
ಸಂಜೆವಾಣಿ ವಾರ್ತೆ
ಹೊಸಪೇಟೆ ಫೆ23: ರಾಜ್ಯ ಸರ್ಕಾರಿ ನೌಕರರ ಹಳೆ ಪಿಂಚಣಿಯೋಜನೆ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾರ್ಚ್1ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಳ್ಳುವುದಾಗಿ ಜಿಲ್ಲಾ ನೌಕರರು ಸಂಘದ ಜಿಲ್ಲಾಧ್ಯಕ್ಷ ಜಿ.ಮಲ್ಲಿಕಾರ್ಜುನಗೌಡ ಹೇಳಿದರು.
ಈ ಕುರಿತು ಹೊಸಪೇಟೆ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2006 ರಿಂದ ಈ ವರೆಗೂ 2.60ಲಕ್ಷ ನೌಕರರು ಪಿಂಚಣಿ ಯೋಜನೆಯ ವ್ಯಾಪ್ತಿಯಿಂದ ಹೊರಗೂಳಿದಿದ್ದು ಇದು ನೌಕರರ ಭವಿಷ್ಯಕ್ಕೆ ಮಾರಕವಾಗಿದ್ದು ದೇಶದ ಛತ್ತೀಸ್ಗಢ, ಸೇರಿದಂತೆ ಕೆಲ ರಾಜ್ಯದಲ್ಲಿ ಹಿಂಪಡೆದಂತೆ ನಮ್ಮ ರಾಜ್ಯದಲ್ಲಿ ಹಿಂಪಡೆದು ನೌಕರರಿಗೆ ಸಹಾಯ ಮಾಡಬೇಕು ಎಂದು ಒತ್ತಾಯಿಸಿದರು.
ಭತ್ಯಗಳ ಪರಿಷ್ಕರಿಸಬೇಕು, 7ನೇ ವೇತನಾ ಆಯೋಗವನ್ನು ಒಂದು ವರ್ಷಗಳ ಹಿಂದೆಯೇ ಜಾರಿಗೊಳಿಸಲು ಮುಂದಾಗಬೇಕು, 2023-24ನೇ ಸಾಲಿನ ಆಯ-ವ್ಯಯದಲ್ಲಿ ಪ್ರಸ್ತಾಪವಿಲ್ಲದಿರುವುದು ನಿರಾಸೆಮೂಡಿಸಿದೆ ಈ ಹಿನ್ನಲೆಯಲ್ಲಿ ಮಾರ್ಚ್1 ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ತಿಳಿಸಿದರು.
ಜಿಲ್ಲಾಘಟಕದ ಕಡ್ಲಿ ವೀರಭದ್ರೇಶ, ಮುನಿವಾಸುದೇವರೆಡ್ಡಿ, ನಾಗಭೂಷಣ, ಜೀವಣ್ಣ, ಹನುಮಂತಪ್ಪ, ಕೆ.ಬಸವರಾಜ ಲತಾ ಸೇರಿದಂತೆ ಇತರರು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.