ನೋಡದ ಪುಟಗಳು ಕುತೂಹಲ ಹೆಚ್ಚಳ..

ನೈಘ ಘಟನೆಗಳನ್ನು ಮುಂದಿಟ್ಟುಕೊಂಡು ಸಿನಿಮಾ ಮಾಡುವ ಪ್ರವೃತ್ತಿ ಹೆಚ್ಚಾಗಿದ್ದು ಇದೀಗ ಆ ಸಾಲಿಗೆ “ನೋಡದ ಪುಟಗಳು ” ಚಿತ್ರ ಕೂಡ ಸೇರ್ಪಡೆಯಾಗಿದೆ.

ಜೀವನಪೂರ್ತಿ ತಿರುವುಗಳು ಬರುತ್ತದೆ. ತಿರುವು ಬರುವ ತನಕ ಕಾಯಬೇಕು’ ಎಂದು ಇಂಗ್ಲೀಷ್‌ನಲ್ಲಿ  ಅಡಿಬರಹವಿದೆ. ಬಿಡುಗಡೆಯಾಗಿರುವ ಟ್ರೇಲರ್‌ಗೆ ಸುಚೇಂದ್ರಪ್ರಸಾದ್ ಧ್ವನಿ ನೀಡಿರುವುದು ಚಿತ್ರದ ಬಗ್ಗೆ ಮತ್ತಷ್ಟು  ತೂಕ ಬಂದಿದೆ.

ಎಸ್.ವಸಂತ್‌ಕುಮಾರ್  ” ನೋಡದ ಪುಟಗಳು” ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಅಶ್ವಿನಿ ಪುನೀತ್‌ರಾಜ್‌ಕುಮಾರ್ ತುಣುಕು ವೀಕ್ಷಿಸಿ ತಂಡಕ್ಕೆ ಶುಭ ಹಾರೈಸಿದ್ದಾರೆ.

ವರ್ಷ ವರ್ಷ ನಿರ್ದಿಷ್ಟ ಅವಧಿಯಲ್ಲಿ ಒಂದಷ್ಟು ಘಟನೆಗಳು ಜರುಗುತ್ತವೆ. ಮುಂದೆ ಇದರ ಆಧಾರದ ಮೇಲೆ ಸಣ್ಣ ಏಳೆ ಮುಂದಿಟ್ಟುಕೊಂಡು ಮಾಡಿದ ಸಿನಿಮಾ ಇದು.

ಚಿತ್ರ ಇದೇ  ಶುಕ್ರವಾರ ತೆರೆಗೆ ಬರುತ್ತಿದೆ.ಈ ಕುರಿತು ನಿರ್ದೇಶಕ ವಸಂತ ಕುಮಾರ್ ಮಾಹಿತಿ ನೀಡಿ, ಚಿತ್ರದಲ್ಲಿ ನಾಲ್ಕು ವಯೋಮಾನದವರ ಸನ್ನಿವೇಶಗಳು ಬಂದು ಹೋಗುತ್ತದೆ. ಎಲ್ಲವೂ ಸೇರಿದರೆ ಕ್ಲೈಮಾಕ್ಸ್ ಆಗುತ್ತದೆ. ಆದರೆ ಒಬ್ಬರಿಗೊಬ್ಬರು ಭೇಟಿ ಆಗುವುದಿಲ್ಲ. ಎಲ್ಲರ ಬದುಕಿನಲ್ಲಿ ಕೆಟ್ಟ ಸಮಯ ಬಂದೇ ಬರುತ್ತೆ. ಅದು ನಮ್ಮನ್ನು ಹತೋಟಿಯಲ್ಲಿಡುತ್ತದೆ. ಇಲ್ಲದೆ ಹೋದಲ್ಲಿ ನಾವು ಹತೋಟಿಯಲ್ಲಿಟ್ಟು ಕೊಳ್ಳಬೇಕು. ಇದನ್ನೆ ಚಿತ್ರದಲ್ಲಿ ಹೇಳಲಿಕ್ಕೆ ಪ್ರಯತ್ನ ಮಾಡಲಾಗಿದೆ ಎನ್ನುವ ಮಾಹಿತಿ‌ ಹಂಚಿಕೊಂಡರು.

ನಾಯಕ ಪ್ರೀತಂ ಮಕ್ಕಿಹಳ್ಳಿ, ನಾಯಕಿ ಕಾವ್ಯರಮೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಾರಾಗಣದಲ್ಲಿ ವಾಸು, ವಿಲಾಸ್‌ಕುಲಕರ್ಣಿ, ಗೌತಂ.ಜಿ, ಅಶೋಕ್‌ರಾವ್, ಪಿ.ಬಿ.ರಾಜುನಾಯಕ, ಶಾಂತಿ.ಎಸ್.ಗೌಡ, ಸೌಭಾಗ್ಯ, ಮೋಹನ್‌ಕುಮಾರ್, ರಘುಶ್ರೀವತ್ಸ, ಅಮೃತೇಶ್, ರೇಣುಕಗೌಡ ಮುಂತಾದವರು ನಟಿಸಿದ್ದಾರೆ.  ವಿಘ್ನೇಶ್‌ಮೆನನ್ ಸಂಗೀತ,  ಕುಮಾರ್.ಎನ್,  ಛಾಯಾಗ್ರಹಣವಿದೆ.