ನ್ಯಾಮತಿಯಲ್ಲಿ ನಿಲ್ಲದ ಮಳೆ; ಕೃಷಿ ಕಾರ್ಯ ಆರಂಭ

ನ್ಯಾಮತಿ.ಜು.೨೦; ನ್ಯಾಮತಿಪಟ್ಟಣ ಸೇರಿದಂತೆತಾಲೂಕಿನ ಗ್ರಾಮೀಣ ಪ್ರದೇಶಗಳ ವಿವಿಧೆಡೆ  ಜಿಟಿಜಿಟಿ ಮಳೆಯು ಸುರಿಯಿತು.ಜಿಟಿಜಿಟಿ ಮಳೆಯು ಬೆಳಗ್ಗೆ ಜನರ ಓಡಾಟಕ್ಕೆ ಅಡ್ಡಿಯಾದರೂ ಮಳೆ ಆಗಮನ ಸಂತಸಕ್ಕೆ ಕಾರಣವಾಯಿತು.ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಸೋಮವಾರ ರಾತ್ರಿಯಿಂದ ಆರಂಭವಾದ ಜಿಟಿ ಜಿಟಿ ಮಳೆ ಬುಧವಾರ ಮುಂದುವರೆದಿತ್ತು.ನೆಲ, ರಸ್ತೆ, ಗಿಡಮರಗಳು ತೊಯ್ದು ತೊಪ್ಪೆಯಾದವು. ಮೋಡ ಕವಿದ ವಾತಾವರಣ ಮತ್ತು ನಿರಂತರ ಜಿಟಿ ಜಿಟಿ ಮಳೆಯಿಂದ ಮಲೆನಾಡಿನ ವಾತಾವರಣ ಉಂಟಾಗಿದೆ.ವಿದ್ಯಾರ್ಥಿಗಳು ಬೆಳಗ್ಗೆ ಕೊಡೆ ಕೈಯಲ್ಲಿ ಹಿಡಿದು ತೆರಳಿದರು. ಕಳೆದ ಎರಡುದಿನಗಳಿಂದಗಾಳಿಯೂ ಬಿರುಸಿನಿಂದ ಬೀಸುತ್ತಿದೆ.ಇಡೀ ದಿನ ಬಿಟ್ಟುಬಿಟ್ಟು ಮಳೆಸುರಿಯುತ್ತಲೇ ಇತ್ತು. ಬೆಳಿಗ್ಗೆ ಸ್ವಲ್ಪ ಮಟ್ಟಿಗೆ ಜೋರಾಗಿಯೇ ಆರಂಭವಾಯಿತು. ಕೃಷಿ ಚಟುವಟಿಕೆಯ ಕೆಲಸಗಳಲ್ಲಿ ತೊಡಗಿಸಿಕೊಂಡವರು ಮಳೆಯಲ್ಲೇ ಅಲ್ಲಲ್ಲಿ ಕೆಲವೊಬ್ಬರು ಛತ್ರಿ ಹಿಡಿದುಕೊಂಡು ಓಡಾಡುತ್ತಿರುವುದು ದೃಶ್ಯ ಕಂಡುಬAತು. ಬೆಳಿಗ್ಗೆ ಒಂದಿಷ್ಟು ಸಮಯ ಬಿಡುವು ನೀಡಿ ಮಳೆ ಬಿಟ್ಟು ಬಿಟ್ಟು ಬೀಳುತ್ತಲೇ ಇತ್ತು. ಮಧ್ಯಾಹ್ನದ ವೇಳೆಗೆ ಜೋರಾಗಿ ಸುರಿಯುವುದು ಕಂಡುಬAದು.ನೀರಿನ ಮಟ್ಟ ಃ ನ್ಯಾಮತಿ ತಾಲೂಕಿನ ಹಳೇ ಮಳಲಿ , ಚೀಲೂರು , ಕೋಟೆಹಾಳ್ , ಮರಿಗೊಂಡನಹಳ್ಳಿ , ಕುರುವ , ಗೋವಿನಕೋವಿ ಗ್ರಾಮಗಳ ಮೂಲಕ ಹಾದು ಹೋಗುವ ತುಂಗಾಭದ್ರಾ ನದಿ ಯ ನೀರಿನ ಮಟ್ಟ 4.900 ಎಂ ಇದೆ.ಮಳೆಯ ವಿವರ ಃ ಸವಳಂಗ 20.0 ಮಿ.ಮೀ.ಬೆಳಗುತ್ತಿ 4.4 ಮಿ.ಮೀ.ಗೋವಿನಕೋವಿ 3.2 ಮಿ.ಮೀ. ಮಳೆಯಾಗಿರುವ ಬಗ್ಗೆ ಮಳೆ ಮಾಪಕದಲ್ಲಿ ದಾಖಲಾಗಿದೆ.