ನೌಕರರ ಸಂಘ-ರಾಜ್ಯಾಧ್ಯಕ್ಷರಾಗಿ ಅಮೃತ್‌ರಾಜ್ ಆಯ್ಕೆ

ರಾಮನಗರ.ನ೨೩:ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಸಂಘದ ರಾಜ್ಯಾಧ್ಯಕ್ಚರಾಗಿ ಅಮೃತ್ ರಾಜ್ ಅವರು ಅವಿರೋಧವಾಗಿ ಆಯ್ಕೆಯಾದರು.
ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರ ಸಂಘದ ವತಿಯಿಂದ ರಾಜ್ಯದ ೧೧ ಮಹಾನಗರ ಪಾಲಿಕೆಗಳಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ, ದಾವಣಗರ, ಮೈಸೂರು, ಹುಬ್ಬಳ್ಳಿ-ಧಾರವಾಡ , ಕಲಬುರಗಿ ಮಹಾನಗರಪಾಲಿಕೆ, ಶಿವಮೊಗ್ಗ, ಬೆಳಗಾವಿ ಮಹಾನಗರಪಾಲಿಕೆ, ಮಂಗಳೂರು, ತುಮಕೂರು, ವಿಜಯಪುರ, ಬಳ್ಳಾರಿ ಮಹಾನಗರಪಾಲಿಕೆಗಳ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಭೆಯನ್ನು ರಾಮನಗರದ ಹೊರವಲಯದಲ್ಲಿ ಖಾಸಗಿ ರೆಸಾರ್ಟ್ ನಲ್ಲಿ ಸೋಮವಾರ ಆಯೋಜಿಸಲಾಗಿತ್ತು.
ಸಭೆಯಲ್ಲಿ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಸಂಘ ರಾಜ್ಯಾಧ್ಯಕ್ಷರಾಗಿ ಅಮೃತ್ ರಾಜ್ ರವರನ್ನು ಅವಿರೋಧವಾಗಿ ಆಯ್ಕೆಯಾದರು.
ಸಂಘಸ ಮಾಜಿ ಅಧ್ಯಕ್ಷ ಗುರುಮೂರ್ತಿ, ಮಹಾನಗರ ಪಾಲಿಕೆ ಅಧ್ಯಕ್ಷರುಗಳಾದ ಬಸವರಾಜಯ್ಯ,
ವೆಂಕಟರಮಣ, ಗೋವಿಂದರಾಜು, ಪ್ರಹ್ಲಾದ್ ಕುಲಕರ್ಣಿ, ಪ್ರಸಾದ್ ಪೆರೂರು ವಿಶ್ವನಾಥ, ಮಾರಪ್ಪ, ಬಾಲಪ್ಪ, ಶಿರ್ ಪ್ಯಾದ್ ರವರು ರಾಜ್ಯಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಿ, ಒಕ್ಕೊರಲಿನಿಂದ ಘೋಷಣೆ ಮಾಡಿದರು.