯದಿಂದ ಆದೇಶವನ್ನು ಪಡೆದುಕೊಂಡು, ಆದೇಶದ ಪ್ರತಿಯೊಂದಿಗೆ ಸಂಬಂಧಪಟ್ಟ ಅಧಿಕಾರಿ ಗಳಿಗೆ ವರದಿಯನ್ನು ಸಲ್ಲಿಸಿ ನ್ಯಾಯಾಲ ಯದ ಆದೇಶದ ಪ್ರಕಾರ ನೊಂದಣಿ ಮಾಡಿಸುತ್ತಾ ಬಂದಿದ್ದು ಇರುತ್ತದೆ. ಈಗ ಏಕಾಏಕಿ ಜನನ ಮತ್ತು ಮರಣ ನೊಂದಣಿ ಕಾಯ್ದೆ ಅನ್ವಯ ಜೆಎಂಎಫ್’ಸಿ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯನ್ನು ತೆಗೆದು ಹಾಕಿ ಉಪವಿಭಾಗಾಧಿಕಾರಿಗಳ ವ್ಯಾಪ್ತಿಗೆ ಹೊಸ ಅಧಿಸೂಚನೆಯ ಮೂಲಕ ನೀಡಿರುವುದು ಸರಿಯಲ್ಲ ಎಂದರು.ಕಾರ್ಯದರ್ಶಿ ಕೆ.ವಿ.ರುದ್ರೇಶ್ ಮಾತನಾಡಿ ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಜನನ ಮತ್ತು ಮರಣ ನೊಂದಣಿ ಕಾಯ್ದೆ ಅನ್ವಯ ಅಧಿಕಾರ ವ್ಯಾಪ್ತಿಗೆ ನೀಡುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗುತ್ತದೆ. ಈಗಾಗಲೇ ರೆವಿನ್ಯೂ ನ್ಯಾಯಾಲಯಗಳಲ್ಲಿ ರಾಜಕೀಯ ಪ್ರಭಾವ, ಅನುಚಿತ ಪ್ರಭಾವ, ಒತ್ತಡಗಳಿಂದ ಸಾರ್ವಜನಿಕರಿಗೆ ಸೂಕ್ತ ನ್ಯಾಯ ದೊರೆಯುವ ಸಾಧ್ಯತೆ ಇರುತ್ತದೆ. ಅಲ್ಲದೇ ಜನನ ಮತ್ತು ಮರಣ ನೊಂದಣಿ ಕಾಯ್ದೆ ಅನ್ವಯ ದಾಖಲೆಗಳನ್ನು ಕೊಡಿಸ ಲು  ಬ್ರೋಕರ್ ಗಳ ಹಾವಳಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮೊದಲು ಇದ್ದ ಹಾಗೆ ಆಯಾ ತಾಲೂಕಿನ ಜೆಎಂ ಎಫ್’ಸಿ ನ್ಯಾಯಾಲಯಕ್ಕೆ ಅಧಿಕಾರ ವ್ಯಾಪ್ತಿಯನ್ನು ಮುಂದುವರೆಸಬೇಕೆಂದು  ತಿಳಿಸಿದರು.ಈ ಸಂದರ್ಭದಲ್ಲಿ ವಕೀಲರಾದ ಕಲ್ಲೇಶ್, ಸಿ.ಬಸವರಾಜ್, ಕುಂಬಾರ, ಮಲ್ಲಿಕಾರ್ಜುನ್, ಮರೇನಹಳ್ಳಿ ಎಂ.ಹೆಚ್.ತಿಪ್ಪೇಸ್ವಾಮಿ, ಪ್ರಕಾಶ್, ಎಸ್.ಬಸವರಾಜಪ್ಪ, ಕೆ.ಓ.ಬಸವ ರಾಜ್, ಅಶೋಕ್, ಭೂಪತಿ, ಮಹಾಂತೇಶ್, ಓಂಕಾರಪ್ಪ, ಓಬಳೇಶ್, ಕರಿಬಸಪ್ಪ, ಸೇರಿದಂತೆ ಇತರರಿದ್ದರು