ನ್ಯಾನೋ ತಂತ್ರಜ್ಞಾನ ಪ್ರಗತಿಗೆ ಪೂರಕವಾಗಲಿ : ಪ್ರೂ ತುಳಸಿಮಾಲ

ವಿಜಯಪುರ:ಆ.3: ಇತ್ತೀಚಿನ ದಿನಗಳಲ್ಲಿ ತೀವ್ರಗತಿಯಲ್ಲಿ ಅಭಿವೃದ್ಧಿ ಹೂಂದುತ್ತಿರುವ ನ್ಯಾನೋ ವಿಜ್ಞಾನ ತಂತ್ರಜ್ಞಾನ ಕ್ಷೇತ್ರವು ದೇಶದ ಆಥಿಕ ಅಭಿವೃದ್ಧಿಗೆ ಪೂರಕವಾಗಬೇಕೆಂದು ಕನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿ.ವಿ. ಕುಲಪತಿ ಪ್ರೂ ಬಿ.ಕೆ. ತುಳಸಿಮಾಲಾ ಅವರು ಅಶಯ ವ್ಯಕ್ತಪಡಿಸಿದರು.
ಅವರು ಸ್ಥಳೀಯ ಸಿಕ್ಯಾಬ್ ಸಂಸ್ಥೆಯ ಎ.ಆರ್. ಎಸ್. ಇನಾಮದಾರ ಮಹಿಳಾ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಅಕಾಡೆಮಿ ಪ್ರಾಯೋಜಿತ ನ್ಯಾನೋ ಮೂಲವಸ್ತುಗಳು: ಅವಕಾಶಗಳು ಹಾಗೂ ಪ್ರಚಲಿತ ಪ್ರವೃತ್ತಿಗಳು ಎಂಬ ಎರಡು ದಿನಗಳ ರಾಜ್ಯ ಮಟ್ಟದ ಕಾಗಾರವನ್ನು ಉದ್ಧಾಟಿಸಿ ಮಾತನಾಡುತ್ತಿದರು. ಮುಂದುವರಿದು ಮಾತನಾಡಿದ ಅವರು ನ್ಯಾನೋ ತಂತ್ರಜ್ಞಾನವು ಭಾರತದಂತಹ ದೇಶದ ಆಹಾರ ಸ್ವಾವಲಂಬನೆ, ಆಹಾರ ಸಂರಕ್ಷಣೆ ಮತ್ತು ಪ್ರಕ್ರಿಯೆಗಳನ್ನು ಮತ್ತಷ್ಟು ಉತ್ತಮಗೂಳಿಸುವ ಮೂಲಕ ಬಡತನವನ್ನು ನಿರ್ಮೂಲನೆ ಮಾಡಲು ಯುವ ವಿಜ್ಞಾನಿಗಳು ಹಾಗೂ ಸಂಶೋಧಕರಿಗೆ ಕರೆನೀಡಿದರು.
ತಾಂತ್ರಿಕ ಗೋಷ್ಟಿಗಳಲ್ಲಿ ರಾಣಿಚೆನ್ನಮ್ಮ ವಿ.ವಿ.ಯ ರಸಾಯನಶಾಸ್ತೃ ವಿಭಾಗ ಮುಖ್ಯಸ್ಥರಾದ ಡಾ. ಜಯಪ್ಪಮಂಜಣ್ಣ ಅವರು ವಿವಿಧ ಉದ್ಯಮ ಕ್ಷೇತ್ರಗಳಲ್ಲಿ ನ್ಯಾನೋ ತಂತ್ರಜ್ಞಾನ ಬಳಕೆ ಕುರಿತು ಉಪನ್ಯಾಸ ನೀಡಿದರು. ಗೋಷ್ಠಯ ಅಧ್ಯಕ್ಷತೆಯನ್ನು ಬಿಎಲ್‍ಡಿ ಬಿ.ಎಮ್.ಪಾಟೀಲ ವ್ಯೆದ್ಯಕೀಯ ಮಹಾವಿದ್ಯಾಲಯದ ಜೀವರಾಸಾಯನಿಕಶಾಸ್ತೃ ವಿಭಾಗ ಪ್ರಾದ್ಯಾಪಕರಾದ ಡಾ. ನೀಲಿಮಾ ಡೋಂಗರೆ ವಹಿಸಿದ್ದರು. ನ್ಯಾನೋ ತಂತ್ರಜ್ಷಾನ ಹಾಗೂ ಮೂಲಭೂತ ಪರಿಕಲ್ಪನೆಗಳ ಕುರಿತು ಸೋಲ್ಲಾಪೂರ ವಿ.ವಿ.ಯ ಭೌತಶಾಸ್ತೃ ವಿಭಾಗ ಮುಖ್ಯಸ್ಥರಾದ ಪ್ರೂ ಶರದ್ ಶಿವಾಜಿ ಸೂರ್ಯವಂಶಿ ಉಪನ್ಯಾಸ ನೀಡಿದರು. ಗೋಷ್ಠಯ ಅಧ್ಯಕ್ಷತೆಯನ್ನು ಅಂಜುಮನ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎ.ಎನ್. ಚಟ್ಟರಕಿ ವಹಿಸಿದ್ದರು. ಪಾಲಿಮರ್ ವಿಜ್ಞಾನ ಕ್ಷೇತ್ರದಲ್ಲಿ ನ್ಯಾನೋತಂತ್ರಜ್ಞಾನ ಬಳಕೆ ಕುರಿತು ನಗರದ ಸರಕಾರಿ ಪದವಿ ಕಾಲೇಜಿನ ಭೌತಶಾಸ್ತೃ ವಿಭಾಗದ ಮುಖ್ಯಸ್ಥರಾದ ಪೆÇ್ರೀ.ಎ.ಎಸ್. ಕುಲಕಣಿ9 ಅವರು ಉಪನ್ಯಾಸ ನೀಡಿದರು. ಗೋಷ್ಠಿಯ ಅಧ್ಯಕ್ಷತೆಯನ್ನು ಅಂಜುಮನ್ ಕಾಲೇಜಿನ ಪೆÇ್ರೀ. ಸಯ್ಯದ ರಿಜ್ಯಾನ್ ವಹಿಸಿದ್ದರು. ಹೆಸರು ಸಂಶ್ಲೇಷಣೆ ಕ್ಷೇತ್ರದಲ್ಲಿ ನ್ಯಾನೋ ತಂತ್ರಜ್ಞಾನ ಅನ್ವಯಿಕತೆ ಕುರಿತು ಡಾ. ಅಜರ್ ದಫೆದಾರ ಉಪನ್ಯಾಸ ನೀಡಿದರು, ಅಧ್ಯಕ್ಷತೆಯನ್ನು ದಾವಣಗೆರೆ ವಿ.ವಿ. ಸಸ್ಯಶಾಸ್ತೃ ವಿಭಾಗದ ಡಾ. ಸಿದ್ದು ಬಿ.ಕೆ. ವಹಿಸಿದ್ದರು.
ಪವಿತ್ರ ಖುರಾನ್ ಹಾಗೂ ಭಗವದ್ಗೀತೆಯ ಪಠಣದೋದಿಗೆ ಆರಂಭವಾದ ಕಾರ್ಯಕ್ರಮದ ಅಧ್ಯಕ್ಷತೆಯ ಸಿಕ್ಯಾಬ್ ಸಂಸ್ಥೆಯ ನಿದೇಶಕರಾದ ಸಲಾವುದ್ದೀನ್ ಪುಣೇಕರ ವಹಿಸಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯರಾದ ಡಾ. ಮಹಮ್ಮದ್ ಅಫ್ಜಲ್ ಕಾರ್ಯಾಗಾರ ಹಾಗೂ ಕಾಲೇಜಿನ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಮೇಲೆ ಉಪಪ್ರಾಚಾರ್ಯರಾದ ಪೆÇ್ರೀ. ಮನೋಜ ಕೂಟ್ನಿಸ್ ಡಾ.ಎಸ್.ಎಚ್. ಮಲಘಾಣ, ಡಾ.ಎಲ್. ಐನದಾಫ್ ಉಪಸ್ಥತರಿದ್ದರು. ಪೆÇ್ರೀ ಎಚ್.ಕೆ. ಯಡಹಳ್ಳಿ ಅತಿಥಿಗಳನ್ನು ಸ್ವಾಗತಿಸಿ, ಪರಿಚಯಿಸಿದರು, ಪೆÇ್ರೀ. ಅಂಬರೀನ್ ಸಬಾ ಮುಲ್ಲಾ ವಂದನಾಪ9ಣೆ ನೆರವೇರಿಸಿದರು. ರಾಜ್ಯದ ವಿವಿದ ವಿಶ್ವವಿದ್ಯಾಲಯಗಳ ಪ್ರಾಧ್ಯಪಕರು, ಸಂಶೋಧನಾ ವಿಧ್ಯಾಥಿ9ಗಳು ಭಾಗವಹಿಸಿ ಸಂಶೋಧನಾ ಪ್ರಯೋಗಾಲಯದಲ್ಲಿ ಪ್ರಾತ್ಯಕ್ಷಿಕೆಗಳನ್ನು ನಿವ9ಹಿಸಿದರು ಕು. ಐಮನ್ ಅಪರಾದ ಹಾಗೂ ಕು. ವೈಷ್ಣವಿ ಕುಲಕಣಿ9 ಕಾರ್ಯಕ್ರಮ ನಿರೂಪಿಸಿದರು.