ನೋಟಬುಕ್ ವಿತರಣೆ


(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಆ.4: ಪಟ್ಟಣದ ಗುಂಜಳ ರಸ್ತೆಯಲ್ಲಿರುವ ಸರ್ಕಾರಿ ವೀರಗಂಗಾಧರ ಪ್ರೌಢಶಾಲೆಯಲ್ಲಿ ಶಾಸಕ ಡಾಕ್ಟರ್ ಚಂದ್ರ ಲಮಾಣಿ ಅವರ ಜನ್ಮದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿಚಾರಿಸಲಾಯಿತು.
ಶಾಸಕ ಚಂದ್ರು ಲಮಾಣಿ ಅವರು ಮಾತನಾಡಿ ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾಗಿದ್ದು ಪ್ರತಿ ಸೆಕೆಂಡು ಸಹ ವಿದ್ಯಾರ್ಥಿಗಳಿಗೆ ಮಹತ್ವದ್ದಾಗಿರುತ್ತದೆ ತಾವು ಕೂಡ ವಿದ್ಯಾರ್ಥಿಯಾಗಿದ್ದಾಗ ಅನೇಕ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ ಜೀವನದಲ್ಲಿ ಈ ಮಟ್ಟಕ್ಕೆ ಬೆಳೆಯಲು ಹೆತ್ತವರ ಮತ್ತು ಹಿರಿಯರ ಆಶೀರ್ವಾದವೇ ಕಾರಣವಾಗಿದೆ.
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಯಾವ ತಂದೆ ತಾಯಿಗಳು ಮಕ್ಕಳ ಭವಿಷ್ಯಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡು ಜೀವನ ಮುಡ್ಪಾಗಿಟ್ಟಿರುತ್ತಾರೋ ಅದರ ಋಣ ತೀರಿಸುವುದು ಮಕ್ಕಳ ಕರ್ತವ್ಯವಾಗಿದೆ ಆದ್ದರಿಂದ ಮಕ್ಕಳು ಶಾಲಾ ಪಠ್ಯಗಳೊಂದಿಗೆ ನೈತಿಕತೆಯನ್ನು ಬೆಳೆಸಿಕೊಂಡು ಜೀವನದ ಘಟ್ಟವನ್ನು ತಲುಪಲು ಸತತ ಪರಿಶ್ರಮ ಪ್ರಯತ್ನಗಳನ್ನು ಪಟ್ಟು ಕಲಿತ ಶಾಲೆಗೂ ಹೆತ್ತ ತಂದೆ ತಾಯಿಗಳಿಗೂ ಕೀರ್ತಿ ತರುವ ನಿಟ್ಟಿನಲ್ಲಿ ಮಕ್ಕಳು ಮುಂದಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆಸಿಸಿ ಬ್ಯಾಂಕ್ ನಿರ್ದೇಶಕ ಸುನಿಲ್ ಮಹಾಂತ ಶೆಟ್ಟರ್ ಬಿಜೆಪಿ ಯುವ ಮುಖಂಡ ವಿಜಯ ಹಕ್ಕಿಹಾಳ ನಿಂಗಪ್ಪ ಬನ್ನಿ ಎಸ್ ಡಿ ಎಂ ಸಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು ಶಾಲಾ ಮುಖ್ಯೋಪಾಧ್ಯಾಯರು ಸೇರಿದಂತೆ ಅನೇಕರು ಇದ್ದರು.