ನೌಕಾಪಡೆಗೆ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ 8 ಮಂದಿ ಪಾರು

ಶಿರಸಿ (ಉ.ಕ),ನ.13-ಭಾರತೀಯ ನೌಕಾಪಡೆಗೆ ಸೇರಿದ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ತಾಲೂಕಿನ ದಾಸನಕೊಪ್ಪ ಬಳಿ
ತುರ್ತು ಭೂಸ್ಪರ್ಶ ಮಾಡಿದ್ದು ಅದರಲ್ಲಿದ್ದ 8 ಮಂದಿ ಸೇನಾ ಸಿಬ್ಬಂದಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ತುರ್ತು ಭೂಸ್ಪರ್ಶ ಮಾಡಿದ‌ ಹೆಲಿಕಾಪ್ಟರ್ ನೋಡಲು ಸ್ಥಳೀಯ ಜನರು ಮುಗಿಬಿದ್ದಿದ್ದು ಸ್ಥಳಕ್ಕೆ ಪೊಲೀಸರು ಧಾವಿಸಿ ಭದ್ರತೆ ಕೈಗೊಂಡಿದ್ದಾರೆ.
8 ಮಂದಿ ಸೇನಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ದಾಸನಕೊಪ್ಪದ ಎಪಿಎಂಸಿ ಗ್ರೌಂಡ್​​ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದ್ದು,ಇದು ಹೆಲಿಕಾಪ್ಟರ್​ ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿತ್ತು
ತಾಂತ್ರಿಕ ದೋಷ ಸರಿಪಡಿಸಲು ಗೋವಾದಿಂದ ತಜ್ಞರ ತಂಡವೊಂದು ಶಿರಸಿಗೆ ಆಗಮಿಸುತ್ತಿದೆ. ಇನ್ನು ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಆಗುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ.