ಕೋಲಾರ, ಜು,೧೧-ತಮಿಳುನಾಡು ಮಾದರಿಯಲ್ಲಿ ಕರ್ನಾಟಕದಲ್ಲೂ ಸಬ್ಸಿಡಿ ದರದಲ್ಲಿ ನ್ಯಾಯ ಬೆಲೆ ಅಂಗಡಿಗಳಲ್ಲಿ ಟೊಮೊಟೊ ವಿತರಿಸಬೇಕೆಂದು ರೈತ ಸಂಘದಿಂದ ಎ.ಪಿ.ಎಂ.ಸಿ ಕಾರ್ಯದರ್ಶಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ನೀಡಿ ಒತ್ತಾಯಿಸಿದರು.
ನಕಲಿ ಬಿತ್ತನೆ ಬೀಜ ಕೀಟ ನಾಶಕಗಳ ಹಾವಳಿಯಿಂದ ಲಕ್ಷಾಂತರ ರೂ. ಬಂಡವಾಳ ಹಾಕಿ ಬೆಳೆದಿರುವ ಟೊಮೆಟೋ ಬೆಳೆ ರೋಗಕ್ಕೆ ತುತ್ತಾಗಿ ಉತ್ತಮ ಪಸಲಿಲ್ಲದೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಟೊಮೆಟೋ ಮೀರುಸುತ್ತಿದೆ. ಇದರಿಂದ ರೈತರಿಗೂ ಲಾಭದಾಯಕವಿಲ್ಲ, ಗ್ರಾಹಕರಿಗೂ ಹೊರೆಯನ್ನು ತಪ್ಪಿಸಲು ಸರ್ಕಾರವೇ ಟೊಮೆಟೋ ರೈತರಿಂದ ಖರೀದಿ ಮಾಡಿ ಜನಸಾಮಾನ್ಯರಿಗೆ ನ್ಯಾಯ ಬೆಲೆ ಅಂಗಡಿಗಳ ಮುಖಾಂತರ ಮಾರಾಟ ಮಾಡಬೇಕೆಂದು ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಸರ್ಕಾರವನ್ನು ಒತ್ತಾಯಿಸಿದರು.
ಟೊಮೆಟೋ ದರ ದೇಶದ ಬಹುತೇಕ ಕಡೆ ೧೫೦ ರೂ. ದಾಟಿದೆ ಈ ಬೆಲೆ ನಿಯಂತ್ರಣ ಮಾಡಲು ಸಾಧ್ಯವಿಲ್ಲ, ಬೆಲೆ ಇಳಿಕೆ ಆಗಬೇಕಾದರೆ ಉತ್ತಮ ಬೆಳೆ ಬರಬೇಕು, ಈಗಾಗಲೇ ಅಲ್ಪ ಸ್ವಲ್ಪ ಬೆಳೆಯಾಗಿರುವ ತೋಟವನ್ನು ಕಳ್ಳರಿಂದ ರಕ್ಷಣೆ ಮಾಡಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.
ಮುಖ್ಯಮಂತ್ರಿ ಈ ಸಮಸ್ಯೆಯನ್ನು ಗಂಬೀರವಾಗಿ ಪರಿಗಣಿಸಿ ಟೊಮೆಟೋವನ್ನು ನ್ಯಾಯಬೆಲೆ ಅಂಗಡಿ, ನಂದಿನಿ ಹಾಲು ಮಾರಾಟ ಕೇಂದ್ರಗಳಲ್ಲಿ ಸಬ್ಸಿಡಿ ದರದಲ್ಲಿ ಮಾರಾಟ ಮಾಡಲು ಆದೇಶ ನೀಡಬೆಕೆಂದು ಒತ್ತಾಯಿಸಿದರು.