
ಲಿಂಗಸೂಗೂರು,ಮೇ.೨೧- ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ನ್ಯಾಯಾಲಯದ ಕಟ್ಟಡದ ಕಾಮಗಾರಿಯನ್ನು ಬೆಂಗಳೂರಿನ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ರಾಯಚೂರು ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಎಂ.ಐ. ಅರುಣ ಪರಿಶೀಲನೆ ನಡೆಸಿದರು.
ಸಾರಿಗೆ ಡೀಪೋ ಎದುರು ನಿರ್ಮಾಣವಾಗುತ್ತಿರುವ ನ್ಯಾಯಾಲಯದ ಕಟ್ಟಡ ಕಾಮಗಾರಿ ಪರಿಶೀಲನೆ ನಡೆಸಿದ ನ್ಯಾ| ಎಂ.ಐ ಅರುಣ, ನ್ಯಾಯಾಲಯದ ಕಟ್ಟಡದ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ೧೦೦ ವರ್ಷಗಳ ಕಾಲ ಬಾಳಿ ಬರುವಂತೆ ಗುಣಮುಟ್ಟಕಾಪಾಡಬೇಕು ಎಂದು ಪಿಡಬ್ಲ್ಯೂಡಿ ಇಇ ಅಯ್ಯಪ್ಪ ಮ್ಯಾಕಲ್‌ರಿಗೆ ಸೂಚಿಸಿದರು.
ಕಟ್ಟಡವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದರೆ, ಕಟ್ಟಡವು ದೀರ್ಘ ಕಾಲದವರಿಗೆ ಬಳಕೆ ಮಾಡಬಹುದು. ಇದಕ್ಕೆ ವಕೀಲರು ಸಹಕಾರ ನೀಡಬೇಕು ಎಂದರು. ವಕೀಲರಾದ ಕುಪ್ಪಣ್ಣ ಮಾಣಿಕ್ಸ್ ಮಾತನಾಡಿ, ನಮ್ಮ ಭಾಗದಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗಿರುತ್ತದೆ. ನ್ಯಾಯಾಲಯದ ಕಟ್ಟಡದ ಕಾಮಗಾರಿಯಲ್ಲಿ ಮಣ್ಣಿನ ಇಟ್ಟಂಗಿ ಬದಲು ಸಿಮೆಂಟ್ ಇಟ್ಟಿಗಿ ಬಳಕೆ ಮಾಡುತ್ತಿದ್ದರಿಂದ ಕಟ್ಟಡದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಸಿಮೆಂಟ್ ಇಟ್ಟಿಂಗಿ ಬದಲು ಮಣ್ಣಿನ ಇಟ್ಟಂಗಿ ಬಳಕೆ ಮಾಡುವಂತೆ ಮನವಿ ಮಾಡಿದರು.
ಕಟ್ಟಡದ ಕಾಮಗಾರಿಯನ್ನು ಗುಣಮಟ್ಟದಿಂದ ಹಾಗೂ ಸ್ಥಳೀಯ ವಾತಾವರಣಕ್ಕೆ ತಕ್ಕಂತೆ ಇಲ್ಲಿನ ವಸ್ತುಗಳನ್ನು ಬಳಕೆ ಮಾಡುವಂತೆ ಪಿಡಬ್ಲೂಡಿ ಇಇಗೆ ಸೂಚಿಸಿದರು.
ಮನವಿ-ಸ್ಥಳೀಯ ಸಿವಿಲ್ ನ್ಯಾಯಾಲಯಕ್ಕೆ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಮಂಜೂರು ಮಾಡುವಂತೆ ಆಗ್ರಹಿಸಿ ವಕೀಲರ ಸಂಘ ಪದಾಧಿಕಾರಿಗಳು ಹೈಕೋರ್ಟ್ ನ್ಯಾಯಮೂರ್ತಿ ಎಂ.ಐ. ಅರುಣ ಅವರಿಗೆ ವಕೀಲರ ಸಂಘದ ಅಧ್ಯಕ್ಷ ಆಶಿಕ್ ಆಮ್ಮದ್ ಮನವಿ ಸಲ್ಲಿಸಿದರು.
ತಾಲೂಕಿನ ಅನೇಕ ಪ್ರಕರಣಗಳು ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುತ್ತಿದ್ದರಿಂದ ರಾಯಚೂರಿಗೆ ತೆರಳಬೇಕಾದರೆ ಕಕ್ಷಿದಾರರಿಗೆ ತೊಂದರೆಯಾಗುತ್ತಿದೆ. ಸ್ಥಳೀಯ ನ್ಯಾಯಾಲಯದಲ್ಲಿ ಹೆಚ್ಚುವರಿ ನ್ಯಾಯಾಲಯ ನಡೆಸಲು ಸಾಕಷ್ಟು ಸ್ಥಳವಕಾಶ ಇದ್ದು ಹೀಗಾಗಿ ಹೆಚ್ಚುವರಿ ನ್ಯಾಯಾಲಯ ಮಂಜೂರು ಮಾಡಬೇಕು. ನೂ ನ್ಯಾಯಾಲಯದ ಕಟ್ಟಡದ ಸುತ್ತಮುತ್ತ ವಕೀಲರ ಕಾರ್ಯಾಲಯ ನಿರ್ಮಾಣ ಮಾಡಲು ಖಾಸಗಿ ಜಾಗ ಇಲ್ಲ ನ್ಯಾಯಾಲಯದ ಕಾಂಪೌಡ್ ಗೋಡೆಗೆ ಹೊಂದಿಕೊಂಡು ವಕೀಲರ ಕಚೇರಿಗಳ ನಿರ್ಮಾಣಕ್ಕೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು
ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶ ಮಾರುತಿ ಮಾಗಡೆ, ಸ್ಥಳೀಯ ನ್ಯಾಯಾಧೀಶರಾದ ವಿನಾಯಕ ಮಾಯಣ್ಣನವರು, ಚಂದ್ರಶೇಖರ್ ಏಡ್ರಿ, ಶಿವಕುಮಾರ ದೇಶಮುಖ, ಸಹಾಯಕ ಆಯುಕ್ತ ಅವಿನಾಶ ಶಿಂಧೆ, ಪಿಡಬ್ಲೂಡಿ ಇಇ ಅಯ್ಯಪ್ಪ ಮ್ಯಾಕಲ್, ಡಿವೈಎಸ್ಪಿ ವೇಣುಗೋಪಾಲ್, ಪಿಡಬ್ಲೂಡಿ ಎಇಇ ಗೋಪಾಲರೆಡ್ಡಿ, ಸಿಪಿಐ ಸಂಜೀವ್ ಕುಮಾರ, ತಹಶೀಲ್ದಾರ್ ಬಸವರಾಜ ಝಳಕಿಮಠ, ಜೆಇ ಲಕ್ಷ್ಮೀಕಾಂತ ಗುಂಟಿ, ವಕೀಲರ ಸಂಘದ ಅಧ್ಯಕ್ಷ ಆಫೀಕ್ ಅಹ್ಮದ್, ಹಿರಿಯ ವಕೀಲರಾದ ನಾಗಪ್ಪ ಸರ್ಜಾಪುರ, ನಾಗರಾಜ ಗಸ್ತಿ, ಮಾನಪ್ಪ ನಾಯಕ ಸೇರಿದಂತೆ ಇದ್ದರು .