
ಗುರುಮಠಕಲ್:ಎ.2:ವಿಧಾನಸಭಾ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸುವ ನೌಕರರ ಸಿಬ್ಬಂದಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ತಹಶೀಲ್ದಾರರು ಗುರುಮಠಕಲ್ ರವರ ಮುಖಾಂತರ ಮನವಿಯನ್ನು ಸಲ್ಲಿಸಲಾಯಿತು. ಈ ವೇಳೆ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾದ ಸಂತೋಷ್ ಕುಮಾರ ನಿರೇಟಿ ಯವರು ಮಾತನಾಡುತ್ತ.
ಮತಗಟ್ಟೆ ಸಿಬ್ಬಂದಿಗಳಿಗೆ ಸೂಕ್ತ ಭದ್ರತೆ ಒದಗಿಸುವುದು.
58 ವರ್ಷಕ್ಕೆ ಮೇಲ್ಪಟ್ಟ ನೌಕರರ ಸಿಬ್ಬಂದಿಗಳಿಗೆ ಚುನಾವಣಾ ಕರ್ತವ್ಯದಿಂದ ವಿನಾಯತಿ ನೀಡುವುದು.
ಚುನಾವಣಾ ಕರ್ತವ್ಯಕ್ಕೆ ತೆರಳುವ ನೌಕರರ ಸಿಬ್ಬಂದಿಗೆ ಸೂಕ್ತವಾದ ಕುಡಿಯುವ ನೀರು ಹಾಗೂ ಊಟ ಉಪಹಾರ ಮತ್ತು ತಂಗುವ ವ್ಯವಸ್ಥೆಯನ್ನು ಮಾಡುವುದು.
ಚುನಾವಣಾ ಕರ್ತವ್ಯ ನೇಮಕಗೊಂಡ ನೌಕರ ಸಿಬ್ಬಂದಿಗಳಿಗೆ ಅವರ ಮೂಲ ಸ್ಥಳಕ್ಕೆ ತೆರಳಲು ರಾತ್ರಿ ಆಗುತ್ತಿದ್ದು, ಅವರಿಗೆ ರಾತ್ರಿ ತೆರಳಲು ಸೂಕ್ತವಾದ ವಾಹನ ವ್ಯವಸ್ಥೆ ಮಾಡಲು ವಿನಂತಿಸುತ್ತೇವೆ.
ವಿಶೇಷವಾಗಿ ಅಂಗವಿಕಲ ನೌಕರರು ಒಂದು ವರ್ಷದ ಮಗುವನ್ನು ಹೊಂದಿದ ಹಾಗೂ ಗರ್ಭಿಣಿ ಮಹಿಳಾ ನೌಕರ ಸಿಬ್ಬಂದಿಗೆ ವಿನಾಯಿತಿ ನೀಡುವುದು.
ಗಂಭೀರ ಸ್ವರೂಪದ ಕ್ಯಾನ್ಸರ್ ಹೃದಯ ಸಂಬಂಧಿ ಹಾಗೂ ಡಯಾಲಿಸಿಸ್ ಇತ್ಯಾದಿ ಕಾಯಿಲೆಯುಳ್ಳ ನೌಕರರ ಸಿಬ್ಬಂದಿಯವರಿಗೆ ವಿನಾಯತಿ ನೀಡುವಂತೆ. ಮತಗಟ್ಟೆ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ವಿಶೇಷ ವಾಗಿ ಮಹಿಳಾ ಸಿಬ್ಬಂದಿ ಯವರಿಗೆ ಶೌಚಾಲಯ ಮತ್ತು ಪ್ರತ್ಯೇಕವಾದ ಕೊಠಡಿ ವ್ಯವಸ್ಥೆ ಕಲ್ಪಿಸುವ ಕುರಿತು ಹೀಗೆ ನಾನಾರೀತಿಯ ಸಮಸ್ಯೆ ಗಳನ್ನು ನಮ್ಮ ನೌಕರರು ಅನುಭವಿಸುತ್ತಿದ್ದು ಈ ಬಗ್ಗೆ ಸೂಕ್ತ ಗಮನ ಹರಿಸಿ ಸಮಸ್ಯೆಗಳಿಗೆ ಸ್ಪಂದಿಸಿ ನೌಕರರಿಗೆ ಅನುಕೂಲ ಕಲ್ಪಿಸಲು ಮನವಿ ಸಲ್ಲಿಸಿದರು ಈ ವೇಳೆ ಸರ್ಕಾರಿ ನೌಕರರು ಇದ್ದರು.