ನೌಕರರಿಗೆ ಶೇ 17ರಷ್ಟು ವೇತನ ಹೆಚ್ಚಳ ಭರವಸೆ ಮುಷ್ಕರ ವಾಪಸ್

??

ಆಳಂದ:ಮಾ.2: ಸರ್ಕಾರಿ ನೌಕರರು ಬುಧವಾರ ಬೇಡಿಕೆಗೆ ಒತ್ತಾಯಿಸಿ ರಾಜ್ಯದಾದ್ಯಂತ ಕೈಗೊಂಡಿದ್ದ ಮುಷ್ಕರ ಬಿಸಿಗೆ ರಾಜ್ಯ ಸರ್ಕಾರ ಶೇ 17ರಷ್ಟು ವೇತನ ಹೆಚ್ಚಳ ಭರವಸ ನೀಡಿದ ಹಿನ್ನೆಲೆಯಲ್ಲಿ ನೌಕರರ ಮುಷ್ಕರ ವಾಪಸ್ ಪಡೆದರು.
ಮುಷ್ಕರ ಹಿನ್ನೆಲೆಯಲ್ಲಿ ತಾಲೂಕು ಆಡಳಿತ, ಪುರಸಭೆ, ಆಸ್ಪತ್ರೆ ಸೇರಿದಂತೆ ಎಲ್ಲಾ ಸರ್ಕಾರಿ ಇಲಾಖೆಯ ಕಚೇರಿಗಳ ಕರ್ತವ್ಯಕ್ಕೆ ನೌಕರರು ಸಾಮೂಹಿಕವಾಗಿ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಕಚೇರಿಗೆ ಆಗಮಿಸಿದ್ದ ಸಾರ್ವಜನಿಕರ ಯಾವುದೇ ಕೆಲಸಗಳಾಗಲಿಲ್ಲ. ಅಲ್ಲದೆ, ಆಸ್ಪತ್ರೆಗೆ ಬಂದ ರೋಗಿಗಳು ಚಿಕಿತ್ಸೆಗಾಗಿ ಪರದಾಡಿದರು.
ಬಳಿಕ ರಾಜ್ಯ ಸರ್ಕಾರ ವೇತನ ಹೆಚ್ಚಳ ಘೋಷಣೆ ಮಾಡುತ್ತಿದ್ದಂತೆ ನೌಕರರು ಮುಷ್ಕರ ವಾಪಸ್ ಪಡೆದುಕೊಂಡರಾದರು, ಎನ್‍ಪಿಎಸ್ ನೌಕರರ ಹಳೆಯ ಪಿಂಚಣಿ ಜಾರಿಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಎನ್‍ಪಿಎಸ್ ನೌಕರರು ಅಸಮಾಧಾನ ಹೊರಹಾಕಿದರು.
ಆಡಳಿತ ಸೌಧನಲ್ಲಿ ತಹಸೀಲ್ದಾರ ಪ್ರದೀಪಕುಮಾರ ಹಿರೇಮಠ ಇದ್ದರು. ನೌಕರ ಸಂಘದ ಗೌರವ ಅಧ್ಯಕ್ಷ ಡಾ. ಸಂಜಯ ರೆಡ್ಡಿ, ಅಧ್ಯಕ್ಷ ಸಿದ್ಧರಾಮ ವಿ. ಪಾಟೀಲ ನೇತೃತ್ವದಲ್ಲಿ ಭಾಗವಹಿಸಿದ್ದ ಮುಷ್ಕರದಲ್ಲಿ ಭಾಗವಹಿಸಿದ್ದ ರಾಜ್ಯ ಪರಿಷತ್ ಸದಸ್ಯ ಉಮೇಶ ಮಡಿವಾಳ, ಉಪಾಧ್ಯಕ್ಷ ಶ್ರೀಕಾಂತ ಭೂಸನೂರ, ಜಿ.ಕೆ. ಅನ್ಸಾರಿ, ಶ್ರೀನಿವಾಸ್ ಕುಲಕರ್ಣಿ, ಮಹಾಂತೇಶ ಪಾಟೀಲ, ಕಾರ್ಯದರ್ಶಿ ಲೋಕಪ್ಪಾ ಜಾಧವ, ವಿಶ್ವನಾಥ ಘೋಡಕೆ, ಪ್ರೌಢ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಮಲ್ಲಿನಾಥ ಖರ್ಜುಗಿ, ಎನ್‍ಪಿಎಸ್ ಅಧ್ಯಕ್ಷ ಸತೀಷ ಷಣ್ಮೂಖ, ಮಹಾದೇವ ಗುಣಕಿ, ಕಂದಾಯ ಇಲಾಖೆ ಮಹಾದೇವ, ಪಶು ಇಲಾಕೆ ಜಗನಾಥ ಕುಂಬಾರ, ಶಿಕ್ಷಕ ಗುರುನಾಥ ಭಾವಿ, ಕಲ್ಯಾಣಪ್ಪ ಬಿಜ್ಜರಗಿ, ಪ್ರಕಾಶ ಹಿರೇಮಠ, ಸಂತೋಷ ವೇದಪಾಠಕ, ಆರೋಗ್ಯ ಇಲಾಖೆ ರಾವೂಫ್, ಶರಣು ಬಸವರಾಜ ಬೆಳಗೆ ಮತ್ತಿತರು ಪಾಲ್ಗೊಂಡಿದ್ದರು.