ನೋಟಬುಕ್ ವಿತರಣೆ ಕಾರ್ಯಕ್ರಮ

ಗದಗ, ಜ. 10 : ಗದಗ ಜಿಲ್ಲೆ ಗದಗ ತಾಲೂಕಿನ ಹೊಸೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೋಟಬುಕ್ ಹಾಗೂ ಪೆನ್ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅಧ್ಯಕ್ಷತೆಯನ್ನು ಗದಗ ಗ್ರಾಮೀಣ ವಲಯದ ಬಿ.ಇ.ಓ.ವಿ.ವಿ.ನಡುವಿನಮನಿ ಅವರು ವಹಿಸಿಕೊಂಡು 120 ಶಾಲಾ ಮಕ್ಕಳಿಗೆ ನೋಟಬುಕ್ ಪೆನ್ ವಿತರಣೆ ಮಾಡಿ ಮಾತನಾಡಿದ ಅವರು ರೋಟರಿ ಸಂಸ್ಥೆಯ ಈ ಕಾರ್ಯವನ್ನು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ರೋಟರಿ ಕ್ಲಬ್ ಅಧ್ಯಕ್ಷ ನರೇಶ ಜೈನ್ ಅವರು ಮಾತನಾಡಿ ರೋಟರಿ ಕ್ಲಬ್ 120 ವರ್ಷಗಳ ಕಾರ್ಯಕ್ರಮ ಪಟ್ಟಿಯನ್ನು ವಿವರಿಸಿದರು. ಇನ್ನೋರ್ವ ಅತಿಥಿಗಳಾಗಿ ಪಾಲ್ಗೊಂಡ ಕೊಟ್ರೇಶ ವಿಭೂತಿ ಅಕ್ಷರ ದಾಸೋಹ ತಾಲೂಕು ಅಧಿಕಾರಿಗಳು ಪಾಲ್ಗೊಂಡು ರೋಟರಿ ಸಂಸ್ಥೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅದರಲ್ಲಿ ಮಕ್ಕಳಿಗೆ ನೋಟಬುಕ್ ವಿತರಣೆ ಕಾರ್ಯವು ಸಹ ಒಂದಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು. ನೋಟಬುಕ್‍ಗಳನ್ನು ವಿನೋದ ಮೋತಾ ದಾನವಾಗಿ ಕೊಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‍ನ ಅಧ್ಯಕ್ಷ ನರೇಶ ಜೈನ್ ಹಾಗೂ ಖಜಾಂಚಿ ಎಸ್. ಎಸ್. ಹೊಸಳ್ಳಿಮಠ ಸನ್ಮಾನ ಮಾಡಿ ಗೌರವಿಸಿದರು.
ಆಯ್.ಎ.ಗಾಡಗೋಳಿ, ಸುವರ್ಣ ಚವಡಿ, ರವಿ ಪೂಜಾರ, ವಿಶ್ವನಾಥ ಬಡಿಗೇರ, ಎಂ.ಜಿ.ಮಳ್ಳೂರ, ಎಸ್.ಡಿ.ಭಜಂತ್ರಿ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಎಸ್.ಡಿ.ಎಂ.ಸಿ ಅಧ್ಯಕ್ಷ ಶರಣಪ್ಪ ತಳವಾರ, ಯಲ್ಲಪ್ಪ ಕಲ್ಯಾಣಿ ಹಾಗೂ ಈರಪ್ಪ ಕಲ್ಯಾಣಿ, ಅಮೃತ ಸಣ್ಣಗೌಡ್ರ, ಮಲ್ಲಿಕಾರ್ಜುನ ಪುಠಾಣಿ, ಆನಂದ ಯಳವತ್ತಿ ಉಪಸ್ಥಿತರಿದ್ದರು.