ನೋವು ತೋಡಿಕೊಂಡ ನಟಿ ಭಾವನಾ

ಬೆಂಗಳೂರು,ಸೆ.೨೧-ಕನ್ನಡ ಚಿತ್ರರಂಗದಲ್ಲಿ ಜಾಕಿ ಭಾವನಾ ಎಂದೇ ಪ್ರಸಿದ್ಧರಾಗಿರುವ ಕಾರ್ತಿಕಾ ಮೆನನ್ ಅವರು ದಕ್ಷಿಣ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಓರ್ವ ಖ್ಯಾತ ನಟಿ. ಕನ್ನಡ, ತೆಲಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದಾರೆ.ಸಿನೇಮಾಗಳಲ್ಲಿ ಬಣ್ಣ ಹಚ್ಚಿ ಅಭಿನಯಿಸುವ ತಾರೆಯರು ಬದುಕು ಹೂವಿನ ಹಾಸಿಗೆಯಲ್ಲ, ಅವರಿಗೂ ಅವರದೇ ಆದ ದುಗುಡ, ನೋವು ಇದೆ ಇರುತ್ತದೆ ಅವಕಾಶ ಸಿಕ್ಕಾಗ ಈ ಕುರಿತು ಮನಬಿಚ್ಚಿ ಮಾತನಾಡಿ ಹಗುರವಾಗುತ್ತಾರೆ.
ಜಾಕಿ’ ಚಿತ್ರ ಖ್ಯಾತಿಯ ಭಾವನಾಗೂ ಸಹ ಅವರದ್ದೇ ಆದ ನೋವಿದೆ.
ತಮ್ಮ ತೀರಿಹೋದ ತಂದೆಯ ಅನುಪಸ್ಥಿತಿ ಕುರಿತು ಸಂಕಟ ಪಡುವ ಭಾವನಾ ಈ ಕುರಿತು ತಮ್ಮ ನೋವು ಹೊರಹಾಕಿದ್ದಾರೆ.
ನನ್ನ ತಂದೆಯ ಸಾವಿನ ನೋವು ಯಾವಾಗಲೂ ಇರುತ್ತದೆ. ಹೊರನೋಟಕ್ಕೆ ಎಷ್ಟೇ ಖುಷಿಯಾಗಿದ್ದರೂ ಒಳಗಡೆ ನೋವು ಇದ್ದೇ ಇರುತ್ತದೆ. ತಂದೆ ಅಗಲಿ ೮ ವರ್ಷ ಕಳೆದರೂ ಆ ದುಃಖದಿಂದ ಹೊರಬರಲು ನನಗೆ ಸಾಧ್ಯವಾಗಿಲ್ಲ. ಜೀವನ ತುಂಬಾ ಬದಲಾಗಿದೆ. ಆದರೆ ತಂದೆ ಇಲ್ಲದಿರುವ ಕೊರತೆ ತುಂಬಾ ಕಾಡುತ್ತಿದೆ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.
ಭಾವನಾ ಅವರ ತಂದೆ ಬಾಲಚಂದ್ರನ್ ಅವರು ೨೦೧೫ ರಲ್ಲಿ ೫೯ ನೇ ವಯಸ್ಸಿನಲ್ಲಿ ನಿಧನರಾದರು. ಅವರ ಆರೋಗ್ಯವು ಹದಗೆಟ್ಟಿದ್ದರಿಂದ ಅವರನ್ನು ಆಸ್ಪತ್ರೆಗೆ ಕರೆತರಲಾಯಿತು. ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಬಾಲಚಂದ್ರನ್ ವೃತ್ತಿಯಲ್ಲಿ ಛಾಯಾಗ್ರಾಹಕರಾಗಿದ್ದರು. ತಂದೆ ಮೇಲಿನ ಪ್ರೀತಿಯಿಂದ ಭಾವನಾ ನೃತ್ಯವನ್ನು ಆಯ್ದುಕೊಂಡು ಚಿತ್ರರಂಗಕ್ಕೆ ಕಾಲಿಟ್ಟರು. ಮಗಳ ನಟನೆ ಮತ್ತು ನೃತ್ಯದ ಮೇಲಿನ ಆಸಕ್ತಿಯನ್ನು ನೋಡಿ ಮಗಳಿಗೆ ಸಿನಿಮಾದಲ್ಲಿ ನಟಿಸುವಂತೆ ಹೇಳಿದ್ದರಂತೆ.
ಕನ್ನಡ ಚಿತ್ರಗಳಲ್ಲಿ ಜಾಕಿ, ವಿಷ್ಣುವರ್ಧನ, ರೋಮಿಯೋ, ಟೋಪಿವಾಲಾ, ಮೈತ್ರಿ, ಮುಕುಂದ ಮುರಾರಿ , ಚೌಕಾ, ಟಗರು, ೯೯, ಇನ್‌ಸ್ಪೆಕ್ಟರ್ ವಿಕ್ರಮ್, ಭಜರಂಗಿ ೨, ಗೋವಿಂದ ಗೋವಿಂದ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.