ನೌಬಾದ್ ಕೆ.ಹೆಚ್.ಬಿ ಕಾಲೋನಿಯಲ್ಲಿ ಅಕ್ಕಮಹಾದೇವಿ ಜಯಂತಿ

ಬೀದರ್:ಎ.9: ಇತ್ತಿಚೀಗೆ ನೌಬಾದ್ ನ ಕೆಎಚ್‍ಬಿ ಕಾಲೋನಿಯ ದಕ್ಷಿಣಮುಖಿ ಹನುಮಾನ್ ಮಂದಿರದಲ್ಲಿ ಅಕ್ಕಮಹಾದೇವಿ ಜಯಂತಿ ನಿಮಿತ್ಯ ವಿವಿಧ ಕಾರ್ಯಕ್ರಮಗಳು ನಡೆದವು.
ಅಂದು ಮುಂಜಾನೆ ಏಳು ಗಂಟೆಗೆ ತೊಟ್ಟಿಲು, ಮಧ್ಯಾಹ್ನ ಮಹಾಪ್ರಸಾದ, ಸಾಯಂಕಾಲ ಅನಿಲಕುಮಾರ ಮಜ್ಜಿಗೆ ಅವರ ನೇತೃತ್ವದಲ್ಲಿ ಭಕ್ತಿ ಭಾವಗೀತೆಗಳು ಜರುಗಿತು.
ಇದಕ್ಕಿಂತ ಪೂರ್ವದಲ್ಲಿ ಅಕ್ಕಮಹಾದೇವಿ ಮಹಿಳಾ ಮಂಡಲದ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.
ಇದೇ ಸಂದರ್ಭದಲ್ಲಿ ಹಿರಿಯರಾದ ಪೆÇ್ರ. ಸುಭಾಷ ದೇವಪ್ಪ ಅವರ 67ನೇ ಹುಟ್ಟುಹಬ್ಬ ಆಚರಿಸಲಾಯಿತು.
ಕಾಲೋನಿಯ ವೆಲ್ಫೇರ್ ಸಂಸ್ಥೆಯ ಅಧ್ಯಕ್ಷ ಗುರುನಾಥ್ ಜಾಂತಿಕರ್, ರಾಜಶೇಖರ್ ನಾಗಮೂರ್ತಿ, ಬಾಬುರಾವ್ ಬಿರಾದಾರ್, ಧನರಾಜ್ ಮುರ್ಕಿ, ವಿಶ್ವನಾಥ ಮಾಡ್ಗೋಳ್, ಶಿವರಾಜ ರುದ್ರ, ರಾಜು ಲಕೋಟೆ, ಮಲ್ಲಿಕಾರ್ಜುನ ಸ್ವಾಮಿ, ಅನ್ನ ದಾಸೋಹಿ ಅರಹಂತ ಸಾವಳೆ ಮತ್ತು ಎಸ್. ಬಿ. ಕುಲಕರ್ಣಿ ಸುನಿಲ ಮಸೂದಿ ಹಾಜರಿದ್ದರು.
ಕೆ ಎಸ್. ಚಳಕಾಪುರೆ ಕಾರ್ಯಕ್ರಮ ನಿರೂಪಿಸಿದರು.