ನೌಕರರ ವರ್ಗಾವಣೆಯಲ್ಲಿ ಸೇಡಿನ ರಾಜಕಾರಣ: ಬಿಡಿ ಪಾಟೀಲ

ಇಂಡಿ : ಜು.26:ಮತಕ್ಷೇತ್ರದ ಸುಮಾರು 50 ಸರ್ಕಾರಿ ನೌಕರರ ವರ್ಗಾವಣೆ ಮಾಡಿ ಸೇಡಿನ ರಾಜಕಾರಣ ಮಾಡಿದ್ದು ಇದರಲ್ಲಿ ಎ. ಸಿ.ಹಾಗೂ ಮೂವರು ಪಿ ಎಸ್ ಐ.ಕಂದಾಯ ಇಲಾಖೆ ಕೃಷಿ ಇಲಾಖೆ ವಿದ್ಯುತ್ ಇಲಾಖೆ,ಗೃಹ ಇಲಾಖೆ ಮುಂತಾದ ಇಲಾಖೆಯಲ್ಲಿ ಸೇವೆಯನ್ನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದು.ಆದರೆ ಕೇವಲ ಕೆಲವೊಂದು ಸರ್ಕಾರಿ ನೌಕರನ್ನು ಗುರಿಯಾಗಿಸಿ ಕೋಂಡು ವರ್ಗಾವಣೆ ಮಾಡಿದ್ದು ಖಂಡನಾರ್ಹ ಎಂದು ಬಿ ಡಿ ಪಾಟೀಲ ಕಿಡಿ ಕಾರಿದರು. ತಾಲೂಕಿನ ಸರಕಾರಿ ನೌಕರ ವರ್ಗಾವಣೆ ಖಂಡಿಸಿ ಇಂದು ಜೆಡಿಎಸ್ ನೇತೃತ್ವದಲ್ಲಿ ಉಪವಿಭಾಗಾಧಿಕಾರಿಳ ಕಚೇರಿಯ ಮುಂದೆ ಪ್ರತಿಬಟನೆಯಲ್ಲಿ ಮಾತನಾಡಿದ ಅವರು ಚುನಾವಣೆ ನಂತರ ಹೂಸ ಸರ್ಕಾರಗಳು ತಮ್ಮ ಆಡಳಿತದ ಅನುಕೂಲಕ್ಕಾಗಿ ವರ್ಗಾವಣೆ ಸರ್ವೇ ಸಾಮಾನ್ಯ.ಆದರೆ ದುರುದ್ದೇಶದಿಂದ ಕೂಡಿದ ವರ್ಗಾವಣೆಯಲ್ಲಿ ಅಮಾಯಕ ಸಾಮಾನ್ಯ ನೌಕರರ ವರ್ಗಾವಣೆ ಹೂಂದಿರುವುದು ದುಃಖಕರವಾಗಿದೆ, ಜೂನ್ ತಿಂಗಳಲ್ಲಿ ಮಕ್ಕಳ ಅಡ್ಮಿಶನ ಮಾಡಿ ಪೀ ಬರ್ತಿ ಮಾಡಿ ಶಾಲೆ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಶಿಕ್ಷಣ ಅತಂತ್ರವಾಗಿದೆ.ಅದರಲ್ಲಿ ವೃದ ತಂದೆ ತಾಯಿ ಯೋಗಕ್ಷೇಮ ಇವರದಾಗಿದೆ.ಏಕಾಏಕಿ ವರ್ಗಾವಣೆ ಯಿಂದ ದಿಕ್ಕು ಕಾಣದಂತಾಗಿದೆ ಕೂಡಲೆ ಸರ್ಕಾರ ಈ ವರ್ಗಾವಣೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಜೆಡಿಎಸ್ ಮುಖಂಡ ಅಯೋಬ ನಾಟೀಕರ ಮಾತನಾಡಿ ಮಾನ್ಯ ಶಾಸಕರು ಅಭಿನಂದನಾ ಸಮಾರಂಭದಲ್ಲಿ ಸರ್ವರನ್ನು ವಿಶೇಷವಾಗಿ ವಿರೋಧಿಗಳನ್ನು ಕೂಡಾ ಹೆಗಲ ಮೇಲೆ ಕೈಹಾಕಿ ಪ್ರೀತಿಯಿಂದ ಕಾಣುವದಾಗಿ ಹೇಳಿದ್ದನ್ನು ನೋಡಿದರೆ ನಾಲಿಗೆ ಮೇಲೆ ಒಂದು .ಕೃತಿಯಲ್ಲಿ ಇನ್ನೊಂದು ಎಂಬುದು ಕಂಡು ಬರುತ್ತದೆ.ಕೂಡಲೆ ಸರ್ಕಾರ ನೌಕರರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.ಉಪವಿಭಾಗಾಧಿಕಾರಿಗಳ ಅನುಪಸ್ಥಿತಿಯಲ್ಲಿ ಕಚೇರಿಯ ಅಧಿಕಾರಿ ಮುಜಗೋಂಡ ರವರಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಜೆಡಿಎಸ್ ಮುಖಂಡ ಅಯೋಬ ಪಾಟೀಲ, ರೇವಣಸಿದ್ದ ಗೋಡಕೆ, ಮಹಿಬೂಬ ಬೇವನೂರ, ಇಸ್ಮಾಯಿಲ್ ಕುಣಬಿ,ಮಾತನಾಡಿದರು, ಸಿದ್ದು ಡಂಗಾ,ರಾಜು ಮುಲ್ಲಾ,ಬಸುಗೌಡ ಬಿರಾದಾರ,ದುಂಡು ಬಿರಾದಾರ,ವಿ ಜಿ ಬಿರಾದಾರ, ಇರ್ಫಾನ್ ಅಗರಖೇಡ, ನಿಯಾಝ್ ಅಗರಖೇಡ, ಶರಣಪ್ಪ ಹೂಸೂರ, ಸುರೇಶ್ ಪೂಜಾರಿ, ಬಸವರಾಜ ಯಾಡಗಿ, ಮಾಳಪ್ಪ ಪೂಜಾರಿ, ಫಜಲು ಮುಲ್ಲಾ, ಸುದರ್ಶನ್ ಉಪಾಧ್ಯಾಯ,ಲಕ್ಕಿ ಲಚ್ಚ್ಯಾಣ,ಶಿವಾ ಟೆಂಗಳೆ , ಸದ್ದಾಂ ಕೋಟ್ನಾಳ ,ಭಾಷಾ ಇಂಡಿಕರ,ಮುಂತಾದ ನಾಯಕರು ಉಪಸ್ಥಿತರಿದ್ದರು