ನೋಪಿ ಗೌರಮ್ಮ ಸಂಪ್ರದಾಯ ಬಿಡದ ಮಹಿಳೆಯರು

ಸಂಡೂರು ನ:17 ಹಿಂದು ಧರ್ಮದ ಧಾರ್ಮಿಕ ಸಂಪ್ರದಾಯಗಳು ಆಚರಣೆಯಲ್ಲಿದ್ದು, ದೀಪಾವಳಿ ಅಮವಾಸ್ಯೆ ಎಂದರೆ, ಮಹಿಳೆಯರಿಗೆ ಹಬ್ಬದ ಮಹತ್ವದ ದಿನ ಅಂದು, ನೋಪಿ ನೂಲುವ ಸಂಪ್ರದಾಯ. ಮರುದಿನ ಗೌರಮ್ಮನಿಗೆ ಹೋಳಿಗೆ ಎಡೆ ಮಾಡಿಕೊಂಡು ಹಳೆದಾರವನ್ನು ತೆಗೆದುಕೊಂಡು ಹೋಗಿ ಹೊಸದಾರವನ್ನು ಹಾಕಿಕೊಂಡು ಪೂಜೆಗೆ ಮಂಗಳ ಹಾಡುವುದು ಪ್ರಮುಖ. ಕೆಲವರು 21 ಕರ್ಜಿಕಾಯಿ ಮತ್ತೆ ಕೆಲವರು 21 ಉತ್ತತ್ತಿ, ಮತ್ತೆ ಕೆಲವರು 21 ಕರಿಗೆಡು, ಜೊತೆಗೆ 21 ಚಂಡುಹೂವು ಅನೇಕ ರೀತಿಯಿಂದ ಮಹಿಳಯೆರು ಗೌರಮ್ಮನಿಗೆ ಹರಕೆ ಸಲ್ಲಿಸಿ ವಾಪಾಸು ಬರುವುದು ವಾಡಿಕೆಯಾಗಿದ್ದು, ಇದು ಎಲ್ಲಾರಿಗೂ ಗೊತ್ತಿರುವ ವಿಚಾರ ಕೆಲವರು ದೀಪಾವಳಿ ಪಾಡ್ಯದಂದು ಗೋವಿನ ಸಗಣಿಯಿಂದ ಸಾರಿಸಿ, ಪಾಂಡವರ ಮೂರ್ತಿ ಮಾದರಿಗಳನ್ನು ಮಾಡಿ ಹೂವುಗಳನ್ನ ಅಲಂಕರಿಸಿ ಅಂಗಳ ಹಾಗೂ ಹೊಸ್ತಿಲಲ್ಲಿ ಪೂಜೆ ಸಲ್ಲಿಸುವುದು ವಾಡಿಕೆ.

ನೂಲುವುದು ಎಂದರೇನು ? : ತಮ್ಮ ಪತಿ ಆಯುಷ್ಯ ಹೆಚ್ಚಿಸಲು, ಮಕ್ಕಳಿಲ್ಲದವರು ಮಕ್ಕಳಾಗುವಂತೆ ಪ್ರಾರ್ಥಿಸುವುದು, ಜೊತೆಗೆ ಮಕ್ಕಳಿಗಾಗಲೀ, ತಮಗಾಗಲೀ, ವಿನೂತನವಾಗಿ ಕಾಯಿಲೆಗಳು ಹೆಚ್ಚಾದಾಗ, ಮಹಿಳೆಯರು ಬೇಡಿಕೊಂಡು ಹರಕೆಯನ್ನ ಸಲ್ಲಿಸುತ್ತಾರೆ. ಬಯಕೆಗಳು ಈಡೇರಿದಾಗ ಯಾರು ಹರಕೆಯ ಬಯಕೆಯನ್ನ ಅಂದುಕೊಳ್ಳುತ್ತಾರೋ ಅಂಥಹ ಮಹಿಳೆಯರು ತಮ್ಮ ಜೀವಿತಾಅವದಿಯವರೆಗು ಹರಕೆಯನ್ನ ತೀರಿಸುತ್ತಾ ಹೋಗುತ್ತಾರೆ. ನಂತರ ಈ ಹರಕೆಯ ಹೊಣೆಗಾರಿಕೆಯನ್ನ ಅವರ ಕುಟುಂಬದವರು ತೆಗೆದುಕೊಳ್ಳಬಹುದು ಅಥವಾ ಬಿಡಬಹುದು. ಅವರ ಪಾಲಿಗೆ ಬಿಟ್ಟ ವಿಚಾರ. ಹಳೆಯ ಕಾಲದಿಂದಲೂ ಈ ರೀತಿಯ ಸಂಪ್ರದಾಯ ಕಂಡುಬಂದಿದ್ದು, ಈಗಿನ ಯುವ ಪೀಳಿಗೆಯ ಮಹಿಳೆಯರು ಗೌರಮ್ಮ ಎಂದರೆನು ? ನೋಪಿ ಎಂದರೆನು ? ನೂಲುವುದು ಎಂದರೇನು ? ಹೀಗೆ ನೊರಾರು ಪ್ರಶ್ನೆಗಳನ್ನ ಕೇಳುವುದು ವಾಡಿಕೆ ಅವರವರ ಅನುಭವಗಳು ದಾರಿ ದೀಪವಾಗಿದೆ. ನೋಪಿ ಗೌರಮ್ಮನ ಪ್ರತಿಷ್ಠಾಪನೆ 6ನೇ ವಾರ್ಡಿನಲ್ಲಿ ರಾಬಿಕ್ಕಿ ಮಂಜುನಾಥ ರವರ ಮನೆಯಲ್ಲಿ, 8ನೇ ವಾರ್ಡಿನಲ್ಲಿ ಉಗ್ರಾಣದ ಮೆನತನದ ಮನೆಯವರಲ್ಲಿ ತಾಯಿಗೆ ಹರಕೆಯನ್ನ ಸಲ್ಲಿಸುವಾಗ ಇಂಥಹ ಮನೆಯಲ್ಲಿಯೇ ಸಲ್ಲಿಸಬೇಕು. ಎನ್ನುವ ನಿಯಮವಿಲ್ಲ. ಅವರವರ ಭಾವಕ್ಕೆ ಅವರವರ ಭಕುತಿಗೆ ಇರುತಿಹನು ಶಿವಯೋಗಿ ಎನ್ನುವ ಮುಪ್ಪಿನ ಷರಾಕ್ಷರಿಯವರ ಅಮೃತವಾಣಿಯಂತೆ ಅವರ ಭಕ್ತಿಯೇ ಅವರಿಗೆ ವರವಾಗಿ ಪರಣಮಿಸಲು ಕಾರಣ.