ನೋವಾಕ್ ಜೋಕೋವಿಚ್ ಗೆ ಆಸ್ಟ್ರೇಲಿಯಾ ಒಪನ್ ಕಿರೀಟ

ಮೆಲ್ಬೋರ್ನ್, ಫೆ.21- ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ ಓಪನ್ ಕಿರೀಟ ಮುಡಿಗೇರಿದೆ.

ಮೆಲ್ಬೋರ್ನ್ ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ರಷ್ಯಾದ ಡೇನಿಯಲ್ ‌ಮೆಡ್ ವೆ ದೇವ್ ಅವರನ್ನು 7-5 ,6-2,6-2 ಸೆಟ್ ಅಂತರದಿಂದ ಪರಾಭವಗೊಳಿಸಿ ಜೋಕೋವಿಚ್ ಪ್ರಶಸ್ತಿ ಗಳಿಸಿದ್ದಾರೆ .

ಇದು ಅವರ 18ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ.

ರೋಜರ್ ಫೆಡರರ್ ಮತ್ತು ರಪೇಲ್ ನಡಾಲ್ ಅವರು ತಲಾ 20 ಗ್ರಾಂಡ್ ಸ್ಲಾಮ್ ಪ್ರಶಸ್ತಿ ಪಡೆದು ಅಗ್ರಸ್ಥಾನದಲ್ಲಿದ್ದಾರೆ ಅವರ ಸಮೀಪಕ್ಕೆ ತೆರಳಲು ನೋವಾಕ್ ಜೋಕೋವಿಚ್ ಗೆ ಎರಡು ಪ್ರಶಸ್ತಿ ಅಂತರವಿದೆ.

ಅಂತಿಮ ಪಂದ್ಯದಲ್ಲಿ ರಷ್ಯಾದ ಪ್ರತಿಸ್ಪರ್ಧಿ ಆಟಗಾರರಾದ 25 ವರ್ಷದ ಮೆಡ್ ವೆ ದೇವ್ ಅವರಿಂದ ತೀವ್ರ ಪೈಪೋಟಿ ಎದುರಾಯಿತು.ಅಂತಿಮ ವಾಗಿ ವಿಶ್ವದ ನಂಬರ್ ಒನ್ ಆಟಗಾರ 33 ವರ್ಷದ ನೊವಾಕ್ ಜೋಕೋವಿಚ್ ಎದುರು ಅವರು ಒಪ್ಪಿಕೊಳ್ಳುವಂತಾಯಿತು.

ರೋಡ್ ಲೆವರ್ ಅರೇನಾದಲ್ಲಿ ನಡೆದ ಅಂತಿಮ ಟೆನಿಸ್ ಪಂದ್ಯಾವಳಿಯಲ್ಲಿ 7000ಕ್ಕೂ ಹೆಚ್ಚು ಅಭಿಮಾನಿಗಳ ಸಮ್ಮುಖದಲ್ಲಿ ನೋವಾಕ್ ಜೋಕೋವಿಚ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು