ನೋಸ್ಕಾಲ್ ಪೆಲ್ ವ್ಯಾಸೆಕ್ಟಮಿ ಕಾರ್ಯಕ್ರಮಕ್ಕೆ ಚಾಲನೆ

ಕೆ.ಆರ್.ಪೇಟೆ. ನ.13:- ಮಹಿಳೆಯರಂತೆ ಪುರುಷರು ಸಹ ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಮೂಲಕ ಜನಸಂಖ್ಯೆಯನ್ನು ನಿಯಂತ್ರಿಸಲು ಸಹಕಾರ ನೀಡಬೇಕು ಎಂದು ದುಂಡಶೆಟ್ಟಿಲಕ್ಷ್ಮಮ್ಮ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಎ.ರವಿ ಕರೆ ನೀಡಿದರು.
ಅವರು ಪಟ್ಟಣದ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ನೋಸ್ಕಾಲ್ ಪೆಲ್ ವ್ಯಾಸೆಕ್ಟಮಿ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.
ಪುರುಷರಿಗೆ ಇದೊಂದು ಸರಳ ಹಾಗೂ ಸುಲಭವಾದ ಸಂತಾನನಿರೋಧ ಶಸ್ತ್ರಚಿಕಿತ್ಸೆಯಾಗಿದ್ದು ಗಾಯವಿಲ್ಲದೇ, ಹೊಲಿಗೆ ಇಲ್ಲದೇ, ಪುರುಷತ್ವಕ್ಕೆ ಯಾವುದೇ ತೊಂದರೆಯಿಲ್ಲದೇ ಆಸ್ಪತ್ರೆಯಲ್ಲಿ ತಂಗದೇ, ಮಾಡಿಸಿಕೊಳ್ಳಬಹುದಾದ ಸುಲಭ ವಿಧಾನವಾಗಿದೆ ಇದರಿಂದ ಯವುದೇ ಶಕ್ತಿ ಕುಂದುವುದಿಲ್ಲ, ಬಲಹೀನತೆಯಾಗುವುದಿಲ್ಲ, ಎಂದಿನಂತೆ ಕೆಲಸಕಾರ್ಯಗಳನ್ನು ಮಾಡಬಹುದಾಗಿದೆ. ಈ ಶಸ್ತ್ರಚಿಕಿತ್ಸೆಗೆ ಒಳಗಾಗುವ ವ್ಯಕ್ತಿಗಳಿಗೆ ತಲಾ 1100 ರೂಪಾಯಿಗಳನ್ನು ಪೆÇ್ರೀತ್ಸಾಹಧನವನ್ನಾಗಿ ನೀಡಲಾಗುವುದು ಇದನ್ನು ಪೆÇ್ರೀತ್ಸಾಹಿಸಿದವರಿಗೆ 200 ರೂಪಾಯಿಗಳ ಪೆÇ್ರೀತ್ಸಾಹಧನ ನೀಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್, ಹಿರಿಯ ಆರೋಗ್ಯ ನಿರೀಕ್ಷಕರಾದ ಸತೀಶ್, ಧಮೇರ್ಂದ್ರ, ಹರಿಕೃಷ್ಣ, ಮಾಯಿಗಯ್ಯ, ಐಸಿಟಿಸಿ ಸತೀಶ್, ನಿರೀಕ್ಷಕರಾದ ನವೀನ, ಪ್ರಶಾಂತ್, ಕಿರಿಯ ಪಾರ್ಮಸಿ ಅಧಿಕಾರಿ ಧೀರಜ್, ಆಶಾ ಮೆಂಟರ್ ರೇಖಾ ಸೇರಿದಂತೆ ಆಶಾ ಹಾಗೂ ಆರೋಗ್ಯ ಕಾರ್ಯಕರ್ತೆಯರು ಹಾಜರಿದ್ದರು.