ಹೊನ್ನಾಳಿ. ಜೂ.14; ನ್ಯಾಮತಿ ತಾಲೂಕಿನ ಸಾಲಬಾಳು ಗ್ರಾಮದ ವ್ಯಾಪ್ತಿಯಲ್ಲಿ ಕಾಡುಕೋಣ ಪ್ರತ್ಯಕ್ಷವಾಗಿದೆ. ಒಂಟಿಯಾಗಿ ಬಂದು ಗ್ರಾಮದೆಲ್ಲೆಡೆ ಅಲೆದಾಡುತ್ತಿರುವ ದೃಶ್ಯ ಕಂಡು ಬಂದಿದೆ. ಸಾರ್ವಜನಿಕರನ್ನು ನೋಡಿ ಗಾಬರಿಗೊಂಡು ಅತ್ತಿತ್ತ ಓಡುತ್ತಿರುವ ಕಾಡುಕೋಣವನ್ನು ಕಂಡ ಸಾರ್ವಜನಿಕರು ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿ ಸೆರೆಹಿಡಿದು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದಾರೆ ಮರು ಕ್ಷಣದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಮೂಲಕ ಕಾಡುಕೋಣ ಹಿಡಿಯಲು ಸತತ ಪ್ರಯತ್ನ ಮಾಡಲಾಗಿದೆ.