ಕಲಬುರಗಿ; ಸೆ.26:ನಗರದ ಬಂಜಾರಾ ಭವನದಲ್ಲಿ ಸಭೆ ನಡೆಸಿ ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ವಿರೋಧಿ ಹೋರಾಟಗಾರರು ಕರೆ ಕೊಟ್ಟಿರುವ ಎಲ್ಲಾ ಸಮುದಾಯಗಳ ಮುಖಂಡರು ಸಭೆಗೆಯಲ್ಲಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ಸಂರಕ್ಷಣಾ ಹೋರಾಟ ಸಮಿತಿಯ ರಚನೆ. ಹಾಗೂ ಸಮಿತಿಯ ಪದಾಧಿಕಾರಿಗಳ ಆಯ್ಕೆ.
ಕಲಬುರಗಿ ಜಿಲ್ಲಾ ಮಟ್ಟದಲ್ಲಿ ಭೋವಿ, ಬಂಜಾರಾ ಕೊರಮ ಕೊರಚ ಇತರರ, ಗುರುಗಳ ಜಯಂತಿಯನ್ನು ಸಾಮೂಹಿಕ ವಾಗಿ ಆಚರಣೆ ಮಾಡುವುದು. ಈ ಸಂದರ್ಭದಲ್ಲಿ ಮುಖಂಡರಾದ ರೇವುನಾಯಕ್ ಬೆಳಮಗಿ, ತಿಪ್ಪಣ್ಣ ಒಡೆಯರಾಜ, ಶಾಮರಾವ್ ಪವಾರ್,ಚಂದು ಜಾಧವ್, ವಿನೋದ್ ಚೌವ್ಹಾಣ, ಸುಭಾಸ ಗಾಯಕ, ಶ್ರೀಹರಿ ಜಾಧವ, ಜಿ ಶಿವಶಂಕರ್, ನಾರಾಯಣ, ರಾಜು, ಅಣ್ಣಪ್ಪ ಸಾಳುಂಕೆ, ಶ್ರೀಮಂತ, ಕನಕಪ್ಪ ದಂಡಗುಲ್ಕರ, ಸಿದ್ರಾಮ ಕುಸಾಳೆ, ಕೃಷ್ಣ, ಅರ್ಜುನ್ ಕುಶಾಳಕರ, ಗಣಪತಿ ರಾಠೋಡ ಸೇರಿದಂತೆ ಹಲವಾರು ಸಮೂದಾಯದ ಮುಖಂಡರು ಭಾಗವಹಿಸಿ ಮುಂದಿನ ದಿನಾಂಕ 22/10/2023 ರಂದು ಬೆಳಿಗ್ಗೆ 11.30 ಗಂಟೆಗೆ ಬಂಜಾರಾ ಭವನ ಕಲಬುರ್ಗಿ ಯಲ್ಲಿ ಸಭೆ ಕರೆದು ಇಂದಿನ ಸಭೆ ಮುಕ್ತಾಯ ಗೊಳಿಸಿದರು.