ನ್ಯಾಯಬೆಲೆ ಅಂಗಡಿಗಳಿಗೆ ಆಹಾರಧಾನ್ಯ ಸರಬರಾಜು

ಜಗಳೂರು.ಮೇ.೨೦; ಪಟ್ಟಣದ ಎಪಿಎಂಸಿ ಆವರಣದಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಸಗಟು ಮಳಿಗೆ ಗೋದಾಮಿನಿಂದ ಜಗಳೂರು ತಾಲ್ಲೂಕಿನ 94 ನ್ಯಾಯಬೆಲೆ ಅಂಗಡಿಗಳಿಗೆ ಮೇ ತಿಂಗಳ ರಾಜ್ಯ ಮತ್ತು ಕೇಂದ್ರ ಸರ್ಕಾರದ ಆಹಾರಧಾನ್ಯ ಸರಬರಾಜು ಮಾಡಲಾಗುತ್ತಿದೆ ಎಂದು ಗೋದಾಮಿನ ವ್ಯವಸ್ಥಾಪಕ ಶಂಕರ್ ತಿಳಿಸಿದರು ನಂತರ ಮಾತನಾಡಿದ ಅವರು ಜಗಳೂರು ತಾಲೂಕಿಗೆ ಕೇಂದ್ರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿಯಲ್ಲಿ  ಮತ್ತು ಕೇಂದ್ರದಿಂದ 7500 ಅಕ್ಕಿ ಮತ್ತು ರಾಜ್ಯ ಸರ್ಕಾರದಿಂದ 3500 ಅಕ್ಕಿ ಕ್ವಿಂಟಲ್. 723 ಕ್ವಿಂಟಲ್ ಗೋಧಿ 4623 ರಾಗಿ ಬಂದಿದೆ ಜಗಳೂರು ತಾಲೂಕಿನ  ವ್ಯಾಪ್ತಿಯ 94  ನ್ಯಾಯಬೆಲೆ ಅಂಗಡಿಗಳಿಗೆ ತಾಲೂಕಿನಲ್ಲಿ ಒಟ್ಟು ಬಿಪಿಎಲ್ ಮತ್ತು ಅಂತೋದಯ ಕುಟುಂಬದ ರೇಷನ್ ಕಾರ್ಡ್ ಗಳು 42828 ಸಾವಿರ ಪಡಿತರ ಚೀಟಿದಾರರು ಇದ್ದಾರೆ ಅದರಲ್ಲಿ ಬಿಪಿಎಲ್ 35922 ಅಂತ್ಯೋದಯ ಪಡಿತರ ಚೀಟಿದಾರರು 6906 ಕುಟುಂಬಗಳಿವೆ ಅವರಿಗೆ  ಮೇ ತಿಂಗಳ ಆಹಾರ ಧಾನ್ಯ ಒದಗಿಸಲಾಗುತ್ತಿದೆ ನ್ಯಾಯಬೆಲೆ ಅಂಗಡಿಗಳಿಂದ ಬಿ.ಪಿ.ಎಲ್ ಪಡಿತರ ಚೀಟಿದಾರರ ಪ್ರತಿ ಸದಸ್ಯನಿಗೆ 2 ಕೆ ಜಿ ಅಕ್ಕಿ ಪ್ರತಿ ಪಡಿತರ ಕಾರ್ಡಿಗೆ 2 ಗೋಧಿ ಕೆ ಜಿ ರಾಗಿ -3 ಕೆ ಜಿ  ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ 15 ಕೆ.ಜಿ ಅಕ್ಕಿ 20 ಕೆ.ಜಿ ರಾಗಿ ರಾಜ್ಯ ಸರ್ಕಾರದಿಂದ ತಲಾ ಒಬ್ಬ ವ್ಯಕ್ತಿಗೆ 5 ಕೆ ಜಿ ಅಕ್ಕಿ ವಿತರಿಸಲಾಗುತ್ತದೆಈ ಸಂದರ್ಭದಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ 
ಸಿ.ಎಸ್ ಚಂದ್ರಶೇಖರ್ ಕಚೇರಿ ಸಹಾಯಕ ನಾಗರಾಜ್ ಕಂಪ್ಯೂಟರ್ ಆಪರೇಟರ್ ನವೀನ್ ಮತ್ತು ಹಮಾಲರು ಸಿಬ್ಬಂದಿಗಳು ಇದ್ದರು.