ನೋಮಡ್ ಲ್ಯಾಂಡ್‌ಗೆ ಆಸ್ಕರ್ ಪ್ರಶಸ್ತಿ

ಲಾಸ್ ಏಂಜಲೀಸ್,ಏ.೨೬- ವಿಶ್ವದ ಶ್ರೇಷ್ಠ ಚಿತ್ರಗಳಿಗೆ ಕೊಡಮಾಡುವ ಆಸ್ಕರ್ ಪ್ರಶಸ್ತಿಯಲ್ಲಿ ಈ ಬಾರಿ “ನೋಮಡ್ ಲ್ಯಾಂಡ್”ಅತ್ಯುತ್ತಮ ಚಿತ್ರ ಗೌರವಕ್ಕೆ ಪಾತ್ರವಾಗಿದ್ದು ಇದರ ಜೊತೆಗೆ ಅತ್ಯುತ್ತಮ ನಟಿ ಮತ್ತು ನಿರ್ದೇಶಕಿ ಪ್ರಶಸ್ತಿಯನ್ನೂ ಈ ಚಿತ್ರ ಬಾಚಿಕೊಂಡಿದೆ.
ಬಾಲಿವುಡ್‌ನ ಖ್ಯಾತ ನಟ ದಿವಂಗತ ಇರ್ಫಾನ್ ಖಾನ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸುವ ಮೂಲಕ ಜಾಗತಿಕ ಸಿನಿಮಾ ಲೋಕ ನಟನಿಗೆ ಗೌರವ ಸಲ್ಲಿಸಿದೆ.
“ನೋಮಡ್ ಲ್ಯಾಂಡ್” ಚಿತ್ರದ ನಟನೆಗಾಗಿ ಪ್ರಾನ್ಸಿಸ್ ಮ್ಯಾಕ್ ಡೋನಾಲ್ಡ್ ಅತ್ಯುತ್ತಮ ನಟಿ , “ಅಪ್ ಸೆಟ್” ಚಿತ್ರಕ್ಕಾಗಿ ಅಂಥೋಣೀ ಹಾಪ್ ಕಿನ್ಸ್ ಅವರಿಗೂ ಪ್ರಶಸ್ತಿ ಬಂದಿದೆ. “ದಿ ಫಾದರ್” ಚಿತ್ರಕ್ಕಾಗಿ ದಿವಂಗತ ನಟ ಚಾಡ್‌ವಿಕ್ ಬೋಸ್‌ಮನ್ ಆಸ್ಕರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.ಇದರ ಜೊತೆಗೆ ಅತ್ಯುತ್ತಮ ಚಿತ್ರವಾದ ನೋಮಡ್ ಲ್ಯಾಂಡ್‌ನ ನಿರ್ದೇಶಕಿ ಚಾಲೋ ಜುಹಾ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿಗೆ ಕೊರಳೊಡ್ಡಿದ್ದಾರೆ
ಆಸ್ಕರ್ ಪ್ರಶಸ್ತಿ ಇತಿಹಾಸಲ್ಲಿ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಪಡೆದ ಎರಡನೇ ಮಹಿಳೆ ಎನ್ನುವ ಹಿರಿಮೆಯನ್ನು ಚಾಲೋ ಜುಹಾ ತನ್ನದಗಿಸಿಕೊಂಡಿದ್ದಾರೆ.
ಕೊರನೋ ಸೋಂಕು ಇರುವ ಹಿನ್ನೆಲೆಯಲ್ಲಿ ಈ ಬಾರಿ ಪ್ರೇಕ್ಷಕರು,ನಿರೂಪಕರಿಲ್ಲದೆ ೯೩ನೇ ಆಸ್ಕರ್ ಪ್ರಶಸ್ತಿ ಸಮಾರಂಭವನ್ನು ಲಾಸ್ ಏಂಜಲೀಸ್‌ನಲ್ಲಿ ನಡೆಸಲಾಯಿತು.ಪ್ರಶಸ್ತಿ ವಿಭಾಗಕ್ಕೆ ನಾಮ ನಿರ್ದೇಶನ ಗೊಂಡಿದ್ದ ಆಹ್ವಾನಿತರೆಲ್ಲಾ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗಿತ್ತು.ಅದರಂತೆ ಎಲ್ಲರೂ ಮಾಸ್ಕ್ ಧಾರಿಗಳಾಗಿದ್ದರು.
ಅತ್ಯುತ್ತಮ ಅಂತರಾಷ್ಟ್ರೀಯ ಚಿತ್ರ ಸೇರಿದಂತೆ ಮಾ ರೈನಿ ಚಿತ್ರ ಎರಡು ಆಸ್ಕರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಆಸ್ಕರ್ ಪ್ರಶಸ್ತಿ ಪಡೆದ ಅತ್ಯಂತ ಹಿರಿಯ ಮಹಿಳೆ ಎನ್ನವ ಗೌರವಕ್ಕೆ ಅನ್ನಾ ರೂತ್ ಪಾತ್ರರಾಗಿದ್ದಾರೆ. ಮಾ ರೈನಿ ಚಿತ್ರಕ್ಕಾಗಿ ಅವರು ಅತ್ಯುತ್ತಮ ಕಾಸ್ಟೂಮ್ ಡಿಸೈನ್‌ನಲ್ಲಿ ಆಸ್ಕರ್ ಪಡೆದಿದ್ದಾರೆ.
ಪೇಟ್ ಡಾಕ್ಟರ್ ಮೂರನೇ ಆಸ್ಕರ್ ಪ್ರಶಸ್ತಿ ಪಡೆದಿದ್ದರೆ ಕೊರಿಯಾದ ಯುಗ್ ಜಾಂಗ್ ಯುನ್ ಮೊದಲ ಆಸ್ಕರ್ ಪ್ರಶಸ್ತಿಯನ್ನು ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ,ಅತ್ಯುತ್ತಮ ಚಿತ್ರಕಥೆ ವಿಭಾಗದಲ್ಲಿ ಎಮೆರಾಲ್ಡ್ ಫೆನೆಲ್ ಮಾಂಕ್ ಚಿತ್ರಕ್ಕಾಗಿ ಆಸ್ಕರ್ ಪಡೆದಿದ್ದಾರೆ.

ನಾಮಡ್ ಲ್ಯಾಂಡ್- ಅತ್ಯುತ್ತಮ ಚಿತ್ರ
ಅಂಥೋಣಿ ಹಾಪ್ ಕಿನ್ಸ್- ಅತ್ಯುತ್ತಮ ನಟ- ಅಪ್‌ಸೆಟ್
ಪ್ರಾನ್ಸ್ ಮ್ಯಾಕ್ ಡೋರ್ಮಡ್- ಅತ್ಯುತ್ತಮ ನಟಿ- ನೋಮದ್ ಲ್ಯಾಂಡ್
ಚಾಹೋ ಜಾಹೋ- ಅತ್ಯುತ್ತಮ ನಿರ್ದೇಶಕಿ- ನೋಮದ್ ಲ್ಯಾಂಡ್
ಇರ್ಫಾನ್ ಖಾನ್, ಚಾಡ್‌ವಿಕ್ ಬೋಸ್ ಮನ್,ಭಾನು ಅಥೈಯಾ ಸೇರಿದಂತೆ ಹಲವರಿಗೆ ಗೌರವ
ಅತ್ಯುತ್ತಮ ಒರಿಜಿನಲ್ ಹಾಡು- ಜೂಡಸ್, ದಿ ಬ್ಲಾಕ್ ಮೆಸ್ಸೈ- ಡೈನ್ ವಾರೆನ್ (೧೨ನೇ ಆಸ್ಕರ್‍ಗಾಗಿ ನಾಮ ನಿರ್ದೇಶನ)
ಅತ್ಯುತ್ತಮ ಸಂಕಲನ- ಸೌಂಡ್ ಆಫ್ ಮೆಟಲ್ ಚಿತ್ರ- ಮೆಕೆಲ್ ಎಗ್
ಅತ್ಯುತ್ತಮ ಛಾಯಾಗ್ರಾಕ- ಮಾಂಕ್
ಅತ್ಯುತ್ತಮ ನಿರ್ಮಾಣ ವಿನ್ಯಾಸ-ಮಾಂಕ್
ಅತ್ಯುತ್ತಮ ಪೋಷಕ ಕಲಾವಿದ-ಯುಹ್ ?ಜಾಗ್ ಯೋನ್
ಅತ್ಯುತ್ತಮ ವಿಶ್ಯುಯಲ್ ಎಫೆಕ್ಟ್- ತೆನೆಟ್
ಅತ್ಯುತ್ತಮ ಸಾಕ್ಷಚಿತ್ರ ಚಿತ್ರ- ಮೈ ಅಕ್ಟೋಪಸ್ ಟೀಚರ್
ಅತ್ಯುತ್ತಮ ಅನಿಮೇಟೆಡೆ ಚಿತ್ರ- ಸೋಲ್