ನ್ಯಾಯವಾದಿಗಳು ಸಾಮಾಜಿಕ ಕೆಲಸ ಮಾಡಿ -ನ್ಯಾ.ಸಂದೇಶ

ಸಿಂಧನೂರು.ಜ.೩-ಉಚ್ಚ ನ್ಯಾಯಾಲಯದಲ್ಲಿ ಕುಳಿತು ಕೊಂಡು ರಾಜ್ಯದ ನ್ಯಾಯಾಲಯಗಳ ಸಮಸ್ಯೆಗಳನ್ನು ತಿಳಿದುಕೊಳ್ಳಬಲ್ಲಿ ಆದರೆ ಅದಕ್ಕೆ ನನ್ನ ಮನಸು ಒಪ್ಪದ ಕಾರಣ ಹಾಗೂ ಕಿರಿಯ ವಕೀಲರುಗಳಿಗೆ ಉತ್ತೇಜನ ನೀಡಿನ್ಯಾಯಾಂಗ ಸದ್ರುಡ ಮಾಡಲು ನಾನು ಖುದ್ದಾಗಿ ನ್ಯಾಯಾಲಯಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ತಿಳಿದುಕೊಳಲ್ಲು ರಾಜ್ಯದಾಂತ ಪ್ರವಾಸ ಮಾಡುತ್ತಿದ್ದೇನೆ ಎಂದು ರಾಜ್ಯದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ. ಎಚ್.ಪಿ.ಸಂದೇಶ ಹೇಳಿದರು.
ಅವರು ನಗರದ ನ್ಯಾಯಾಲಯದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಜನನ ಪ್ರಮಾಣ ಪತ್ರ ವಿತರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಾನು ಆಡಳಿತಾತ್ಮಕ ನ್ಯಾಯಾಧೀಶರಾಗಿ ಬೆಂಗಳೂರುನಲ್ಲಿ ಕುಳಿತು ಕೊಳ್ಳದೆ ಎಲ್ಲ ನ್ಯಾಯಾಲಯಗಳಿಗೆ ಭೇಟಿ ನೀಡುತ್ತಿದ್ದು ಕೊಡಗು, ಗದಗ, ಭೇಟಿ ನೀಡಿ ಈಗ ರಾಯಚೂರು ಜಿಲ್ಲೆಗೆ ಬಂದಿದ್ದೇನೆ ಎಂದರು. ನಿರಂತರವಾಗಿ ಜನರ ಮಧ್ಯೆ ಕೆಲಸ ಮಾಡಿ ಅವರು ಕಷ್ಟ- ಸುಖಗಳಿಗೆ ಸ್ಪಂದಿಸುವವನೆ ನಿಜವಾದ ಜನ ನಾಯಕ ಅಂಥ ನಾಯಕರು ಸಮಾಜದಲ್ಲಿ ಇಲ್ಲದೆ ಇರುವುದರಿಂದ ದೇಶದಲ್ಲಿ ರಾಷ್ಟ್ರ ನಾಯಕರ ಕೊರತೆ ಎದ್ದು ಕಾಣುತ್ತಿದೆ. ಅಲ್ಲದೆ, ಉತ್ತಮ ಸಮಾಜ ಕಟ್ಟಲು ವಕೀಲರ ಪಾತ್ರ ದೊಡ್ಡದಾಗಿದೆ ಎಂದರು.
ಸಮಾಜ ಮುಗಿ ಕೆಲಸ ಮಾಡುವುದಕ್ಕಿಂತ ಸ್ವಾರ್ಥ ಸಾಧನೆ ಮಾಡುವವರೆ ಹೆಚ್ಚಾಗಿದ್ದಾರೆ. ಸಮಾಜ ಮುಖಿ ಕೆಲಸ ಮಾಡಿ ದೇಶದಲ್ಲಿ ಉತ್ತಮ ಜನಪರ ರಾಷ್ಟ್ರ ನಾಯಕರನ್ನು ಹುಟ್ಟು ಹಾಕೋಣ. ಕಿರಿಯ, ಹಿರಿಯ ವಕೀಲರ ಮಾರ್ಗದರ್ಶನದಲ್ಲಿ ನಿರಂತರ ಅಭ್ಯಾಸ ಮಾಡಿ, ಸಮಾಜದಲ್ಲಿ ಅನ್ಯಾಯ ವೃದ್ಧನಿಗೆ ನ್ಯಾಯ ದೊರಕಿಸಿ ಕೊಟ್ಟಾಗ ಮಾತ್ರ ವಕೀಲರ ವೃತ್ತಿ ಸರ್ಥಕವಾಗುತ್ತದೆ ಎಂದರು.
ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ. ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರೇಯಾಂಸ ಡೊಡ್ಡಮನಿ ೨ನೇಯ ಅಪರ ಸಿವಿಲ್ ನ್ಯಾಯಾಧೀಶರಾದ ರವಿಕುಮಾರ, ಕೆ.ವಕೀಲರು, ಸಂಘದ ಅಧ್ಯಕ್ಷರಾದ ಎನ್.ರಾಮನಗೌಡ, ಕಾರ್ಯದರ್ಶಿಗಳಾದ ಸುರೇಶರೆಡ್ಡಿ ವೇದಿಕೆ ಮೇಲೆ ಇದ್ದರು.