ನ್ಯಾಯವಾದಿಗಳ ರಾಜ್ಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಾಮೆಂಟ್ ಗೆ ಚಾಲನೆ

ವಿಜಯಪುರ,ಫೆ.8: ಐದು ದಿನಗಳ ರಾಜ್ಯಮಟ್ಟದ ನ್ಯಾಯವಾದಿಗಳ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಾಮೆಂಟ್ ಗೆ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಶಿವಾಜಿ ನಲವಡೆ ಅವರು ನಗರದ ಬಿಎಲ್ ಡಿಇ ಕ್ಯಾಂಪಸ್ ನಲ್ಲಿ ಬುಧವಾರ ಚಾಲನೆ ನೀಡಿದರು.
ಅಥಣಿ ಅಡ್ವಕೇಟ್ (80/09) ಮತ್ತು ವಿಜಯಪುರ ಅಡ್ವಕೇಟ್(75/10) ತಂಡಗಳ ನಡುವೆ ನಡೆದ ಮೊದಲ
ಪಂದ್ಯದಲ್ಲಿ 5 ರನ್‍ಗಳಿಂದ ಅಥಣಿ ಜಯಗಳಿಸಿತು. ಎರಡನೇ ಹುನಗುಂದ ತಂಡ ಪಂದ್ಯದಲ್ಲಿ ತಂಡ(150/06)ವನ್ನು ರೋಣ ತಂಡವು(158/02) 8 ರನ್‍ಗಳಿಂದ ಮಣಿಸಿತು. ಮೂರನೇ ಪಂದ್ಯದಲ್ಲಿ
ಕಲಬುರ್ಗಿ ತಂಡವನ್ನು (117/08) ಸಿಂದಗಿ ತಂಡವು (139/04) 22 ರನ್‍ಗಳಿಂದ ಮಣಿಸಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ 30 ತಂಡಗಳು ಈ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿವೆ.
ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಉದ್ಯಮಿ ಅರುಣ್ ಮಾಚಪ್ಪನವರ, ವಿಜಯಪುರ ವಕೀಲ ಸಂಘದ ಕ್ರಿಕೆಟ್ ಕಮಿಟಿ ಅಧ್ಯಕ್ಷ ಎಸ್. ಎಸ್.ಡೋಂಗರಗಾವಿ, ವಕೀಲರ ಸಂಘದ ಅಧ್ಯಕ್ಷ ಐ.ಜಿ.ಚಾಗಶೆಟ್ಟಿ, ಉಪಾಧ್ಯಕ್ಷ ಎಸ್.ಬಿ.ಜಹಗೀರದಾರ, ಬಿ.ಎಸ್.ಸೋರಗಾವಿ, ಜಾಫರ್ ಅಂಗಡಿ ಮತ್ತಿತರರು ಇದ್ದರು.