ನೌಕರರು ಸದೃಢವಾಗಿದ್ದರೆ ಆಡಳಿತವೂ ಸದೃಢ

ಕೋಲಾರ,ಮಾ,೩- ನೌಕರರು ಸದೃಢವಾಗಿದ್ದರೆ ಆಡಳಿತವೂ ಸದೃಢವಾಗಿರುತ್ತದೆ ಆದ್ದರಿಂದ ವ್ಯವಸ್ಥಿತ ಜೀವನ ಕ್ರಮದಲ್ಲಿ ಕ್ರೀಡೆ,ವ್ಯಾಯಾಮ ನಿತ್ಯ ಬದುಕಿನ ಭಾಗವಾಗಿದ್ದರೆ ನೀವು ಕ್ರಿಯಾಶೀಲರಾಗಿದ್ದು ಜನರ ಸಮಸ್ಯೆಗಳಿಗೂ ಶೀಘ್ರ ಪರಿಹಾರ ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಡಾ.ಶಂಕರ್ ವಾಣಿಕ್ಯಾಳ್ ಕರೆ ನೀಡಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಸರ್ಕಾರಿ ನೌಕರರ ಸಂಘ, ಕ್ರೀಡಾ ಮತ್ತು ಯುವಸಬಲೀಕರಣ ಇಲಾಖೆ ಸಹಯೋಗದಲ್ಲಿ ನಗರದ ಪವನ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ, ಕ್ರೀಡಾ ಪಥ ಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ನಿಮ್ಮ ಕರ್ತವ್ಯ ನಿರ್ವಹಣೆ ಜತೆಯಲ್ಲಿ ಕ್ರೀಡೆ,ವ್ಯಾಯಾಮಕ್ಕೆ ಸಮಯ ನಿಗಧಿ ಮಾಡಿಕೊಳ್ಳಿ, ದುಶ್ಚಟಗಳಾದ ಬೀಡಿ,ಸಿಗರೇಟು, ತಂಬಾಕು ಉತ್ಪನ್ನಗಳ ಸೇವನೆಯಿಂದ ದೂರವಿರಿ ಅವುಗಳಿಂದ ಸಿಗುವ ಸಂತಸ ಕ್ಷಣಿಕ ಎಂಬ ಸತ್ಯ ಅರಿಯಿರಿ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ನೌಕರರ ಸಂಘದ ಅಧ್ಯಕ್ಷಜಿ.ಸುರೇಶ್‌ಬಾಬು ಮಾತನಾಡಿ,ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ ಮತ್ತವರ ತಂಡದ ನೆರವಿಗೆ ಧನ್ಯವಾದ ಸಲ್ಲಿಸಿದರು.ಪಥಸಂಚಲನಕ್ಕೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸರ ಬ್ಯಾಂಡ್‌ಸೆಟ್ ತಂಡ ನೌಕರರ ವಿವಿಧ ತಾಲ್ಲೂಕುಗಳ ತಂಡಗಳ ಪಥ ಸಂಚಲನದ ನೇತೃತ್ವ ವಹಿಸಿದ್ದು, ಅಪರ ಡಿಸಿಯವರು ಗೌರವ ವಂದನೆ ಸ್ವೀಕರಿಸಿದರು.
ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಅಜಯ್‌ಕುಮಾರ್, ರಾಜ್ಯಪರಿಷತ್ ಸದಸ್ಯ ಗೌತಮ್,ಖಜಾಂಚಿ ವಿಜಯ್,ಕಾರ್ಯಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ,ಗೌರವಾಧ್ಯಕ್ಷ ರವಿಚಂದ್ರ, ನಿಕಟಪೂರ್ವ ಅಧ್ಯಕ್ಷರುಗಳಾದ ಕೆ.ಎನ್.ಮಂಜುನಾಥ್, ಕೆ.ಬಿ.ಅಶೋಕ್, ಹಿರಿಯ ಉಪಾಧ್ಯಕ್ಷ ಸುಬ್ರಮಣಿ, ಉಪಾಧ್ಯಕ್ಷರುಗಳಾದ ಪುರುಷೋತ್ತಮ್, ಮಂಜುನಾಥ್, ನಂದೀಶ್, ಕೋರ್ಟ್‌ನಾಗರಾಜ್,ಸಹಕಾರ್ಯದರ್ಶಿ ಶಿವಕುಮಾರ್, ವಿವಿಧ ತಾಲ್ಲೂಕು ಅಧ್ಯಕ್ಷರುಗಳಾದ ನರಸಿಂಹಮೂರ್ತಿ, ಜನಾರ್ಧನ್, ಅಪ್ಪೇಗೌಡ, ಮುನೇಗೌಡ,ಕ್ರೀಡಾ,ಸಾಂಸ್ಕೃತಿಕ ಸಂಘದ ಎಂ.ನಾಗರಾಜ್,ಇಂಚರ ನಾರಾಯಣಸ್ವಾಮಿ,ವಿವಿಧ ಸಂಘಗಳ ಪದಾಧಿಕಾರಿಗಳಾದ ಎಸ್.ಚೌಡಪ್ಪ, ಕೆ.ಟಿ.ನಾಗರಾಜ್, ವಿ.ಮುರಳಿಮೋಹನ್,ಮುನಿಯಪ್ಪ, ಶ್ರೀರಾಮ್, ಡಿಪಿಒ ಮಂಜುನಾಥ್, ಸುನೀಲ್,ಸಂದೀಪ್ ಸೇರಿದಂತೆ ಎಲ್ಲ ಪದಾಧಿಕಾರಿಗಳು ನೌಕರರು ಹಾಜರಿದ್ದರು.