ನ್ಯಾಯಯುತ ಬೇಡಿಕೆ ಕೂಡಲೇ ಈಡೇರಿಸಲಿ

ವಿಜಯಪುರ.ಜ೨೯:ಕಳೆದ ಹಲವು ತಿಂಗಳುಗಳಿಂದ ಸರ್ಕಾರಿ ನೌಕರರುಗಳು ವೇತನ ಪರಿಷ್ಕರಣಿಗೆ ೭ನೇ ವೇತನ ಆಯೋಗ ಗದ ಜಾರಿ ಗೊಳಿಸುವ ಮೂಲಕ ಹಾಗೂ ಪಿಂಚಣಿ ಯನ್ನು ಜಾರಿಗೊಳಿಸಬೇಕಾಗಿದ್ದು ಇದು ನೌಕರರುಗಳ ಭವಿಷ್ಯದ ಪ್ರಶ್ನೆಯಾಗಿದ್ದು, ಈಗಾಗಲೇ ಪ್ರಪಂಚದ ದೇಶದ ಪಂಜಾಬ್ ರಾಜಸ್ಥಾನ ಛತ್ತೀಸ್ಗಡ್, ಜಾಖಂಡ್, ಹಿಮಾಚಲ ಪ್ರದೇಶಗಳಲ್ಲಿ ಇದನ್ನು ಜಾರಿಗೆ ತಂದಿದ್ದು, ನಮ್ಮ ರಾಜ್ಯ ಸಹ ಇದನ್ನು ಜಾರಿಗೊಳಿಸಬೇಕೆಂದು ದೇವನಹಳ್ಳಿ ತಾಲೂಕು ಪದೋನ್ನತ ಹಾಗೂ ಪದವೀಧರ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಹಡಪದ್ ಒತ್ತಾಯಿಸಿರುವರು.
ಈಗಾಗಲೇ ಸರ್ಕಾರದೊಂದಿಗೆ ಸಾಕಷ್ಟು ಬಾರಿ ಮಾತುಕತೆಗಳು ನಡೆಸಿದ್ದು, ಸಂದಾನ ವಿಫಲವಾಗಿದ್ದ ಕಾರಣ ನಾಳೆಯಿಂದ ಅನಿರ್ದಿಷ್ಟ ಅವಧಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ ಎಂದು ಎಲ್ಲಾ ಸರ್ಕಾರಿ ನೌಕರರುಗಳು ಇದಕ್ಕೆ ಕೈಜೋಡಿಸಿ, ಮುಷ್ಕರವನ್ನು ಯಶಸ್ವಿಗೊಳಿಸಬೇಕೆಂದು ಸಂಘದ ಪರವಾಗಿ ತಿಳಿಸಿರುತ್ತಾರೆ ಸರ್ಕಾರವು ಎಸ್ಮ ಜಾರಿಗೊಳಿಸಿದರು ಯಾವುದೇ ಕಾರಣಕ್ಕೂ ನಮ್ಮ ನ್ಯಾಯಯುತ ಬೇಡಿಕೆಗಳು ಈಡೇರಿಸುವವರೆಗೂ ಮುಷ್ಕರವನ್ನು ಸ್ಥಗಿತಗೊಳಿಸದೆ ಮುಂದುವರಿಸಲಾಗುತ್ತದೆ ಎಂದು ದೇವನಹಳ್ಳಿ ತಾಲೂಕು ಪದೋನ್ನತ ಹಾಗೂ ಪದವೀಧರ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಹಡಪದ್ ತಿಳಿಸಿದರು.