ನ್ಯಾನೋ ಚಿಕಿತ್ಸೆಯತ್ತ ವೈದ್ಯಕೀಯ ಕ್ಷೇತ್ರ: ಡಾ. ವಿವೇಕ ಜವಳಿ

ಕಲಬುರಗಿ:ಏ.13: ಇತ್ತೀಚಿನ ದಿನಗಳಲ್ಲಿ ನ್ಯಾನೋ ತಂತ್ರಜ್ಞಾನ ಆಧಾರಿತ ಚಿಕಿತ್ಸೆ ಶಸ್ತ್ರಚಿಕಿತ್ಸೆಯೇ ಬರಲಿದೆ ಬೆಂಗಳೂರಿನಲ್ಲಿ ಈಗಾಗಲೇ 38 ರೋಬೋಟ್‍ಗಳು ಶಸ್ತ್ರಚಿಕಿತ್ಸೆ ಮಾಡುತ್ತಿದ್ದು, ಸಾವಿರ ರೋಗಿಗಳ ಸರತಿಯಲ್ಲಿದ್ದಾರೆ. ಅದಕ್ಕೆ ತಕ್ಕಂತೆ ನಾವು ಹೊಸ ವಿಧಾನ ಅರಿಯುವ ಅಗತ್ಯವಿದೆ ಎಂದು ಬೆಂಗಳೂರು ಪೋರ್ಟಿಸ್ ಆಸ್ಪತ್ರೆ ಹೃದಯರೋಗ ತಜ್ಞ ಡಾ.ವಿವೇಕ ಜವಳಿ ಹೇಳಿದರು.

   ನಿನ್ನೆ ಗುಲಬರ್ಗಾ ವೈದಕೀಯ ವಿಜ್ಞಾನ ಸಂಸ್ಥೆಯಲ್ಲಿ (ಜಿಮ್ಸ್) ಶುಕ್ರವಾರದ ಆಯೋಜಿಸಿ 2018 ರ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳು ಉತ್ಕಷ್ಟ' ಆರೋಹಣ ಘಟಿಕೋತ್ಸವದಲ್ಲಿ ಗೌರವ ಅತಿಥಿಯಾಗಿ ಮಾತನಾಡಿದ ಅವರು ಭವಿಷ್ಯದಲ್ಲಿ ರೋಬೋಗಳ ಸಂಖ್ಯೆ ಹೆಚ್ಚಾಗಲಿದೆ. ವೈದ್ಯಕೀಯ ನ್ಯಾನೋ ಟೆಕ್ನಾಲಜಿ ಚಿಕಿತ್ಸೆಗೆ ಬೆಂಗಳೂರು ಹಬ್ ಆಗಲಿದೆ ಎಂದರು. 
ಹಲ್ಲಿನಲ್ಲಿ ಸಣ್ಣ ಕ್ಯಾಪುಲ್ ಬಿಟ್ಟರೆ ಇಡೇ ಹಲ್ಲು ಸ್ವಚ್ಪ ಮಾಡುತ್ತದೆ ಇಂತಹ ಅನೇಕ ಭಿನ್ನ-ವಿಭಿನ್ನ ನ್ಯಾನೋ ತಂತ್ರಜ್ಞಾನ ಬಂದಿದ್ದು, ವೈದ್ಯರಾದವರು ಒಂದೇ ಚಿಕಿತ್ಸ ವಿಧಾನಕ್ಕೆ ಮೀಸಲಾಗಿರದೆ ಬೇರೆ ವೇರೆ ವಿಷಯಗಳನ್ನು ಅರಿಯಬೇಕು ಎಂದರು.
    ಹೈದರಬಾದಿನ್ ಉಸ್ಮಾನಿಯಾ ಮೆಡಿಕಲ್ ಕಾಲೇಜು ಅರ್ಥೊಪಿಡಿಕ್ಸ್ ವಿಭಾಗದ ಪ್ರಾಧ್ಯಾಪಕ ಡಾ. ಮಹ್ಮದ್ ಅಬ್ಬಾಸ್ ಅಲ್ಲಿ ಮಾತನಾಡಿ, ಸಮಾಜ ವೈದ್ಯರಿಂದ ಅತ್ಯತ್ತಮ ಚಿಕಿತ್ಸೆ ಮಾತ್ರ ನಿರೀಕ್ಷಿಸುತ್ತಿದೆ. ರೋಗಿಗುಣ ಹೊಂದಿದರೆ ನಿಮಗೆ ಗೌರವದ ಜತೆಗೆ ಸದಾ ಸ್ಮರಿಸುತ್ತಾರೆ. ನೂತನವಾಗಿ ಹೊರಬರುವ ವೈದ್ಯ ವಿದ್ಯಾರ್ಥಿಗಳು ಉದ್ಯೋಗ ಭೀತಿ, ಆರ್ಥಿಕತೆ ಲೆಕ್ಕಾಚಾರ ಹಾಕುತ್ತಾರೆ. ವೈದ್ಯರಿಗೆ ಉದ್ಯೋಗ ಭೀತಿ ಬೇಡ, ಹಣದ ಚಿಂತೆ ಮಾಡಬೇಡಿ ಜೀವನ ಕೌಶಲ್ಯ 

ಅರಿತು ಉದ್ಯೋಗದಾತರಾಗಲು ಪ್ರಯತ್ನಿಸಿ ಹಣದ ನಿರ್ವಹಣೆ ಅರಿತು ಜೀವನ ಸಾಗಿಸಿ ಎಂದು ಕಿವಿಮಾತು ಹೇಳಿದರು.
ಹೊಸದಾಗಿ ವೈದ್ಯ ಪದವಿ ಪಡೆದವರು ರೋಗಿಗಳ ಬಗ್ಗೆ ನಿμÉ್ಠ ಹೊಂದಿರಬೇಕು. ಪ್ರತಿ ಕಾಳಜಿಯಿಂದ ಮಾತನಾಡಿ ರೋಗ ಮತ್ತು ಚಿಕಿತ್ಸೆ ಬಗ್ಗೆ ಮನವರಿಕೆ ಮಾಡಕೊಡಬೇಕು. ರೋಗಿಯ ಮನಸ್ಥಿತಿ ಕುಗಿಸುವ ಪ್ರಯತ್ನ ಮಾಡಬಾರದು ಎಂದರು.
ಜಿಮ್ಸ್ ನಿರ್ದೇಶಕ ಡಾ.ಉಮೇಶ ಎಸ್. ಆರ್. ಮಾತನಾಡಿ, ಹೊಸ ಜೀವನದ ಅಧ್ಯಯ ಆರಂಭವಾಗುತ್ತಿದೆ ಗುಣಮಟ್ಟದ ಚಿಕಿತ್ಸೆಗೆ ಆದ್ಯತೆ ನೀಡದಬೇಕು. ಉನ್ನತ ಶಿಕ್ಷಣ ಪಡೆದು ಸಾಧಕರಾಗಿ ಹೊರಮೊಮ್ಮಬೇಕು. ಜೀಮ್ಸನಲ್ಲಿ ಎಲ್ಲಾ ಘಟಕಗಳಿದ್ದು, ಆಸಕ್ತರು, ಚಿಕಿತ್ಸೆ ಜತೆಗೆ ಗುಣಮಟ್ಟದ ಶಿಕ್ಷಣವು ನೀಡಲಾಗುತ್ತಿದೆ. ಶೀಘ ್ರದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ಪ್ರಾರಂಭವಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ 144 ಪದವಿ, 14 ಚಿನ್ನದ ಪದಕ ಘಟಿಕೋತ್ಸವದಲ್ಲಿ 2018ರ ಬ್ಯಾಚ್‍ನ 144 ವಿದ್ಯಾರ್ಥಿಗಳಗೆ ಪದವಿ ಪ್ರದಾನ ಮಾಡಲಾಯಿತು. 14 ವಿಭಾಗದಲ್ಲಿ ಅತ್ಯುತ್ತಮ ಅಂಕಪಡೆದ 14 ವಿದ್ಯಾರ್ಥಿಗಳಿಗೆ 14 ಚಿನ್ನದ ಪದಕ ನೀಡಿ ಪೋತ್ಸಾಹಿಸಲಾಯಿತು.
ಡಾ. ಈಶ್ವರ ಜವಳಿ ಎಂಬಿಬಿಎಸ್ ಟಾಪರ್ ಅವರಗೆ ಸನ್ಮಾಸಲಾಯಿತು.
2018 ರ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳ ಘಟಿಕೋತ್ಸವ ಇಎನ್‍ಟಿ ವಿಭಾಗದ ಟಾಪರ್ ಡಾ. ದಿವ್ಯಾ ಪಡಶೆಟ್ಟಿ ಅವರಿ ಜಿಮ್ಸ್ ನಿರ್ದೇಶಕ ಡಾ. ಉಮೇಶ ಎಸ್. ಅರ್. ಪ್ರಶಸ್ತಿ ಪ್ರದಾನ ಮಾಡಿದರು.
ಇದೇ ಸಂದರ್ಭದಲ್ಲಿ ವೈದ್ಯಕೀಯ ಅಧೀಕ್ಷಕ ಶಿವಕುಮಾರ ಸಿ.ಎಸ್. ಡಾ. ಅಜಯಕುಮಾರ ಭಾರತಿ ಅರುಣ ಕುಮಾರ ಕುಲಕರ್ಣಿ ವಿಭಾಗದ ಮುಖ್ಯಸ್ಥರು, ಕಾಲೇಜಿನ ವಿದಾರ್ಥಿಗಳು ಹಾಗೂ ಪಾಲಕ-ಪೋಷಕರು ಇತರಿದ್ದರು