ನ್ಯಾಕ್ ತಂಡ ಮಹಿಳಾ ವಿವಿಗೆ ಭೇಟಿ., ಪರಿಶೀಲನೆ

ವಿಜಯಪುರ,ಡಿ.24:ರಾಷ್ಟ್ರೀಯ ಮೌಲ್ಯಾಂಕನ ಮಾನ್ಯತಾ ಮಂಡಳಿ (ನ್ಯಾಕ್)ಯ ಏಳು ಜನ ತಜ್ಞರನ್ನೊಳಗೊಂಡ ಉನ್ನತ ಮಟ್ಟದ ತಂಡ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಮೂರು ದಿನಗಳ ಪರಿಶೀಲನಾ ಕಾರ್ಯವನ್ನು ಶನಿವಾರ ಪೂರ್ಣಗೊಳಿಸಿತು.

ಹರಿಯಾಣದ ಭÀಗತ್ ಫೂಲ್‍ಸಿಂಗ್ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಡಾ.ಸುದೇಶ್ ಚಿಕಾರಾ ಅವರ ನೇತೃತ್ವದ ಏಳು ಜನ ತಜ್ಞರ ತಂಡ ವಿಜಯಪುರದಲ್ಲಿರುವ ವಿವಿಯ ಮುಖ್ಯ ಆವರಣ ಮತ್ತು ಸಿಂಧನೂರು ಹಾಗೂ ಮಂಡ್ಯ ಸ್ನಾತಕೋತ್ತರ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಕುಲಪತಿ ಪೆÇ್ರ.ಬಿ.ಕೆ.ತುಳಸಿಮಾಲ ಅವರ ಪಿಪಿಟಿ ನಿರೂಪಣೆಯೊಂದಿಗೆ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಯಿತು. ಪೆÇ್ರ.ತುಳಸಿಮಾಲ ಅವರು ತಮ್ಮ ಪ್ರಸ್ತುತಿಯಲ್ಲಿ ವಿಶ್ವವಿದ್ಯಾನಿಲಯದ ದೂರದೃಷ್ಟಿ, ಧ್ಯೇಯೋದ್ದೇಶಗಳನ್ನು ವಿವರಿಸಿದರು. ಶೈಕ್ಷಣಿಕ ಕಾರ್ಯಕ್ರಮಗಳು, ಕ್ಯಾಂಪಸ್‍ನಲ್ಲಿರುವ ಸೌಕರ್ಯಗಳು, ಶೈಕ್ಷಣಿಕ ನವ್ಯತೆ, ಪಠ್ಯಕ್ರಮ ವಿನ್ಯಾಸ ಮತ್ತು ಅಭಿವೃದ್ಧಿ, ಪಠ್ಯಕ್ರಮದ ಪುಷ್ಟೀಕರಣ, ಬೋಧನಾ ಕಲಿಕಾ ಪ್ರಕ್ರಿಯೆ, ಸಂಶೋಧನೆಗಾಗಿ ಪರಿಸರ ವ್ಯವಸ್ಥೆ, ವಿಶ್ವವಿದ್ಯಾಲಯದಲ್ಲಿ ಒದಗಿಸಲಾದ ಸಂಶೋಧನಾ ಸೌಲಭ್ಯಗಳು, ಸಂಶೋಧನಾ ಕೊಡುಗೆಗಳು, ಸಂಶೋಧನಾ ಫಲಿತಾಂಶಗಳು, ಮಹಿಳಾ ವಸ್ತುಸಂಗ್ರಹಾಲಯ, ಇ-ಆಡಳಿತ , ಹಣಕಾಸು ನಿರ್ವಹಣೆ, ಮತ್ತು ಗುಣಮಟ್ಟದ ಭರವಸೆ, ಸಾಂಸ್ಥಿಕ ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಗಳು, ಅತ್ಯುತ್ತಮ ಅಭ್ಯಾಸಗಳು ಮತ್ತು ವಿಶ್ವವಿದ್ಯಾಲಯದ ವಿಶಿಷ್ಟತೆ ಕುರಿತು ವಿವರಿಸಿದರು.

ಕುಲಪತಿಗಳ ವಿಚಾರ ಮಂಡನೆಯ ಸಂದರ್ಭದಲ್ಲಿ ಕುಲಸಚಿವ ಶಂಕರಗೌಡ ಸೋಮನಾಳ್, ಕುಲಸಚಿವ (ಮೌಲ್ಯಮಾಪನ) ಪೆÇ್ರ.ಎಚ್.ಎಂ.ಚಂದ್ರಶೇಖರ್, ಹಣಕಾಸು ಅಧಿಕಾರಿ ರಾಮಣ್ಣ ಅಥಣಿ, ಐಕ್ಯೂಎಸಿ ನಿರ್ದೇಶಕ ಪೆÇ್ರ.ಪಿ.ಜಿ.ತಡಸದ, ಉಪ ನಿರ್ದೇಶಕಿ ಪ್ರೊ.ರೇಣುಕಾ ಮೇಟಿ, ಸಹಾಯಕ ನಿರ್ದೇಶಕ ಡಾ.ಬಾಬು ಲಮಾಣಿ, ವಿವಿಧ ನಿಕಾಯದ ಡೀನ್‍ರು, ವಿವಿಧ ವಿಭಾಗಗಳÀ ಮುಖ್ಯಸ್ಥರು, ಸಂಯೋಜಕರು, ಅಧ್ಯಾಪಕರು ಉಪಸ್ಥಿತರಿದ್ದರು.

ಭೇಟಿ: ಕುಲಪತಿಗಳೊಂದಿಗೆ ಚರ್ಚೆ ನಡೆಸಿದ ನಂತರ ನ್ಯಾಕ್ ತಂಡದ ಸದಸ್ಯರು ಎರಡು ತಂಡಗಳಲ್ಲಿ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳು, ನಿರ್ದೇಶನಾಲಯಗಳು, ಅಧ್ಯಯನ ಕೇಂದ್ರಗಳು, ಮಹಿಳಾ ತಂತ್ರಜ್ಞಾನ ಪಾರ್ಕ್, ರಾಷ್ಟ್ರೀಯ ಸೇವಾ ಯೋಜನಾ ಕೋಶ, ಪ್ರಸಾರಾಂಗ, ಶಿಶುಪಾಲನಾ ಕೇಂದ್ರ, ವಸತಿ ನಿಲಯಗಳು, ಆಡಳಿತ ವಿಭಾಗ, ಶೈಕ್ಷಣಿಕ ವಿಭಾಗ, ಪರೀಕ್ಷಾ ವಿಭಾಗ, ಆರ್ಥಿಕ ವಿಭಾಗ, ಎಂಜನಿಯರಿಂಗ್ ವಿಭಾಗ, ಗ್ರಂಥಾಲಯ, ಕ್ರೀಡಾ ನಿರ್ದೇಶನಾಲಯ, ಕಂಪ್ಯೂಟರ್ ಕೇಂದ್ರ, ಕುಂದುಕೊರತೆ ನಿವಾರಣಾ ಘಟಕ, ರ್ಯಾಗಿಂಗ್ ತಡೆ ವಿಭಾಗ, ಸಿಡಿಸಿ, ಪಿಎಂಇ ಬೋರ್ಡ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕ, ಸಮಾನ ಅವಕಾಶ ಘಟಕ, ವೃತ್ತಿ ಮಾರ್ಗದರ್ಶನ ಘಟಕ, ಸ್ವಾಮಿ ವಿವೇಕಾನಂದ ಕೇಂದ್ರ, ಕನಕದಾಸ ಅಧ್ಯಯನ ಕೇಂದ್ರ, ಮೌಲಾನಾ ಆಜಾದ್ ಅಧ್ಯಯನ ಕೇಂದ್ರ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ, ಗಾಂಧೀ ಅಧ್ಯಯನ ಕೇಂದ್ರ, ಮಹಿಳಾ ಅಧ್ಯಯನ ಕೇಂದ್ರ, ಭಾಸ್ಕರಾಚಾರ್ಯ ಅಧ್ಯಯನ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಸದಸ್ಯ ಸಂಯೋಜಕ ಪೆÇ್ರ.ಜಾನಿ ಜೋಸ್ ಮತ್ತು ಪೆÇ್ರ.ತಿಲಕಂ ಸಿ ನೇತೃತ್ವದ ಪ್ರತ್ಯೇಕ ತಂಡ ಮಂಡ್ಯ ಪಿಜಿ ಸೆಂಟರ್‍ಗೆ ಆಗಮಿಸಿ ಪರಿಶೀಳನೆ ನಡೆಸಿತು. ಪ್ರೊ.ರಮೇಶ್ ಪ್ರಸಾದ್ ಪಾಠಕ್ ಹಾಗೂ ಪ್ರೊ.ಅಭಯ್ ಆನಂದ್ ಬೌರೈ ಅವರನ್ನೊಳಗೊಂಡ ತಂಡ ಸಿಂಧನೂರು ಸ್ನಾತಕೋತ್ತರ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಶನಿವಾರ ಮಧ್ಯಾಹ್ನ ನಡೆದ ನಿರ್ಗಮನ ಸಭೆಯಲ್ಲಿ ಕುಲಪತಿ ಡಾ.ಸುದೇಶ್ ಚಿಕಾರಾ ಅವರು ಕುಲಪತಿಗಳಿಗೆ ವರದಿ ಸಲ್ಲಿಸಿದರು.

ತಜ್ಞರ ತಂಡದ ಸಂಯೋಜಕರಾಗಿ ಅಸ್ಸಾಂನ ಡಾನ್ ಬಾಸ್ಕೋ ವಿಶ್ವವಿದ್ಯಾಲಯದ ಕುಲಸಚಿವ ಡಾ.ಜಾನಿ ಜೋಸ್, ಸದಸ್ಯರಾಗಿ ರಾಜಸ್ಥಾನದ ಮೋಹನ್‍ಲಾಲ್ ಸುಖದಿಯಾ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರೊ.ಸೀಮಾ ಮಲಿಕ್, ಮಹಾರಾಷ್ಟ್ರದ ನಾಂದೇಡದ ಸ್ವಾಮಿ ರಮಾನಂದ ತೀರ್ಥ ಮರಾಠವಾಡಾ ವಿಶ್ವವಿದ್ಯಾಲಯದ ಪ್ರೊ.ದೀಪಕ್ ಮೋಹನರಾವ್ ಶಿಂಧೆ, ತಮಿಳನಾಡಿನ ಮನೋನ್ಮಣಿಯಂ ಸುಂದ್ರನಾರ್ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ತಿಲಕಂ ಸಿ, ದೆಹಲಿಯ ಶ್ರೀ.ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಸಂಸ್ಕøತ ವಿಶ್ವವಿದ್ಯಾಲಯದ ಪ್ರೊ.ರಮೇಶ್ ಪ್ರಸಾದ್ ಪಾಠಕ್ ಹಾಗೂ ಉತ್ತರಾಖಂಡನ ಎಚ್‍ಎನ್‍ಬಿ ಗರ್ವಾಲ್ ವಿಶ್ವವಿದ್ಯಾಲಯದ ಪ್ರೊ.ಅಭಯ್ ಆನಂದ್ ಬೌರೈ ಕಾರ್ಯನಿರ್ವಹಿಸಿದರು.