ನ್ಯಾಯಮೂರ್ತಿ ರವಿ ವಿ.ಹೊಸಮನಿ ಕಾಮಗಾರಿ ಪರಿಶೀಲನೆ

ಲಿಂಗಸುಗೂರು,ಸೆ.೧೨-
ಲಿಂಗಸುಗೂರು ಪಟ್ಟಣದಲ್ಲಿ ಸಾರಿಗೆ ಡಿಪೋ ಮುಂಭಾಗ ಸಿರ್ಮಿಸುತ್ತಿರುವ ನ್ಯಾಯಾಲಯ ಸಂಕೀರ್ಣ ಕಟ್ಟಡ ಕಾಮಗಾರಿಯನ್ನು ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ, ಕಲಬುರಗಿ ವಿಭಾಗೀಯ ಪೀಠದ ನ್ಯಾಯಮೂರ್ತಿ ರವಿ ವಿ.ಹೊಸಮನಿ ಭಾನುವಾರ ವೀಕ್ಷಿಸಿದರು.
ನೂತನ ಕಟ್ಟಡದಲ್ಲಿ ಕೋರ್ಟ್ ಹಾಲ್‌ಗಳು, ನ್ಯಾಯಾಧೀಶರ ವಸತಿ ಗೃಹ, ವಕೀಲರ ಸಂಘದ ಸಭಾಂಗಣ, ಕಚೇರಿ ಹಾಗೂ ಇತರ ಕಾಮಗಾರಿಗಳ ನೀಲಿನಕ್ಷೆ – ವೀಕ್ಷಿಸಿ ಪಿಡಬ್ಲ್ಯುಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಪಟ್ಟಣದಲ್ಲಿ ಜಿಲ್ಲಾ ಸತ್ರ ನ್ಯಾಯಾಲಯದ ಕಾರ್ಯಕಲಾಪ ನಡೆಸಲು ಎಂಬುದನ್ನು ಚರ್ಚಿಸಿದರು.
೧೫.೮೦ ಕೋಟಿ ರೂ. ವೆಚ್ಚದಲ್ಲಿ ಎರಡು ಅಂತಸ್ತುಗಳಲ್ಲಿ ನಾಲ್ಕು ಕೋರ್ಟ್ ಹಾಲ್‌ಗಳು, ೩ ಕೋಟಿ ರೂ. ವೆಚ್ಚದಲ್ಲಿ ವಕೀಲರ ಸಂಘದ ಕಚೇರಿ, ೨ ಕೋಟಿ ರೂ. ವೆಚ್ಚದಲ್ಲಿ ನ್ಯಾಯಾಧೀಶರ ನಾಲ್ಕು ವಸತಿ ಗೃಹಗಳನ್ನು ನಿರ್ಮಿಸಲಾಗುತ್ತಿದೆ.
ಜಿಲ್ಲಾ ಸತ್ರ ನ್ಯಾಯಾಧೀಶ ಮಾರುತಿ ಬಗಾಡ, ಹಿರಿಯ ಶ್ರೇಣಿ ದೊರೆಯುವುದೇ ನ್ಯಾಯಾಧೀಶ ಚಂದ್ರಶೇಖರ್ ದಿಡ್ಡಿ, ಪ್ರಥಮ ಸಿವಿಲ್ ನ್ಯಾಯಾಧೀಶ ವಿನಾಯಕ ಮಾಯಣ್ಣನವರ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಶಿವಕುಮಾರ ದೇಶಮುಖ್, ವಕೀಲರ ಸಂಘದ ಅಧ್ಯಕ್ಷ ಆಶಿಕ್ ಅಹ್ಮದ್ ಇದ್ದರು.
ವಕೀಲರಾದ ಮಹಾಲಿಂಗಪ್ಪ, ಕುಪ್ಪಣ್ಣ ಕೋಠಾ, ಪ್ರಭುಗೌಡ, ಪಲ್ಲಾದ್ ದಿಗ್ಗಾವಿ, ಪರಶುರಾಮ, ನಂದೀಶ, ವಿಶ್ವನಾಥ, ಹಾಜಿಬಾಬು, ಎಇಇ ಗೋಪಾಲರಡ್ಡಿ ಮಾಹಿತಿ ನೀಡಿದರು. ಎ.ನಾಗಪ್ಪ, ನಾಗರಾಜ ಗಸ್ತಿ, ಎಚ್.ಮುದುಕಪ್ಪ, ಜೆಇ ಲಕ್ಷ್ಮೀಕಾಂತ ಗುಂಟೆ, ಸಂದೀಪ ಯಾದವ್ ಇತರರು ಇದ್ದರು.