ನೌಕರರ ಬೇಡಿಕೆ ಈಡೇರಿಸಲು ಆಗ್ರಹಿಸಿ  ಅನಿರ್ಧಿಷ್ಟಾವಧಿ ಮುಷ್ಕರ ಆರಂಭ


ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ1: ರಾಜ್ಯ ಸರ್ಕಾರಿ ನೌಕರರ ಹಳೆ ಪಿಂಚಣಿಯೋಜನೆ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭವಾಗಿದೆ.
ಹೊಸಪೇಟೆ ಸೇರಿದಂತೆ ವಿಜಯನಗರ ಜಿಲ್ಲೆಯಾದ್ಯಂತ ಕಚೇರಿಗಳಿಗೆ ಬಾರದ ನೌಕರಿಗೆ ತಮ್ಮ  ಜೀವನದನೌಕರರಿಗೆ 7ನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸಬೇಕು, 2006 ರಿಂದ ಈ ವರೆಗೂ 2.60ಲಕ್ಷ ನೌಕರರು ಪಿಂಚಣಿ ಯೋಜನೆಯ ವ್ಯಾಪ್ತಿಯಿಂದ ಹೊರಗೂಳಿದಿದ್ದು ಇದು ನೌಕರರ ಭವಿಷ್ಯಕ್ಕೆ ಮಾರಕವಾಗಿದ್ದು ದೇಶದ ಪಂಜಾಬ್, ರಾಜಸ್ಥಾನ, ಛತ್ತೀಸ್ಗಢ, ಸೇರಿದಂತೆ ಕೆಲ ರಾಜ್ಯದಲ್ಲಿ ಹಿಂಪಡೆದಂತೆ ನಮ್ಮ ರಾಜ್ಯದಲ್ಲಿ ಹಿಂಪಡೆದು ನೌಕರರಿಗೆ ಭವಿಷ್ಯ ರೂಪಿಸಬೇಕು ಎಂದು ಒತ್ತಾಯಿಸಿದರು.
ಭತ್ಯಗಳನ್ನು ಪರಿಷ್ಕರಿಸಬೇಕು, 7ನೇ ವೇತನಾ ಆಯೋಗವನ್ನು ಒಂದು ವರ್ಷಗಳ ಹಿಂದಿನಿಂದಲೇ ಅನ್ವಯವಾಗುವಂತೆ  ಜಾರಿಗೊಳಿಸಬೇಕು ಎಂದರು.
ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಬೇಕು,
2023-24ನೇ ಸಾಲಿನ ಆಯ-ವ್ಯಯದಲ್ಲಿ ಪ್ರಸ್ತಾಪವಿಲ್ಲದಿರುವುದು ನಿರಾಸೆಮೂಡಿಸಿದೆ ಈ ಹಿನ್ನಲೆಯಲ್ಲಿ ಇಂದಿನಿಂದಲೇ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿರುವುದಾಗಿ ನೌಕರರು ಹೇಳಿದ್ದು ಹೇಳಿಕೆಯಂತೆ ಇಂದು ತಹಶಿಲ್ದಾರ ಕಛೇರಿ, ನಗರಸಭೆ ಸೇರಿದಂತೆ ಯಾವುದೆ ಕಛೇರಿಯಲ್ಲಿ ನೌಕರರಿಲ್ಲದೆ ಬಿಕೋ ಎನ್ನುತ್ತಿದ್ದು ತಹಶಿಲ್ದಾರರ ವಿಶ್ವಜೀತ್ ಮೇಹತಾ, ಪೌರಾಯುಕ್ತ ಮನೋಹರ್ ಮಾತ್ರ ಕಛೇರಿಯಲ್ಲಿ ಇರುವುದು ಕಂಡುಬಂತು.