ನೋಟುಗಳ ಮುದ್ರಣ ವ್ಯತ್ಯಾಸ ಆರೋಪ ಸುಳ್ಳು: ಆರ್‌ಬಿಐ

ಮುಂಬೈ,ಜೂ.೧೮- ದೇಶದಲ್ಲಿ ೨೦೧೫-೧೬ರ ಅವಧಿಯಲ್ಲಿ ಮುದ್ರಿಸಲಾದ ನೋಟುಗಳ ಪ್ರಮಾಣ ಮತ್ತು ಆರ್‌ಬಿಐಗೆ ಸರಬರಾಜು ಮಾಡಿದ ಮೊತ್ತದ ನಡುವಿನ ವ್ಯತ್ಯಾಸ ಬಗೆಗಿನ ವರದಿಗಳು ನಿರಾಧಾರ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೇಳಿದೆ.
ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಕೇಂದ್ರ ಬ್ಯಾಂಕ್ ಮುದ್ರಿತವಾದ ನೋಟುಗಳು ಮತ್ತು ಸರಬರಾಜ ನೋಟುಗಳ ನಡುವೆ ಯವುದೇ ವ್ಯತ್ಯಾಸ ಇಲ್ಲ. ಊಹಾಪೋಹದ ವರದಿ ಬಿತ್ತರಿಸಲಾಗುತ್ತಿದೆ ಎಂದು ಆರ್‌ಬಿಐ ಹೇಳಿದೆ.
ನೋಟು ಮುದ್ರಣಾಲಯದಿಂದ ಮಾಹಿತಿ ಹಕ್ಕು ಕಾಯಿದೆ ಅಡಿ ೨೦೦೫ ರ ಮೂಲಕ ಪಡೆದ ಮಾಹಿತಿಯ ತಪ್ಪಾದ ವ್ಯಾಖ್ಯಾನದಿಂದ ಹುಟ್ಟಿಕೊಂಡಿವೆ. ನೋಟು ಮುದ್ರಣಾಲಯದಿಮದ ಸೆಂಟ್ರಲ್ ಬ್ಯಾಂಕ್‌ಗೆ ಸರಬರಾಜು ಮಾಡಲಾದ ಎಲ್ಲಾ ನೋಟುಗಳನ್ನು ಸರಿಯಾಗಿ ಲೆಕ್ಕಹಾಕಲಾಗಿದೆ. ಎಲ್ಲವೂ ಸರಿಯಾಗಿದೆ ಎಂದು ಆರ್‍ಬಿಐ ಸ್ಪಷ್ಟಪಡಿಸಿದೆ.
ನೋಟು ಮುದ್ರಣಾಲಯಗಳಲ್ಲಿ ಮುದ್ರಿಸಲಾದ ಮತ್ತು ಆರ್‌ಬಿಐಗೆ ಸರಬರಾಜು ಮಾಡಲಾದ ನೋಟುಗಳ ಸಮನ್ವಯವನ್ನು ಖಚಿತಪಡಿಸಿಕೊಳ್ಳಲು ಹಲವು ಭದ್ರತಾ ವ್ಯವಸ್ಥೆಗಳು ಜಾರಿಯಲ್ಲಿವೆ. ಈ ವ್ಯವಸ್ಥೆಗಳು ಬ್ಯಾಂಕ್ ನೋಟುಗಳ ಉತ್ಪಾದನೆ, ಸಂಗ್ರಹಣೆ ಮತ್ತು ವಿತರಣೆಯನ್ನು ಮೇಲ್ವಿಚಾರಣೆ ಮಾಡಲು ಶಿಷ್ಟಾಚಾರ ಒಳಗೊಂಡಿರು ತ್ತದೆ. ಅದರಲ್ಲಿ ಮಾಹಿತಿ ತಪ್ಪಾಗಿರಲು ಸಾಧ್ಯವಿಲ್ಲ ಎಂದಿದೆ.
ಇಂತಹ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಬ್ಯಾಂಕ್ ಪ್ರಕಟಿಸಿದ ಮಾಹಿತಿ ಮಾತ್ರ ನಂಬಬೇಕು. ಬೇರೆ ಯಾವುದೇ ಮಾಹಿತಿಯನ್ನು ಸಾರ್ವಜನಿಕರು ನಂಬಬಾರದು ಎಂದು ಹೇಳಿದೆ. ಮುದ್ರಣಗೊಂಡ ನೋಟುಗಳ ಪ್ರಮಾಣ ಮತ್ತು ಬ್ಯಾಂಕ್‌ಗೆ ಬಂದಿರುವ ನೋಟುಗಳ ಪ್ರಮಾಣಕ್ಕೆ ವ್ಯತ್ಯಾಸವಿದೆ ಎನ್ನುವ ಸುದ್ದಿಗಳು ನಿರಾಧಾರ ಎಂದಿದೆ.