ನೋಡಿದವರು ಏನಂತಾರೆ…!

“ಗುಳ್ಟು” ಚಿತ್ರದ ಮೂಲಕ ನಟನಾಗಿ ಪರಿಚಯವಾದ ‘ ನವೀನ್‌ ಶಂಕರ್.’ ಈಗ “ನೋಡಿದವರು ಏನಂತಾರೆ” ಅಂದುಕೊಳ್ಳಯತ್ತಾರೋ ಎನ್ನುವ ಗಿಲ್ಟ್ ನಲ್ಲಿದ್ದಾರೆ..
ಅರೆ ಗಾಬರಿಯಾಗುವುದು ಬೇಡೆ ಹೊಸ ಚಿತ್ರದ ಹೆಸರು ನೋಡಿದವರು ಏನಂತಾರೆ’.
ಕುಲ್ ದೀಪ್ ಕಾರಿಯಪ್ಪ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರವನ್ನು ನಾಗೇಶ್‌ ಗೋಪಾಲ್‌ ಮತ್ತು ಮೋನಿಷಾ ಗೌಡ ನಿರ್ಮಿಸುತ್ತಿದ್ದಾರೆ.
ಚಿತ್ರದ ಶೀರ್ಷಿಕೆ ಅನಾವರಣ ಮಾಡಿ ನಟ ಶ್ರೀ ಮುರುಳಿ ಮತ್ತಿತರರು ಶುಭಹಾರೈಸಿದ್ದಾರೆ.
ಈಗಾಗಲೇ ಚಿತ್ರವನ್ನು ಚಿಕ್ಕಮಗಳೂರು, ಮತ್ತು ಬೆಂಗಳೂರಿನಲ್ಲಿ ಎರಡು ಹಂತರ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಇನ್ನುಳಿದ ಭಾಗಗಳನ್ನು ಗೋಕರ್ಣ, ಕೊಡಗು, ಹಂಪಿ, ಮುಂಬೈ ಮುಂತಾದೆಡೆ ಚಿತ್ರೀಕರಿಸಲಾಗುತ್ತಿದೆ.
ನಮಗಾಗಿ ನಾವು ಬದುಕೋದಕ್ಕೆ ಸಾಧ್ಯಾನಾ? ಅಥವಾ ನೋಡಿದವರು ಏನಂತಾರೆ ಅನ್ನೋ ಕಾರಣಕ್ಕೆ ಕೃತಕವಾಗಿ ಬದುಕುತ್ತಿರಬೇಕಾ? ಈ ಎಲ್ಲ ಅಂಶಗಳನ್ನೇ ಸರಕಾಗಿಸಿಕೊಂಡು ಸಿನಿಮಾ ಮಾಡುತ್ತಿದ್ದೇವೆ. ಸಿದ್ದಾರ್ಥ್‌ ಎನ್ನುವ ಹುಡುಗನ ಬದುಕಿನ ಪಯಣಅನಾವರಣಗೊಳಿಸುವ ಕಥೆ ನಮ್ಮ ಚಿತ್ರದಲ್ಲಿದೆʼʼ ಎಂದರು ನಿರ್ದೇಶಕ ಕಾರಿಯಪ್ಪ.
ಕಾಡಿನ ನಡುವೆ ಹಳ್ಳಿ ಮನೆಯ ಸೆಟ್‌ ನಿರ್ಮಿಸಿ ಚಿತ್ರೀಕರಣ ನಡೆಸಲಾಗಿದೆ‌. ನಟ ನವೀನ್‌ ಶಂಕರ್‌ ಅವರ ಗುಲ್ಟೂ ಚಿತ್ರದ ಪಾತ್ರಕ್ಕೂ ಈ ಚಿತ್ರದ ಕ್ಯಾರೆಕ್ಟರಿಗೂ ಸಂಪೂರ್ಣ ಕಾಂಟ್ರಾಸ್ಟ್‌ ಇದೆ. ಆದರೆ, ಅಲ್ಲಿನಂತೆ ಈ ಚಿತ್ರದ ಪಾತ್ರದಲ್ಲೂ ಕೂಡಾ ಸಂಘರ್ಷದ ಗುಣವಿದೆ ಎನ್ನುವ ವಿವರಣೆ ಅವರದು
ನಟಿ ನಟಿ ಅಪೂರ್ವ ಭಾರದ್ವಾಜ್,ಮೊದಲ ಬಾರಿಗೆ ಕಮರ್ಷಿಯಲ್‌ ಚಿತ್ರದಲ್ಲಿ‌ ನಟಿಸುತ್ತಿದ್ದು,‌ ನವೀನ್‌ ಅವರಂತ ನಟನ ಜೊತೆ ತೆರೆ ಹಂಚಿಕೊಂಂಡಿರುವುದು ಖುಷಿ ಸಂಗತಿ ಎಂದರು
ಚಿತ್ರದಲ್ಲಿ ಪ್ರಯಾಣ ಹೆಚ್ಚಿರುವುದರಿಂದ ಲೊಕೇಷನ್ ಗಳು ಕೂಡಾ ಸಾಕಷ್ಟಿವೆಯಂತೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಎಲ್ಲವನ್ನೂ ಜಯಂತ್‌ ಕಾಯ್ಕಿಣಿ ಬರೆಯುತ್ತಿದ್ದಾರೆ. ಮಯೂರೇಶ್‌ ಅಧಿಕಾರಿ ಸಂಗೀತ,ಅಶ್ವಿನ್‌ ಕೆನ್ನೆಡಿ ಛಾಯಾಗ್ರಹಣವಿದೆ.
ರಮ್ಯ ಕೃಷ್ಣ ಮತ್ತು ಇತರರ ತಾರಾಗಣ ಈ ಚಿತ್ರದಲ್ಲಿದೆ.