ನೌಕಾಪಡೆಯ 7ನೇ ಕಮಾಂಡಿಂಗ್ ಅಧಿಕಾರಿಯಾಗಿ


ಕ್ಯಾ. ಸುಶೀಲ್ ಮೇನನ್ ಅಧಿಕಾರ ಸ್ವೀಕಾರ
ಕಾರವಾರ, ಡಿ 4: ಭಾರತದ ಅತೀ ದೊಡ್ಡ ವಿಮಾನ ವಾಹಕ (ಏರ್ ಕ್ರಾಫ್ಟ್ ಕ್ಯಾರಿಯರ್) ಐ.ಎನ್.ಎಸ್ ವಿಕ್ರಮಾದಿತ್ಯದ ಭಾರತೀಯ ನೌಕಾಪಡೆಯ ಫ್ಲ್ಯಾಗ್‍ಶಿಪ್‍ನ ಏಳನೇಯ ಕಮಾಂಡಿಂಗ್ ಅಧಿಕಾರಿಯಾಗಿ ಕ್ಯಾಪ್ಟನ್ ಸುಶೀಲ್ ಮೆನನ್ ಇಂದು ಅಧಿಕಾರ ವಹಿಸಿಕೊಂಡರು.
2019 ಜನೆವರಿ 26 ರಂದು ವಿಶಿಷ್ಟ ಸೇವಾ ಪದಕದ ಗೌರವ ಪಡೆದಿರುವ ಇವರು, ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿ. ಐಎನ್‍ಎಸ್ ಕಾಕಿನಾಡ ಮತ್ತು ಐಎನ್‍ಎಸ್ ಘರಿಯಾಲ್, ಲ್ಯಾಂಡಿಂಗ್ ಶಿಪ್ ಟ್ಯಾಂಕ್ (ದೊಡ್ಡದು) ನಲ್ಲಿ ಅವರು ಆರಂಭಿಕ ಅವಧಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಐ.ಎನ್.ಎಸ್ ರಣವಿಜಯ್‍ನಲ್ಲಿ ತಮ್ಮ ವಿಶೇಷ ಅಧಿಕಾರಾವಧಿಯನ್ನು ಮತ್ತು ಐಎನ್‍ಎಸ್ ತಲ್ವಾರ್-ನಿರ್ದೇಶಿತ ಕ್ಷಿಪಣಿ ಫ್ರಿಗೇಟ್‍ನ ಕಮಿಷನಿಂಗ್ ಸಿಬ್ಬಂದಿಯಾಗಿ ಸಹ ಸೇವೆ ಸಲ್ಲಿಸಿದ್ದಾರೆ. ಯುಎಸ್‍ಎ ನೆವಲ್ ವಾರ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾದ ಇವರು ಪ್ರತಿಷ್ಠಿತ ರಾಬರ್ಟ್ ಇ ಬೇಟ್‍ಮ್ಯಾನ್‍ನ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಅಧಿಕಾರಿಯು ಮದ್ರಾಸ್ ವಿಶ್ವವಿದ್ಯಾನಿಲಯ ದಿಂದ ರಕ್ಷಣಾ ಮತ್ತು ಕಾರ್ಯತಂತ್ರದ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ (ಪ್ರಥಮ ದರ್ಜೆ) ಮತ್ತು ಮುಂಬೈ ವಿಶ್ವವಿದ್ಯಾನಿಲಯದಿಂದ ಎಂ.ಫಿಲ್ ಪದವಿಯನ್ನು ಪಡೆದಿದ್ದಾರೆ. ಸಿಬ್ಬಂದಿ ನೇಮಕಾತಿಗಳಲ್ಲಿ ನೌಕಾ ಪ್ರಧಾನ ಕಛೇರಿಯಲ್ಲಿನ ವೈಯಕ್ತಿಕ ಶಾಖೆಯಲ್ಲಿ ಅಧಿಕಾರಿಯಾಗಿ ಹಾಗೂ ಗೋವಾದ ನೇವಲ್ ವಾರ್ ಕಾಲೇಜಿನಲ್ಲಿ ನಿರ್ದೇಶಕ ಸಿಬ್ಬಂದಿ ಮತ್ತು ನೌಕಾಪಡೆಯ ಉಪ ಮುಖ್ಯಸ್ಥರಿಗೆ ನೌಕಾ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಾರೆ.
ಐ.ಎನ್.ಎಸ್ ವಿಕ್ರಮಾದಿತ್ಯದ ಕಮಾಂಡ್ ಅನ್ನು ವಹಿಸಿಕೊಳ್ಳುವ ಮೊದಲು ಅವರನ್ನು ನೌಕಾ ಪ್ರಧಾನ ಕಛೇರಿಯಲ್ಲಿ ತಂತ್ರದ ಪರಿಕಲ್ಪನೆಗಳು ಮತ್ತು ರೂಪಾಂತರದ ಕಮೋಡೋರ್ ಆಗಿ ನಿಯೋಜಿಸಲಾಗಿತ್ತು.
ಅವರು ಇಂದು ಭಾರತೀಯ ನೌಕಾದಳದ ದಿನದಂದು ದೇಶದ ಹೆಮ್ಮೆಯ ಏರ್‍ಕ್ರಾಫ್ಟ್ ಕ್ಯಾರಿಯರ್ ಐ.ಎನ್.ಎಸ್ ವಿಕ್ರಮಾದಿತ್ಯದ ಕಮಾಂಡಿಂಗ್ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವುದು ವಿಶೇಷ.