ನೋಟು ವಿನಿಮಯ ಆರಂಭ

ನವದೆಹಲಿ,ಮೇ೨೩- ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟು ಚಲಾವಣೆ ಹಿಂದಕ್ಕೆ ಪಡೆದಿರುವ ಭಾರತೀಯ ರಿಸರ್ವ್ ಬ್ಯಾಂಕ್ ಇಂದಿನಿಂದ ದೇಶಾದ್ಯಂತ ಅಗತ್ಯ ನಿಯಮ ಪಾಲಿಸಿ ಗರಿಷ್ಠ ಮುಖಬೆಲೆಯ ನೋಟುಗಳನ್ನು ಬ್ಯಾಂಕುಗಳಲ್ಲಿ ಠೇವಣಿ ಅಥವಾ ವಿನಿಮಯಕ್ಕೆ ಅವಕಾಶ ಮಾಡಿಕೊಟ್ಟಿದೆ.
ಇಂದಿನಿಂದ ಸೆಪ್ಟೆಂಬರ್ ೩೦ ರವರೆಗೆ ೨ ಸಾವಿರ ರೂಪಾಯಿ ನೋಟು ಬದಲಾವಣೆ ಅಥವಾ ಠೇವಣಿ ಮಾಡಲು ಸಮಯ ನೀಡಿದೆ. ನಿಯಮಗಳನ್ನು ಅನುಸರಿಸಿ ಒಮ್ಮೆಗೆ ೧೦ ನೋಟು ಅಂದರೆ ೨೦ ಸಾವಿರ ರೂಪಾಯಿ ಮೌಲ್ಯದ ೨ ಸಾವಿರ ನೋಟು ವಿನಿಮಯಕ್ಕೆ ಅವಕಾಶ ಮಾಡಿಕೊಡಲಾಗಿದೆ
೨ ಸಾವಿರ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳಲು ಆರ್‌ಬಿಐ ನಿರ್ಧರಿಸಿರುವುದರಿಂದ ನಿಧಾನವಾಗಿ ಎರಡು ಸಾವಿರ ಬೆಲೆಯ ನೋಟು ಕಣ್ಮರೆಯಾಗಲಿದೆ ಎಂದು ಹೇಳಾಗಿದೆ.
೨ಸಾವಿರ ರೂಪಾಯಿ ನೋಟು ಹೊಂದಿರುವ ಜನರು ಯಾವುದೇ ಬ್ಯಾಂಕ್‌ನಲ್ಲಿ ನೋಟು ಬದಲಾಯಿಸಿಕೊಳ್ಳಬಹುದು ಅಥವಾ ಇಂದಿನಿಂದ ತಮ್ಮ ಸ್ವಂತ ಖಾತೆಗಳಲ್ಲಿ ಠೇವಣಿ ಮಾಡಬಹುದು. ಈ ಸೌಲಭ್ಯ ಸೆಪ್ಟೆಂಬರ್ ೩೦ ರವರೆಗೆ ಲಭ್ಯವಿರುತ್ತದೆ. ಅದಾದ ನಂತರವೂ ೨ ಸಾವಿರ ರೂ. ಕರೆನ್ಸಿ ನೋಟುಗಳ ಕಾನೂನು ಬದ್ದವಾಗಿಯೇ ಇರಲಿದೆ ಎಂದು ಸರ್ಕಾರ ತಿಳಿಸಿದೆ.
ಇಂದಿನಿಂದ ಯಾವುದೇ ಬ್ಯಾಂಕ್‌ಗೆ ಹೋಗಿ ಮತ್ತು ಇತರ ಮುಖಬೆಲೆಯ ಕರೆನ್ಸಿ ನೋಟುಗಳೊಂದಿಗೆ ಒಂದೇ ಬಾರಿಗೆ ೨ ಸಾವಿರ ರೂ ನೋಟುಗಳ ೧೦ ನೋಟುಗಳನ್ನು ಬದಲಾಯಿಸಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ
ಆರ್‌ಬಿಐನ ೧೯ ಪ್ರಾದೇಶಿಕ ಕಚೇರಿಗಳಲ್ಲಿಯೂ ಕೂಡ ೨ಸಾವಿರ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಎರಡು ಸಾವಿರ ಮುಖಬೆಲೆಯ ನೋಟು ವಿನಿಮಯ ಅಥವಾ ಠೇವಣಿ ಇಡುವ ಸಮಯದಲ್ಲಿ ಅಗತ್ಯ ಮಾನದಂಡ ಅನುಸರಿಸಬೇಕು ಎಂದು ತಿಳಿಸಲಾಗಿದೆ
೨ ಸಾವಿರ ರೂ ನೋಟುಗಳನ್ನು ಜನ್ ಧನ್ ಖಾತೆ ಅಥವಾ ಮೂಲ ಉಳಿತಾಯ ಖಾತೆಯಲ್ಲಿ ಠೇವಣಿ ಮಾಡುವಾಗ. ಆರ್‌ಬಿಐ ಪ್ರಕಾರ ಬ್ಯಾಂಕ್ ಠೇವಣಿ ಖಾತೆ, ಸಾಮಾನ್ಯ ಮಿತಿಗಳು ಅನ್ವಯಿಸುತ್ತವೆ ಎಂದು ತಿಳಿಸಿದೆ.
ಸೇವೆಯಲ್ಲಿ ವ್ಯಕ್ತಿಯವಾದರೆ ದೂರುದಾರರು,ಬಾಧಿತ ಗ್ರಾಹಕರು ಮೊದಲು ಸಂಬಂಧಪಟ್ಟ ಬ್ಯಾಂಕ್ ಅನ್ನು ಸಂಪರ್ಕಿಸಬಹುದು. ಬ್ಯಾಂಕ್ ದೂರು ಸಲ್ಲಿಸಿದ ನಂತರ ೩೦ ದಿನಗಳ ಅವಧಿಯೊಳಗೆ ಪ್ರತಿಕ್ರಿಯಿಸದಿದ್ದರೆ ಅಥವಾ ದೂರುದಾರರು ತೃಪ್ತರಾಗದಿದ್ದರೆ ಬ್ಯಾಂಕ್ ನೀಡಿದಿದ್ದರೆ ದೂರುದಾರರು ರಿಸರ್ವ್ ಬ್ಯಾಂಕ್ – ಇಂಟಿಗ್ರೇಟೆಡ್ ಒಂಬುಡ್ಸ್‌ಮನ್ ಸ್ಕೀಮ್ , ೨೦೨೧ ರ ಅಡಿಯಲ್ಲಿ ಆರ್ ಬಿಐ ಯ ದೂರು ನಿರ್ವಹಣಾ ವ್ಯವಸ್ಥೆಯ ಪೋರ್ಟಲ್‌ನಲ್ಲಿ ದೂರು ಸಲ್ಲಿಸಲು ಅವಕಾಶ ಮಾಡಿಕೊಳ್ಳಲಾಗಿದೆ

ಇಂದಿನಿಂದ ಎರಡು ಸಾವಿರ ಮುಖಬೆಲೆಯ ನೋಟು ಬದಲಾವಣೆ ಅಥವಾ ಠೇವಣಿಗೆ ಅವಕಾಶ

  • ನಿಯಮ ಪಾಲನೆ ಮಾಡಿ ಬದಲಾವಣೆಗೆ ಅವಕಾಶ
  • ಒಂದು ಬಾರಿಗೆ ೧೦ ಎರಡು ಸಾವಿರ ನೋಟು ಬದಲಾವಣೆಗೆ ಮಾತ್ರ ಅವಕಾಶ
  • ಗರಿಷ್ಠ ಮಿತಿ ಒಮ್ಮೆಗೆ ೨೦,೦೦೦ ಮೀರದಂತೆ ಆರ್‌ಬಿಐ ಸೂಚನೆ
  • ಸೆಪ್ಟೆಂಬರ್ ೩೦ರ ತನಕ ಬ್ಯಾಂಕ್ ಗಳಲ್ಲಿ ಠೇವಣಿ ಅಥವಾ ನೋಟು ಬದಲಾವಣೆಗೆ ಅನುವು
  • ಕೆ ವೈ ಸಿ ನಿಯಮ ಪಾಲನೆ ಕಡ್ಡಾಯ
  • ಸೇವೆಯಲ್ಲಿ ವ್ಯಕ್ತಿಯ ಆದರೆ ಆರ್‌ಬಿಐ ಒಂಬುಡ್ಸಮ್ ಗೆ ದೂರು ನೀಡಲು ಅವಕಾಶ