ನೌಕಾಪಡೆಯ ಹೆಲಿಕಾಪ್ಟರ್ ಪತನ; ಮೂವರು ಸಿಬ್ಬಂದಿ ರಕ್ಷಣೆ

ಮುಂಬಯಿ(ಮಹಾರಾಷ್ಟ್ರ), ಮಾ.೮-ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್ ನಗರದ ಹೊರವಲಯದ ಕರಾವಳಿಯಲ್ಲಿ ಅಪಘಾತಕ್ಕೀಡಾಗಿದ್ದು ಅದರಲ್ಲಿದ್ದ ಸಿಬ್ಬಂದಿಯನ್ನು ರಕ್ಷಿಸಲಾಗಿದೆ.
ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್ ಇಂದು ಮುಂಬೈ ಕರಾವಳಿಯಲ್ಲಿ ಅಪಘಾತಕ್ಕೀಡಾಗಿದ್ದು, ಸುಧಾರಿತ ಲಘು ಹೆಲಿಕಾಪ್ಟರ್ ದಿನನಿತ್ಯದ ವಿಹಾರದಲ್ಲಿದ್ದಾಗ ಈ ಘಟನೆ ಸಂಭವಿಸಿದೆ. ಹೆಲಿಕಾಪ್ಟರ್‌ನ ಮೂವರು ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.
ಭಾರತೀಯ ನೌಕಾಪಡೆ ಮುಂಬೈನ ಕರಾವಳಿ ತೀರಕ್ಕೆ ಬರುತ್ತಿದ್ದಂತೆ ತಾಂತ್ರಿಕ ದೋಷ ಕಾಣಿಸಿಕೊಂಡು ಹೆಲಿಕಾಪ್ಟರ್ ಅಪಘಾತಗೊಂಡಿದೆ.
ತಕ್ಷಣ ಪಾರುಗಾಣಿಕಾ ನೌಕಾ ಗಸ್ತು ಕ್ರಾಫ್ಟ್ ಮೂಲಕ ಮೂವರ ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ನೌಕಾಪಡೆ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ತಿಳಿಸಿದೆ. ಈ ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ.