ನ್ಯಾಯಬೆಲೆ ಅಂಗಡಿಗಳಿಗೆ ತಹಶೀಲ್ದಾರ್ ಭೇಟಿ

ಸಿರವಾರ.ಮೇ.೨೧- ಪಡಿತರ ಚೀಟಿದಾರರಿಗೆ ಸರ್ಕಾರ ನಿಗದಿ ಮಾಡಿರುವ ಆಹಾರ ಪದಾರ್ಥಗಳನ್ನು ಸರಿಯಾಗಿ ತಲುಪಿಸಿ, ಅಳತೆಯಲ್ಲಿ ವ್ಯಾತ್ಯಾಸ ಆದರೆ ಕ್ರಮಕೈಗೊಳಲಾಗುವುದು ಎಂದು ಸಿರವಾರ ತಹಸೀಲ್ದಾರ ವಿಜಯೇಂದ್ರ ಹುಲಿನಾಯಕ ಹೇಳಿದರು.
ಪಟ್ಟಣದಲ್ಲಿರುವ ವಿವಿಧ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ವಿಕ್ಷಣೆ ಮಾಡಿದಾಗ ತೂಕದ ಯಂತ್ರದಿಂದ ಆಹಾರ ಧಾನ್ಯಗಳನ್ನು ನೀಡದೆ ಡಬ್ಬಿಗಳ ಮೂಲಕ ಹಾಕುತ್ತಿರುವುದಕ್ಕೆ ಸ್ಥಳದಲ್ಲಿ ತೂಕದ ಯಂತ್ರವಿಲ್ಲದೆ ಇರುವುದನ್ನು ಕಂಡು ಅಂಗಡಿ ಮಾಲಿಕರಿಗೆ ತರಾಟೆಗೆ ತೆಗೆದುಕೊಂಡರು. ನಂತರ ಯಂತ್ರ ತರಿಸಿ ಡಬ್ಬಿಯಲ್ಲಿ ನೀಡುವ ಧಾನ್ಯಗಳ ಗುಣಮಟ್ಟ, ಅಳತೆ ಪರಿಶೀಲನೆ ಮಾಡಿದಾಗ ಎರಡು ಸರಿಯಾಗಿ ಬಂದಿರುವ ಕಾರಣ ತೂಕದ ಯಂತ್ರದ ಮೂಲಕವೆ ಪಲಾನುಭವಿಗಳಿಗೆ ನೀಡಿ, ಮಾಸ್ಕ್ ಧರಸದೆ ಬಂದರೆ ಧಾನ್ಯಗಳನ್ನು ನೀಡಬೇಡಿ, ಸಾಮಾಜಿಕ ಅಂತರ ಕಾಪಾಡಿ, ಸ್ಯಾನಿಟೈಸರ್ ಬಳಸಿ ಎಂದರು. ಕಂದಾಯನಿರೀಕ್ಷಕ ಶ್ರೀನಾಥ, ಸಿಬ್ಬಂದಿಗಳು ಇದ್ದರು.