ನೋಟು ಅಮಾನ್ಯ ಕೇಂದ್ರದ ಸಮರ್ಥನೆ

ನವದೆಹಲಿ,ನ.೧೭- ನಕಲಿ ಕರೆನ್ಸಿ ತಡೆ, ಲೆಕ್ಕಕ್ಕೆ ಸಿಗದ ಸಂಪತ್ತಿನ ಶೇಖರಣೆ,ಭಯೋತ್ಪಾದನೆ ಚಟುವಟಿಕೆಗಳಿಗೆ ಹಣಕಾಸು ಪೂರೈಕೆ ಸೇರಿದಂತೆ ವಿದ್ವಂಸಕ ಕೃತ್ಯಗಳಿಗೆ ಕಡಿವಾಣ ಹಾಕಲು ನೋಟು ಅಮಾನ್ಯೀಕರಣ ಮಾಡಲಾಯಿತು ಎಂದು ಕೇಂದ್ರ ಸರ್ಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.

೨೦೧೬ ರ ನವಂಬರ್ ೮ ರಂದು ೫೦೦ ಮತ್ತು ೧೦೦೦ ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣ ಮಾಡಿದ ಬಗ್ಗೆ ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿ ಸಿದ ಕೇಂದ್ರ ಸರ್ಕಾರ ತನ್ನ ಕ್ರಮವನ್ನು ಬದಲಾಗಿ ಸಮರ್ಥನೆ ಮಾಡಿಕೊಂಡಿದೆ.

ದೇಶದಲ್ಲಿ ನೋಟು ಅಮಾನ್ಯವನ್ನು ಏಕಾ ಏಕಿ ಮಾಡಲಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ನೊಂದಿಗೆ ೨೦೧೬ ಫೆಬ್ರವರಿಯಿಂದಲೇ ಸಮಾಲೋಚಿಸಲಾಗಿತ್ತು. ನಿರಂತರವಾಗಿ ೮ ತಿಂಗಳ ಬಳಿಕ ಚರ್ಚೆ ಮಾಡಿದ ಬಳಿಕ ನೋಟು ಅಮಾನ್ಯ ಮಾಡುವ ನಿರ್ದಾರ ಕೈಗೊಳ್ಳಲಾಯಿತು ಎಂದು ತಿಳಿಸಿದೆ.

ಆರ್ಥಿಕತೆಯನ್ನು ಬಲಪಡಿಸುವ ಉದ್ದೇಶದಿಂದ ಅಳೆದು ತೂಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದು ಪ್ರಮುಖ ಕ್ರಮ” ಆಗಿದೆ.. ನಕಲಿ ಕರೆನ್ಸಿ ತಡೆಗಟ್ಟುವುದು ಮೂಲ ಉದ್ದೇಶವಾಗಿತ್ತು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ನೋಟು ಅಮಾನ್ಯೀಕರಣದಿಂದ ನಕಲಿ ನೋಟುಗಳ ಕಡಿತ, ಡಿಜಿಟಲ್ ವಹಿವಾಟುಗಳಲ್ಲಿ ಹೆಚ್ಚಳ, ಲೆಕ್ಕಕ್ಕೆ ಸಿಗದ ಆದಾಯದ ಪತ್ತೆಯಂತಹ ಹಲವಾರು ಪ್ರಯೋಜನಗಳಿಗೆ ಕಾರಣವಾಗಿದೆ ಎಂದು ಕೇಂದ್ರ ಹೇಳಿದೆ.

ಡಿಜಿಟಲ್ ಪಾವತಿ ವಹಿವಾಟುಗಳ ಪ್ರಮಾಣ ೨೦೧೬ ರಲ್ಲಿ ೬೯೫೨ ಕೋಟಿ ರೂಪಾಯಿಗಳ ಮೌಲ್ಯದ ೧.೦೯ ಲಕ್ಷ ವಹಿವಾಟುಗಳಿಂದ ೨೦೨೨ ರ ಅಕ್ಟೋಬರ್ ಒಂದೇ ತಿಂಗಳಲ್ಲಿ ೧೨ ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಮೌಲ್ಯದ ೭೩೦ ಕೋಟಿ ವಹಿವಾಟುಗಳಿಗೆ ಹಲವು ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದೆ.

“ಆರ್ಥಿಕ ಬೆಳವಣಿಗೆಯ ಮೇಲೆ ನೋಟು ಅಮಾನ್ಯೀಕರಣದ ಒಟ್ಟಾರೆ ಪರಿಣಾಮ ಕ್ಷಣಿಕವಾಗಿತ್ತು, ನೈಜ ಬೆಳವಣಿಗೆ ದರ ೨೦೧೬-೧೭ ರಲ್ಲಿಶೇ. ೮.೨ ರಷ್ಟು ಮತ್ತು ೨೦ ೧೭-೧೮ ರಲ್ಲಿ ಶೇ. ೬.೮ ಆಗಿತ್ತು, ಇವೆರಡೂ ಸಾಂಕ್ರಾಮಿಕ ಪೂರ್ವ ವರ್ಷಗಳಲ್ಲಿ ಶೇ.೬.೬ ರ ದಶಕದ ಬೆಳವಣಿಗೆಯ ದರಕ್ಕಿಂತ ಹೆಚ್ಚು. “, ಎಂದು ಹಣಕಾಸು ಸಚಿವಾಲಯ ಸಲ್ಲಿಸಿದ ಅಫಿಡವಿಟ್ ಹೇಳಿದೆ.